ಕನ್ನಡದಲ್ಲಿ ಕಿಚ್ಚ ಸುದೀಪ ಸಾರಥ್ಯದ ರಿಯಾಲಿಟಿ ಷೋ ಬಿಗ್ ಬಾಸ್ ಕಳೆದ 6 ವರ್ಷಗಳಿಂದ ಜನರ ಮನಗೆದ್ದಿದೆ. ಮನೆ ಮಂದಿಯೆಲ್ಲ ಕೂತು ನೋಡುವ ಈ ಕುತೂಹಲ ಭರಿತ ಶೋಗೆ ಜನರು ಫಿದಾ ಆಗಿದ್ದರೆ. ಇನ್ನು ಈ ಬಾರಿ ನಡೆಯುತ್ತಿರುವುದು ಬಿಗ್ ಬಾಸ್ ಏಳನೇ ಆವೃತ್ತಿ. ಎಲ್ಲ ಆವೃತ್ತಿಯಂತೆ ಈ ಸೀಸನ್ ನಲ್ಲೂ ಕೂಡ ಬಿಗ್ ಬಾಸ್ ಬಹಳ ಭರ್ಜರಿಯಾಗಿ ಮೂಡಿಬರಲಿದೆ. ಇನ್ನು ಇದರಲ್ಲಿ ಟ್ವಿಸ್ಟ್ , ಟಾಸ್ಕ್ ಹಾಗು ರೋಚಕ ತಿರುವುಗಳು ಜನರಿಗೆ ಭರ್ಜರಿ ಮನರಂಜನೆ ನೀಡುವುದರಲ್ಲಿ ಎರಡು ಮಾತಿಲ್ಲ. ಸದ್ಯಕ್ಕೆ ಬಿಗ್ ಬಾಸ್ ಕನ್ನಡದ ಹೊಸ ಸೀಸನ್ ಗೆ ಕ್ಷಣಗಣನೆ ಆರಂಭವಾಗಿದೆ.

ಎಲ್ಲ ಸೀಸನ್ ಆರಂಭಕ್ಕೂ ಮುನ್ನ ಇರುವ ಕುತೂಹಲ ಒಂದೇ, ಅದುವೇ ಷೋ ನಲ್ಲಿ ಭಾಗವಹಿಸುತ್ತಿರುವ ಸೆಲೆಬ್ರೆಟಿಗಳು ಯಾರು ಹಾಗು ಸಾಮಾನ್ಯರು ಯಾರೆಂದು. ಇನ್ನು ಶೋನಲ್ಲಿ ಈ ಸಲ ಯಾವ ಸಾಮಾನ್ಯ ವ್ಯಕ್ತಿಯೂ ಕೂಡ ಇರುವುದಿಲ್ಲ ಎಂದು ಬಿಗ್ ಬಾಸ್ ಟೀಮ್ ಈಗಾಗಲೇ ಸ್ಪಷ್ಟಪಡಿಸಿದೆ. ಹೀಗಾಗಿ ಅಂತಿಮ ಬಿಗ್ ಬಾಸ್ ಸ್ಪರ್ದಿಗಳ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪಟ್ಟಿ ಬಹುತೇಕ ಸಂಭವನೀಯ ಎನ್ನಬಹುದು. ಇಷ್ಟಕ್ಕೂ ರಹಸ್ಯ ಮನೆಯ ಒಳಗಡೆ ಬರುತ್ತಿರುವ ಆ ಮನೆಯ ಸದಸ್ಯರ ಹೆಸರು ಹೀಗಿವೆ.

ಮೊದಲ ಹೆಸರು ಎಸ್ ನಾರಾಯಣ್ ಪುತ್ರ ಪಂಕಜ್, ಹಾಗೆ ಖ್ಯಾತ ಸಿನೆಮಾ ದುನಿಯಾ ಚಿತ್ರದ ಹೀರೋಯಿನ್ ರಶ್ಮಿ, ನಿರೂಪಕಿ ಚೈತ್ರ ವಾಸುದೇವನ್, ಜನಪ್ರಿಯ ಧಾರಾವಾಹಿ ರಾಧಾ ರಮಣ ವಿಲನ್ ಸುಜಾತ. ಇನ್ನು ಎರಡನೇ ಸಾಲಿನ ಸಂಭಾವ್ಯರ ಪಟ್ಟಿಯಲ್ಲಿ ಮಜಾ ಟಾಕೀಸ್ ಕುರಿ ಪ್ರತಾಪ್, ನಟ ಜೈ ಜಗದೀಶ್, ಕಿನ್ನರಿಯ ಭೂಮಿ ಶೆಟ್ಟಿ, ನಾಗಿಣಿ ಧಾರಾವಾಹಿಯ ಭೂಮಿ ದೀಪಿಕಾ. ಸದ್ಯಕ್ಕೆ ಇವರೆಲ್ಲರ ಹೆಸರು ಬಿಗ್ ಬಾಸ್ ಪಟ್ಟಿಯಲ್ಲಿ ಕಾಣಸಿಗುತ್ತಿದೆ. ಇನ್ನು ಷೋ ಆರಂಭಕ್ಕೂ ಮುನ್ನವೇ ಮೊದಲ ಸ್ಪರ್ಧಿಯ ಹೆಸರು ಲೀಕ್ ಆಗಿದೆ ಎನ್ನಬಹುದು, ಈ ಖಡಕ್ ಸ್ಪರ್ದಿ ನೀಡಿರುವ ಹೇಳಿಕೆ ಇದೀಗ ಇವರು ಬಿಗ್ ಬಾಸ್ ಪ್ರವೇಶ ಮಾಡಿದ್ದಾರೆ ಎನ್ನಬಹುದು ಹಾಗಿದ್ರೆ ಯಾರಿದು ಗೊತ್ತಾ, ಖ್ಯಾತ ಪತ್ರಕರ್ತ ರವಿ ಬೆಳೆಗರೆ.

ರವಿ ಬೆಳಗೆರೆ ಹಾಕಿರುವ ಫೇಸ್‌ಬುಕ್ ಸ್ಟೇಟಸ್ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. “ಪ್ರಿಯರೆ, ನಾನು ಕೆಲವಷ್ಟು ದಿನಗಳ ತನಕ ನಿಗೂಢ ಲೋಕಕ್ಕೆ ಹೋಗುತ್ತಿದ್ದೇನೆ, ಹೀಗಾಗಿ ಕೆಲಕಾಲ ನಾನು ಫೋನ್‌ಗೆ, ಫೇಸ್‌ಬುಕ್‌ಗೆ ಆಫೀಸಿನಲ್ಲಿನ ಭೇಟಿಗೆ ಸಿಗುವುದಿಲ್ಲ. ನಿಗೂಢವಾಸ ಮುಗಿದಮೇಲೆ ಸಿಗುತ್ತೇನೆ” ಎಂದಿದ್ದಾರೆ ರವಿ ಬೆಳಗೆರೆ. ಷೋ ಭಾಗವಹಿಸುವ ಸ್ಪರ್ದಿಗಳ ಗೌಪ್ಯತೆ ಕಾಪಾಡಲು ಬಿಗ್ ಬಾಸ್ ಟೀಮ್ ಸಾಕಷ್ಟು ಕಷ್ಟಪಡುತ್ತದೆ, ಎಲ್ಲಿಯೂ ಕೂಡ ಈ ಬಗ್ಗೆ ಹೇಳಿಕೊಳ್ಳುವುದಿಲ್ಲ.

ಇದೇ ಕಾರಣಕ್ಕೋ ಏನೋ ಸದ್ಯಕ್ಕೆ ಈ ಪೋಸ್ಟ್ ಈಗ ಡಿಲೀಟ್ ಮಾಡಿದ್ದಾರೆ ರವಿ. 7ನೇ ಆವೃತ್ತಿಗೂ ಖ್ಯಾತ ನಟ ಕಿಚ್ಚ ಸುದೀಪ್ ಅವರೇ ನಿರೂಪಕರಾಗಲಿದ್ದು, ಕಳೆದೆರಡು ವರ್ಷಗಳ ಕಾಲ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗಿದ್ದ ಬೃಹತ್ ರಿಯಾಲಿಟಿ ಶೋ ಮತ್ತೆ ಕಲರ್ಸ್ ಕನ್ನಡಕ್ಕೆ ಮರಳಿದೆ 17 ಸ್ಪರ್ಧಿಗಳು 100 ದಿನಗಳ ಕಾಲ ದೊಡ್ಡ ಮನೆಯಲ್ಲಿ ಹೊರಪ್ರಪಂಚದ ಸಂಪರ್ಕವಿಲ್ಲದೆ ಕಾಲ ಕಳೆಯಲಿದ್ದಾರೆ.

Please follow and like us:
error0
http://karnatakatoday.in/wp-content/uploads/2019/10/kannada-big-boss-1024x576.pnghttp://karnatakatoday.in/wp-content/uploads/2019/10/kannada-big-boss-150x104.pngKarnataka Trendingಚಲನಚಿತ್ರಕನ್ನಡದಲ್ಲಿ ಕಿಚ್ಚ ಸುದೀಪ ಸಾರಥ್ಯದ ರಿಯಾಲಿಟಿ ಷೋ ಬಿಗ್ ಬಾಸ್ ಕಳೆದ 6 ವರ್ಷಗಳಿಂದ ಜನರ ಮನಗೆದ್ದಿದೆ. ಮನೆ ಮಂದಿಯೆಲ್ಲ ಕೂತು ನೋಡುವ ಈ ಕುತೂಹಲ ಭರಿತ ಶೋಗೆ ಜನರು ಫಿದಾ ಆಗಿದ್ದರೆ. ಇನ್ನು ಈ ಬಾರಿ ನಡೆಯುತ್ತಿರುವುದು ಬಿಗ್ ಬಾಸ್ ಏಳನೇ ಆವೃತ್ತಿ. ಎಲ್ಲ ಆವೃತ್ತಿಯಂತೆ ಈ ಸೀಸನ್ ನಲ್ಲೂ ಕೂಡ ಬಿಗ್ ಬಾಸ್ ಬಹಳ ಭರ್ಜರಿಯಾಗಿ ಮೂಡಿಬರಲಿದೆ. ಇನ್ನು ಇದರಲ್ಲಿ ಟ್ವಿಸ್ಟ್ , ಟಾಸ್ಕ್ ಹಾಗು...Film | Devotional | Cricket | Health | India