ಜನರು ರಾತ್ರಿಯಾದರೆ ಸಾಕು ಟಿವಿ ಮುಂದೆ ಕುಳಿತುಕೊಂಡು ಬಿಗ್ ಬಾಸ್ ಕಾರ್ಯಕ್ರಮವನ್ನ ನೋಡುತ್ತಾರೆ, ಇನ್ನು ಪ್ರೇಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿ ಬಿಗ್ ಬಾಸ್ ನಲ್ಲಿ ಉಳಿದುಕೊಳ್ಳುವ ಸಲುವಾಗಿ ಅವರಿಗೆ ವೋಟ್ ಮಾಡುತ್ತಾರೆ. ಇನ್ನು ಕಳೆದ ವಾರದ ಚೈತ್ರ ವಾಸುದೇವನ್ ಅವರು ಎಲಿಮಿನೇಟ್ ಆಗುವುದರ ಮೂಲಕ ತಮ್ಮ ಆಟವನ್ನ ಮುಗಿಸಿದ್ದರು, ಇನ್ನು ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಅನ್ನುವುದರ ಬಗ್ಗೆ ಕುತೂಹಲ ಎಲ್ಲರಲ್ಲೂ ಮೂಡಿತ್ತು ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ವಾರ ವಾಸುಕಿ ವೈಭವ್, ಪ್ರಿಯಾಂಕಾ, ರಾಜು ತಾಳಿಕೋಟೆ, ದುನಿಯಾ ರಶ್ಮಿ ಹಾಗು ಎಲಿಮಿನೇಷನ್ ಗೆ ನೊಮಿನೇಟ್ ಆಗಿದ್ದರು, ಇನ್ನು ರಾತ್ರಿ ವಾಸುಕಿ ವೈಭವ್ ಮತ್ತು ಪ್ರಿಯಾಂಕಾ ಅವರನ್ನ ಬಿಗ್ ಬಾಸ್ ಆಟದಲ್ಲಿ ಉಳಿಸಿಕೊಂಡಿದ್ದರು ಸುದೀಪ್ ಅವರು.

ಹಾಗಾದರೆ ಉಳಿದ ಮೂರೂ ಸ್ಪರ್ಧಿಗಳಲ್ಲಿ ಬಿಗ್ ಬಾಸ್ ನಿಂದ ಆಚೆ ಬಂದ ಸ್ಪರ್ಧಿ ಯಾರು ಗೊತ್ತಾ, ಇನ್ನು ಈ ಸ್ಪರ್ಧಿ ಆಚೆ ಬರುತ್ತಾರೆ ಎಂದು ಯಾರು ಕೂಡ ಊಹೆ ಮಾಡಿರಲು ಸಾಧ್ಯವಿಲ್ಲ. ಮೊದಲ ವಾರ ಗುರುಲಿಂಗ ಸ್ವಾಮಿಗಳು, ಎರಡನೆಯ ವಾರ ಚೈತ್ರ ವಾಸುದೇವನ್ ಮತ್ತು ಮೂರನೇ ವಾರ ತನ್ನ ಆಟವನ್ನ ಮುಗಿಸಿ ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುವ ಸ್ಪರ್ಧಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಸ್ಪರ್ಧಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Big boss this week elimination

ಹೌದು ಸ್ನೇಹಿತರೆ ಮೂರನೆಯ ವಾರ ಬಿಗ್ ಬಾಸ್ ಕಾರ್ಯಕ್ರಮದಿಂದ ಆಚೆ ಬಂದಿರವ ಸ್ಪರ್ಧಿ ದುನಿಯಾ ರಶ್ಮಿ ಅನ್ನುವ ಮಾಹಿತಿ ಹೊರಬಂದಿದೆ. ದುನಿಯಾ ರಶ್ಮಿ ಅವರಿಗೆ ಮೂಗು ತುದಿಯಲ್ಲಿ ಕೋಪ ಮತ್ತು ಯಾರಾದರೂ ತಮಾಷೆಗಾಗಿ ಕಾಲೆಳೆದರು ದುನಿಯಾ ರಶ್ಮಿ ಅವರು ಬೇಗ ಕೋಪ ಮಾಡಿಕೊಳ್ಳುತ್ತಾರೆ ಮತ್ತು ಇದರ ಜೊತೆಗೆ ಹೆಚ್ಚು ಅಳುತ್ತಾರೆ ಅನ್ನುವ ಅಭಿಪ್ರಾಯ ರಶ್ಮಿ ಅವರ ಮೇಲೆ ಇದೆ. ಇನ್ನು ಕ್ಯಾಪ್ಟನ್ ಆಗಿ ಒಳ್ಳೆಯ ಆಟವನ್ನ ಆಡಿದ ದುನಿಯಾ ರಶ್ಮಿ ಅವರು ನಂತರದ ದಿನಗಳಲ್ಲಿ ಒಳ್ಳೆಯ ಆಟವನ್ನ ಆಡಿಲ್ಲ ಅನ್ನುವ ಕಾರಣಕ್ಕೆ ಜನರಿಂದ ಅವರಿಗೆ ಜಾಸ್ತಿ ವೋಟ್ ಬಂದಿಲ್ಲ, ಈ ಎಲ್ಲಾ ಕಾರಣವನ್ನ ಗಮನದಲ್ಲಿ ಇರಿಸಿಕೊಂಡು ದುನಿಯಾ ರಶ್ಮಿ ಅವರನ್ನ ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಮಾಡಲಾಗಿದೆ ಅನ್ನುವ ನಿಖರ ಮಾಹಿತಿ ಹೊರಬಿದ್ದಿದೆ.

ಅತಿಯಾಗಿ ಅಳುವುದೇ ಈಗ ದುನಿಯಾ ರಶ್ಮಿ ಅವರಿಗೆ ಮುಳುವಾಗಿ ಪರಿಣಮಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ, ಮೂರೂ ವಾರ ಹೆಚ್ಚಾಗಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಳ್ಳದಿದ್ದರು ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಆಟವನ್ನ ಆಡಿರುವ ದುನಿಯಾ ರಶ್ಮಿ ಕನ್ನಡಿಗರ ಹೃದಯವನ್ನ ಗೆದ್ದಿದ್ದಾರೆ. ಸ್ನೇಹಿತರೆ ನಿಮ್ಮ ಪ್ರಕಾರ ಈ ವಾರ ಮನೆಯಿಂದ ಯಾರು ಆಚೆ ಬರಬೇಕಾಗಿತ್ತು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಬಿಗ್ ಬಾಸ್ ಪ್ರೇಕ್ಷಕನಿಗೆ ತಲುಪಿಸಿ.

Big boss this week elimination

Please follow and like us:
error0
http://karnatakatoday.in/wp-content/uploads/2019/11/Big-Boss-this-week-elimination-1024x576.jpghttp://karnatakatoday.in/wp-content/uploads/2019/11/Big-Boss-this-week-elimination-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಜನರು ರಾತ್ರಿಯಾದರೆ ಸಾಕು ಟಿವಿ ಮುಂದೆ ಕುಳಿತುಕೊಂಡು ಬಿಗ್ ಬಾಸ್ ಕಾರ್ಯಕ್ರಮವನ್ನ ನೋಡುತ್ತಾರೆ, ಇನ್ನು ಪ್ರೇಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿ ಬಿಗ್ ಬಾಸ್ ನಲ್ಲಿ ಉಳಿದುಕೊಳ್ಳುವ ಸಲುವಾಗಿ ಅವರಿಗೆ ವೋಟ್ ಮಾಡುತ್ತಾರೆ. ಇನ್ನು ಕಳೆದ ವಾರದ ಚೈತ್ರ ವಾಸುದೇವನ್ ಅವರು ಎಲಿಮಿನೇಟ್ ಆಗುವುದರ ಮೂಲಕ ತಮ್ಮ ಆಟವನ್ನ ಮುಗಿಸಿದ್ದರು, ಇನ್ನು ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಅನ್ನುವುದರ ಬಗ್ಗೆ ಕುತೂಹಲ ಎಲ್ಲರಲ್ಲೂ ಮೂಡಿತ್ತು ಎಂದು ಹೇಳಿದರೆ ತಪ್ಪಾಗಲ್ಲ....Film | Devotional | Cricket | Health | India