ಸ್ನೇಹಿತರೆ ಬಿಗ್ ಬಾಸ್ ಸೀಸನ್ 7 ತಿಂಗಳು 13 ರಂದು ಆರಂಭ ಆಗಲಿದೆ ಮತ್ತು ಈಗಾಗಲೇ ಪ್ರೊಮೊ ಕೂಡ ಬಿಡುಗಡೆಯಾಗಿದೆ, ಬಿಗ್ ಬಾಸ್ 7 ಇನ್ನೇನು ಎರಡೇ ದಿನಗಳಲ್ಲಿ ಭರ್ಜರಿ ಆರಂಭವನ್ನ ಪಡೆದುಕೊಳ್ಳಲಿದೆ. ಇನ್ನು ಈ ಭಾರಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾರೆಲ್ಲ ಸ್ಪರ್ದಿಗಳು ಭಾಗವಹಿಸುತ್ತಾರೆ ಅನ್ನುವ ಕೂತುಹಲ ಎಲ್ಲರಲ್ಲೂ ಮೂಡಿದೆ ಮತ್ತು ಅದಕ್ಕೆ ಉತ್ತರ ಇದೆ ಭಾನುವಾರ ನಿಮಗೆಲ್ಲ ಸಿಗಲಿದೆ. ಇನ್ನು ಈಗ ಎಲ್ಲೆಡೆ ಚರ್ಚೆಯಾಗುತ್ತಿರುವ ವಿಷಯ ಏನು ಅಂದರೆ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮವನ್ನ ನಡೆಸಿಕೊಡಲು ಎಷ್ಟು ಸಂಭಾವನೆಯನ್ನ ಪಡೆಯುತ್ತಾರೆ ಅನ್ನುವುದು.

ಹಾಗಾದರೆ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಎಷ್ಟು ಸಂಭಾವನೆಯನ್ನ ಪಡೆಯುತ್ತಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಭಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಿಮ್ಮ ಇಷ್ಟದ ಸ್ಪರ್ದಿ ಯಾರು ಅನ್ನುವುದರ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಸ್ನೇಹಿತರೆ ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ಕಾರ್ಯಕ್ರಮವನ್ನ ನಡೆಸಿಕೊಟ್ಟರೆ ಕನ್ನಡದಲ್ಲಿ ಸುದೀಪ್ ಅವರು ಬಿಗ್ ಕಾರ್ಯಕ್ರಮವನ್ನ ನಡೆಸಿಕೊಡುತ್ತಾರೆ, ಇನ್ನು ಸಲ್ಮಾನ್ ಖಾನ್ ಅವರಂತೆ ಸುದೀಪ್ ಅವರು ಕೂಡ ಬಿಗ್ ಬಾಸ್ ಕಾರ್ಯಕ್ರಮಕ್ಕೆ ದೊಡ್ಡ ಮೊತ್ತದ ಸಂಭಾವನೆಯನ್ನ ಪಡೆಯುತ್ತಾರೆ ಅನ್ನುವುದು ಮಾಹಿತಿಗಳಿಂದ ತಿಳಿದು ಬಂದಿದೆ ಮತ್ತು ಇದರ ಕುರಿತು ನಿಖರವಾದ ಮಾಹಿತಿ ಇನ್ನು ತಿಳಿದು ಬಂದಿಲ್ಲ.

Big Boss Season 7

ಇನ್ನು ಬಂದಿರುವ ಮಾಹಿತಿಯ ಪ್ರಕಾರ ಕಿಚ್ಚ ಸುದೀಪ್ ಅವರು ಐದು ಸೀಸನ್ ಗಳಿಗೆ ಒಪ್ಪಂದವನ್ನ ಮಾಡಿಕೊಂಡು ಕಾರ್ಯಕ್ರಮವನ್ನ ನಡೆಸುತ್ತಿದ್ದಾರೆ ಮತ್ತು ಸುದೀಪ್ ಅವರು ಒಂದು ಸೀಸನ್ ಗೆ ಬರೋಬ್ಬರಿ 4 ಕೋಟಿ ರೂಪಾಯಿ ಸಂಭಾವನೆಯನ್ನ ಪಡೆಯುತ್ತಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಹೌದು ಬಿಗ್ ಬಾಸ್ ಕಾರ್ಯಕ್ರಮವನ್ನ ನಡೆಸಿಕೊಡಲು ಸುದೀಪ್ ಅವರು ಕಲರ್ಸ್ ವಾಹಿನಿಯ ಜೊತೆ ಐದು ವರ್ಷದ ಒಪ್ಪಂದವನ್ನ ಮಾಡಿಕೊಂಡಿದ್ದಾರೆ ಮತ್ತು 2015 ರಲ್ಲಿ ಈ ಒಪ್ಪಂದ ನಡೆದಿದ್ದು ಸೀಸನ್ 8 ರ ತನಕ ಈ ಒಪ್ಪಂದ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ.

ಒಂದು ಸೀಸನ್ 4 ಕೋಟಿಯಂತೆ 5 ವರ್ಷದ ಬಿಗ್ ಬಾಸ್ ಒಪ್ಪಂದಂಕ್ಕೆ ಸುದೀಪ್ ಅವರು ಬರೋಬ್ಬರಿ 20 ಕೋಟಿ ರೂಪಾಯಿ ಸಂಭಾವನೆಯನ್ನ ಪಡೆಯುತ್ತಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ತಮ್ಮ ಅದ್ಭುತವಾದ ಮತ್ತು ಸರಳವಾದ ನಿರೂಪಣೆಯ ಮೂಲಕ ಬಿಗ್ ಬಾಸ್ ಕಾರ್ಯಕ್ರಮವನ್ನ ತುಂಬಾ ಎತ್ತರಕ್ಕೆ ಕರೆದುಕೊಂಡು ಹೋಗಿದ್ದಾರೆ ಸುದೀಪ್ ಅವರು, ಇನ್ನು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವೀಕೆಂಡ್ ನಲ್ಲಿ ಕಾಣಿಸಿಕೊಳ್ಳುವ ಸುದೀಪ್ ಅವರಿಗಾಗಿ ಅಭಿಮಾನಿಗಳು ಮತ್ತು ಸ್ಪರ್ದಿಗಳು ಕಾಯುತ್ತ ಇರುತ್ತಾರೆ. ಇನ್ನು ಸುದೀಪ್ ಅವರನ್ನ ಬಿಟ್ಟರೆ ಬಿಗ್ ಬಾಸ್ ಕಾರ್ಯಕ್ರಮವನ್ನ ಬೇರೆ ಯಾರು ನಡೆಸಿಕೊಡಲು ಸಾಧ್ಯ ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ, ಸ್ನೇಹಿತರೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಅವರ ನಿರೂಪಣೆಯ ಬಗ್ಗೆ ನಿಮ್ಮ ಅಭಿಪಾಯವನ್ನ ನಮಗೆ ತಿಳಿಸಿ.

Big Boss Season 7

Please follow and like us:
error0
http://karnatakatoday.in/wp-content/uploads/2019/10/Big-Boss-Season-7-1-1024x576.jpghttp://karnatakatoday.in/wp-content/uploads/2019/10/Big-Boss-Season-7-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ಬಿಗ್ ಬಾಸ್ ಸೀಸನ್ 7 ತಿಂಗಳು 13 ರಂದು ಆರಂಭ ಆಗಲಿದೆ ಮತ್ತು ಈಗಾಗಲೇ ಪ್ರೊಮೊ ಕೂಡ ಬಿಡುಗಡೆಯಾಗಿದೆ, ಬಿಗ್ ಬಾಸ್ 7 ಇನ್ನೇನು ಎರಡೇ ದಿನಗಳಲ್ಲಿ ಭರ್ಜರಿ ಆರಂಭವನ್ನ ಪಡೆದುಕೊಳ್ಳಲಿದೆ. ಇನ್ನು ಈ ಭಾರಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾರೆಲ್ಲ ಸ್ಪರ್ದಿಗಳು ಭಾಗವಹಿಸುತ್ತಾರೆ ಅನ್ನುವ ಕೂತುಹಲ ಎಲ್ಲರಲ್ಲೂ ಮೂಡಿದೆ ಮತ್ತು ಅದಕ್ಕೆ ಉತ್ತರ ಇದೆ ಭಾನುವಾರ ನಿಮಗೆಲ್ಲ ಸಿಗಲಿದೆ. ಇನ್ನು ಈಗ ಎಲ್ಲೆಡೆ ಚರ್ಚೆಯಾಗುತ್ತಿರುವ ವಿಷಯ...Film | Devotional | Cricket | Health | India