ಈ ಬಾರಿ ನಡೆಯಲಿರುವ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾರು ಬರಲಿದ್ದಾರೆ ಅನ್ನುವ ಬಿಸಿ ಬಿಸಿ ಚರ್ಚೆ ಪ್ರಾರಂಭವಾಗಿದ್ದು ಅಭಿಮಾನಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇದರ ನಡುವೆ ಸಂಭಾವ್ಯರ ಪಟ್ಟಿ ಕೂಡ ಬಿಡುಗಡೆಯಾಗಿದ್ದು ಈ ಬಾರಿಯ ಬಿಗ್ ಬಾಸ್ ನಲ್ಲಿ ಇವರುಗಳು ಕಾಣಿಸಿಕೊಳ್ಳೋದು ಬಹುತೇಕ ಖಚಿತ ಎನ್ನಲಾಗಿದೆ. ಬಹುಶಃ ಅಕ್ಟೋಬರ್ 21ರಿಂದ ಆರಂಭವಾಗಲಿದ್ದು, ಸಂಜೆ 6 ಗಂಟೆಗೆ ಬಿಗ್ ಬಾಸ್ ಹೊಸ ಸೀಸನ್‌ಗೆ ಚಾಲನೆ ಸಿಗಲಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಎಂದಿನಂತೆ ಶೋ ಮುಂದುವರೆಯಲಿದ್ದು ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಜುಲೈ 2018ರಲ್ಲೇ ಆಡಿಷನ್ಸ್‌ಗೆ ಆಹ್ವಾನ ನೀಡಲಾಗಿತ್ತು. ಪ್ರತಿ ದಿನ ರಾತ್ರಿ 8 ಗಂಟೆಗೆ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗಲಿದೆ. ಅದೇ ರೀತಿ ಈ ಬಾರಿ ಯಾರೆಲ್ಲಾ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಪಟ್ಟಿಯಲ್ಲಿನ ಹೆಸರುಗಳು ಸಂಪೂರ್ಣ ಹುಸಿಯಾಗಿರಲೂ ಬಹುದು ಅಥವಾ ನಿಜವಾಗಿರಲೂ ಬಹುದು ಇಲ್ಲಾ ಅರ್ಧ ಸತ್ಯ ಆಗಿರುವ ಸಾಧ್ಯತೆಗಳಿವೆ. ಹಲವಾರು ಕಾರಣಗಳಿಗಾಗಿ ನಟಿ ಭಾವನಾ ಸುದ್ದಿಯಾಗಿದ್ದರು.

bigboss contestants 2018 kannada

ಸುದೀಪ್ ಜತೆಗೆ ವಿಷ್ಣುವರ್ಧನ ಚಿತ್ರದಲ್ಲಿ ನಟಿಸಿದ್ದಾರೆ. ಒಂದು ರೀತಿ ಬಿಗ್ ಬಾಸ್ ಮನೆಗೆ ಶೋಭೆ ತರುವ ಪ್ರತಿಭೆ ಎನ್ನಬಹುದು. ಬಿಗ್ ಬಾಸ್ ಸಂಭಾವ್ಯರ ಪಟ್ಟಿಯಲ್ಲಿ ಕೇಳಿಬಂದಿರುವ ಮೊದಲ ಹೆಸರು ಭಾವನಾ. ಕೆಲ ದಿನಗಳ ಹಿಂದೆ ಟಿವಿ ವಾಹಿನಿಗಳಲ್ಲಿ ಕಾಣಿಸಿಕೊಂಡಿದ್ದ ವಿಜಯ ಲಕ್ಷ್ಮಿ ತನ್ನ ಬದುಕಿನ ನೋವಿನ ಪುಟಗಳನ್ನು ತೆರೆದಿಟ್ಟಿದ್ದರು. ಅಲ್ಲಿಂದ ಅವರ ಬಗ್ಗೆ ಸಾಕಷ್ಟು ಸಿಂಪಥಿ ಮೂಡಿದೆ. ಇದೀಗ ಅವರು ಬಿಗ್ ಬಾಸ್ ಮನೆಗೆ ಬಂದರೆ ಇನ್ನೇನು ಬಿಚ್ಚಿಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

bigboss contestants 2018 kannada

ಇನ್ನುಳಿದಂತೆ ಪುಟ್ಟಗೌರಿ, ಗಡ್ದಪ್ಪ, ಸುಮನಾ ರಂಗನಾಥ್, ಶಾಲಿನಿ ಗೌಡ ಕೂಡ ಈ ಲಿಸ್ಟ್ ನಲ್ಲಿ ಇದ್ದಾರೆ. ಕೇಬಲ್ ಟಿವಿಯಿಂದ ಆರಂಭವಾದ ಮುರಳಿ ಕಿರುತೆರೆ ಜರ್ನಿ ಇದೀಗ ‘ಒಗ್ಗರಣೆ ಡಬ್ಬಿ’ಗೆ ಬಂದು ನಿಂತಿದೆ. ಅಡುಗೆ ಶೋವೊಂದಕ್ಕೆ ಇಂಥದ್ದೊಂದು ದೊಡ್ಡ ಯಶಸ್ಸು ತಂದುಕೊಡಬಹುದು ಎಂದು ತೋರಿಸಿಕೊಟ್ಟ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಇವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ.

Please follow and like us:
0
http://karnatakatoday.in/wp-content/uploads/2018/10/bigboss-1024x576.pnghttp://karnatakatoday.in/wp-content/uploads/2018/10/bigboss-150x104.pngKarnataka Today's Newsಚಲನಚಿತ್ರಬೆಂಗಳೂರುಸುದ್ದಿಜಾಲಈ ಬಾರಿ ನಡೆಯಲಿರುವ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾರು ಬರಲಿದ್ದಾರೆ ಅನ್ನುವ ಬಿಸಿ ಬಿಸಿ ಚರ್ಚೆ ಪ್ರಾರಂಭವಾಗಿದ್ದು ಅಭಿಮಾನಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇದರ ನಡುವೆ ಸಂಭಾವ್ಯರ ಪಟ್ಟಿ ಕೂಡ ಬಿಡುಗಡೆಯಾಗಿದ್ದು ಈ ಬಾರಿಯ ಬಿಗ್ ಬಾಸ್ ನಲ್ಲಿ ಇವರುಗಳು ಕಾಣಿಸಿಕೊಳ್ಳೋದು ಬಹುತೇಕ ಖಚಿತ ಎನ್ನಲಾಗಿದೆ. ಬಹುಶಃ ಅಕ್ಟೋಬರ್ 21ರಿಂದ ಆರಂಭವಾಗಲಿದ್ದು, ಸಂಜೆ 6 ಗಂಟೆಗೆ ಬಿಗ್ ಬಾಸ್ ಹೊಸ ಸೀಸನ್‌ಗೆ ಚಾಲನೆ ಸಿಗಲಿದೆ. ಕಿಚ್ಚ ಸುದೀಪ್...Kannada News