ದಿನ ರಾತ್ರಿಯಾದರೆ ಸಾಕು ಜನರು ಟಿವಿ ಮುಂದೆ ಕುಳಿತುಕೊಂಡು ಬಿಗ್ ಬಾಸ್ ಕಾರ್ಯಕ್ರಮವನ್ನ ನೋಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಜನರು ತಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡುವ ಮೂಲಕ ಅವರಿಗೆ ಪ್ರೋತ್ಸಹ ನೀಡುತ್ತಿದ್ದಾರೆ. ಇನ್ನು ಈಗಾಗಲೇ ಬಿಗ್ ಬಾಸ್ ನಿಂದ ಮೂರೂ ಜನ ಸ್ಪರ್ಧಿಗಳು ಹೊರಗೆ ಬಂದಿದ್ದು ನಿಮಗೆಲ್ಲ ಗೊತ್ತೇ ಇದೆ, ಹೌದು ಈಗಾಗಲೇ ಗುರೂಜಿ, ಚೈತ್ರ ವಾಸುದೇವನ್ ಮತ್ತು ದುನಿಯಾ ರಶ್ಮಿ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಈಗ ಬಿಗ್ ಬಾಸ್ ಕನ್ನಡ ಸೀಸನ್ 7 ತನ್ನ ನಾಲ್ಕು ವಾರಗಳ ಪಯಣವನ್ನ ಮುಗಿಸಿದ್ದು ಈಗ ಇನ್ನೊಬ್ಬರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ, ಇನ್ನು ಈ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಾರೆ ಎಂದು ಯಾರು ಊಹೆ ಮಾಡಿರಲಿಲ್ಲ.

ಹಾಗಾದರೆ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಇನ್ನೊಬ್ಬ ಸ್ಪರ್ಧಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಸ್ಪರ್ಧಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಆರಂಭದಲ್ಲಿ ಬಿಸ್ ಬಾಸ್ ತಣ್ಣನೆ ಮತ್ತು ಕೂಲ್ ಆಗಿ ಇದ್ದಿತ್ತು ಆದರೆ ವಾರಗಳು ಕಳೆಯುತ್ತಿದ್ದಂತೆ ಬಿಗ್ ಬಾಸ್ ಒಬ್ಬೊಬ್ಬರನ್ನೇ ಮನೆಯಿಂದ ಆಚೆ ಹಾಕುತ್ತಿದೆ, ಹೌದು ಒಬ್ಬರಾದ ಮೇಲೆ ಒಬ್ಬರು ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಿದ್ದು ಬಲಿಷ್ಠ ಆಟಗಾರರು ಬಿಸ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದಾರೆ.

Big Bood 7 elimination

ಇನ್ನು ಮನೆಯಲ್ಲಿ ಈಗ ಗುಂಪುಗಳು ಹುಟ್ಟಿಕೊಳ್ಳುತ್ತಿದ್ದು ಈಗಾಗಲೇ ಮೂರೂ ಗುಂಪುಗಳು ಮನೆಯಲ್ಲಿ ಹುಟ್ಟಿಕೊಂಡಿದೆ ಮತ್ತು ಮನೆಯ ಒಳಗಡೆ ಒಬ್ಬರನ್ನ ಕಂಡರೆ ಒಬ್ಬರಿಗೆ ಆಗದಂತ ಪರಿಸ್ಥಿತಿ ಮನೆಯಲ್ಲಿ ನಿರ್ಮಾಣ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ವಾರ ಬಹಳ ಉತ್ತಮವಾಗಿ ಆಟವಾಡಿದ ಚಂದನ ಅವರನ್ನ ನಾಯಕಿ ಅನೌನ್ಸ್ ಮಾಡಲಾಯಿತು, ಇನ್ನು ಈ ವಾರ ಮನೆಯಿಂದ ಆಚೆ ಹೋಗಲು ಏಳು ಜನರನ್ನ ನೊಮಿನೇಟ್ ಕೂಡ ಮಾಡಲಾಗಿತ್ತು. ಇನ್ನು ಈ ಏಳು ಜನರಲ್ಲಿ ಮೊದಲಿಗೆ ದೀಪಿಕಾ ದಾಸ್, ಶೈನ್ ಶೆಟ್ಟಿ, ಭೂಮಿ ಶೆಟ್ಟಿ ಮತ್ತು ಪ್ರಿಯಾಂಕಾ ಸೇಫ್ ಆಗಿದ್ದಾರೆ ಮತ್ತು ರಾಜು ತಾಳಿಕೋಟೆ ಅವರಿಗೆ ಉತ್ತರ ಕರ್ನಾಟಕದವರ ಬೆಂಬಲ ಇದ್ದು ಅವರು ಕೂಡ ಸೇಫ್ ಆಗಿದ್ದಾರೆ ಮತ್ತು ಚಂದನ್ ಆಚಾರ್ ಸೇಫ್ ಆಗಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.

ಇನ್ನು ಆ ಏಳು ಜನರಲ್ಲಿ ಈಗ ಉಳಿದಿರುವುದು ಚೈತ್ರ ಕೊಟ್ಟೂರ್ ಮಾತ್ರ, ಇನ್ನು ವೋಟಿಂಗ್ ಲೈನ್ ಗಳು ನೈನ್ ರಾತ್ರಿನೇ ಮುಗಿದಿದ್ದು ಈಗ ಬಂದಿರುವ ಮಾಹಿತಿಯ ಪ್ರಕಾರ ಅತೀ ಕಡಿಮೆ ಮತವನ್ನ ಪಡೆದ ಬಿಗ್ ಬಾಸ್ ಮನೆಯಿಂದ ಚೈತ್ರ ಕೊಟ್ಟೂರ್ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇಲ್ಲಿಗೆ ಬಿಗ್ ಬಾಸ್ ಮನೆಯ 5 ನೇ ಸ್ಪರ್ಧಿ ಮನೆಯಿಂದ ಆಚೆ ಬಂದಿದ್ದಾರೆ, ಸ್ನೇಹಿತರೆ ನಿಮ್ಮ ಪ್ರಕಾರ ಈ ವಾರ ಮನೆಯಿಂದ ಯಾರು ಆಚೆ ಬರಬೇಕಿತ್ತು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Big Bood 7 elimination

Please follow and like us:
error0
http://karnatakatoday.in/wp-content/uploads/2019/11/Chaitra-Kottur-elimination-1024x576.jpghttp://karnatakatoday.in/wp-content/uploads/2019/11/Chaitra-Kottur-elimination-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲದಿನ ರಾತ್ರಿಯಾದರೆ ಸಾಕು ಜನರು ಟಿವಿ ಮುಂದೆ ಕುಳಿತುಕೊಂಡು ಬಿಗ್ ಬಾಸ್ ಕಾರ್ಯಕ್ರಮವನ್ನ ನೋಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಜನರು ತಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡುವ ಮೂಲಕ ಅವರಿಗೆ ಪ್ರೋತ್ಸಹ ನೀಡುತ್ತಿದ್ದಾರೆ. ಇನ್ನು ಈಗಾಗಲೇ ಬಿಗ್ ಬಾಸ್ ನಿಂದ ಮೂರೂ ಜನ ಸ್ಪರ್ಧಿಗಳು ಹೊರಗೆ ಬಂದಿದ್ದು ನಿಮಗೆಲ್ಲ ಗೊತ್ತೇ ಇದೆ, ಹೌದು ಈಗಾಗಲೇ ಗುರೂಜಿ, ಚೈತ್ರ ವಾಸುದೇವನ್ ಮತ್ತು ದುನಿಯಾ ರಶ್ಮಿ ಅವರು ಬಿಗ್ ಬಾಸ್...Film | Devotional | Cricket | Health | India