ಕರುನಾಡ ಜನರು ಎಂದು ಮರೆಯದ ಅದ್ಬುತ ಕಲಾವಿದೆ ಕವಿತಾ ಗೌಡ. ಹೆಚ್ಚಾಗಿ ಚಿನ್ನು ಎಂದೇ ಖ್ಯಾತಿ ಪಡೆದಿರುವ ಈ ಅಮೋಘ ನಟಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಇವರು ಈಗ ಸ್ಪರ್ದಿಯೊಬ್ಬರ ಮೇಲೆ ಆರೋಪ ಮಾಡಿದ್ದಾರೆ. ಕನ್ನಡದ ಮನೆ ಮಗಳು ಎಂದೇ ಹಲವಾರು ಜನರ ಅಭಿಮಾನ ಗಳಿಸಿರುವ ಚಿನ್ನು ಏನು ಹೇಳಿದ್ದಾರೆ ಕೇಳೋಣ ಬನ್ನಿ.
ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಎಂಬ ಗಾದೆ ಮಾತಿನಂತೆ ಬಿಗ್ ಬಾಸ್ ಸೀಸನ್ 6 ಸ್ಪರ್ಧಿಗಳ ಕಿತ್ತಾಟ ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲದೇ ಹೊರ ಬಂದ ಮೇಲೆಯೂ ಮುಂದುವರಿದಿದೆ. ಕನ್ನಡ ಬಿಗ್ ಬಾಸ್ ಸೀಸನ್ -6 ಸ್ಪರ್ಧಿ ಕವಿತಾ ಗೌಡ ಮತ್ತೊಬ್ಬ ಸ್ಪರ್ಧಿ ಆ್ಯಂಡಿ ವಿರುದ್ಧ ಮಹಿಳಾ ಆಯೋಗದಲ್ಲಿ ದೂರು ದಾಖಲಿಸಿದ್ದಾರೆ.  ನಗರದ ಕೆಜಿ ರಸ್ತೆಯ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಚೇರಿಗೆ ತಾಯಿಯ ಜೊತೆಗೆ ಹೋಗಿ ಕವಿತಾ ಅವರು ದೂರು ನೀಡಿದ್ದಾರೆ.

ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿ, ಟಾಸ್ಕ್ ಹೊರತಾಗಿಯೂ ಆ್ಯಂಡಿ ನಡೆದುಕೊಂಡ ರೀತಿ ನನಗೆ ಇಷ್ಟವಾಗಲಿಲ್ಲ. ಇತ್ತೀಚೆಗೆ ನಡೆದ ಖಾಸಗಿವಾಹಿನಿ ಶೋದಲ್ಲಿ ಉಂಟಾದ ಅಹಿತಕರ ಘಟನೆಯಿಂದ ದೂರು ದಾಖಲಿಸಲು ನಿರ್ಧರಿಸಿದೆ ಎಂದರು. ಬಿಗ್‍ಬಾಸ್ ಮನೆಯಲ್ಲಿ ಉಂಟಾಗಿದ್ದ ಅಹಿತಕರ ಘಟನೆಯ ಕುರಿತು ಹೇಳಿಕೊಂಡು ದೂರು ನೀಡುವ ವಿಚಾರವನ್ನು ಪ್ರೊಗ್ರಾಮ್ ಪ್ರೊಡ್ಯೂಸರ್ ಗುರುದಾಸ್ ಶಣೈ ತಿಳಿಸಿದ್ದೆ. ಅವರು ಕೂಡ ಬೆಂಬಲ ಕೊಡುತ್ತೇವೆಂದು ತಿಳಿಸಿದ್ದರು. ಹೀಗಾಗಿ ಬಿಗ್‍ಬಾಸ್ ಮನೆಯಿಂದ ಹೊರಬಂದು ಯೋಜನೆ ಮಾಡಿಯೇ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಎರಡು ದಿನ ನಡೆದಿದ್ದ ಸೂಪರ್ ಹೀರೋ ವರ್ಸಸ್ ಸೂಪರ್ ವಿಲನ್ ಟಾಸ್ಕ್ ನಲ್ಲಿ ಆ್ಯಂಡಿ ತುಂಬಾ ಕಿರುಕುಳ ನೀಡಿದ್ದರು. ಆ ಟಾಸ್ಕ್ ನ ದೃಶ್ಯಗಳು ವೂಟ್‍ನಲ್ಲಿ ಸಿಕ್ಕಿವೆ. ಬಿಗ್‍ಬಾಸ್ ಮನೆಯಿಂದ ಹೊರಗೆ ಬಂದು ನೋಡಿದಾಗ ಆ್ಯಂಡಿ ವರ್ತನೆ ಮುಜುಗುರಕ್ಕೆ ಉಂಟುಮಾಡಿತು ಎಂದರು.

ಕೆಲವು ಬಾರಿ ಕನ್ಫೆಷನ್ ರೂಮ್‍ಗೆ ಹೋಗಿ ಆ್ಯಂಡಿ ವಿರುದ್ಧ ದೂರು ನೀಡಿದ್ದೇನೆ. ಅವರು ಕ್ರಮ ಕೈಗೊಂಡರೋ ಬಿಟ್ಟರೋ ನನಗೆ ಗೊತ್ತಿಲ್ಲ. ಸೂಪರ್ ಹೀರೋ ವರ್ಸಸ್ ಸೂಪರ್ ವಿಲನ್ ಟಾಸ್ಕ್ ಬಳಿಕ ಮತ್ತೆ ಕನ್ಫೆಷನ್ ರೂಮ್‍ಗೆ ಹೋಗಿ ಮನೆಯಿಂದ ಹೊರಗೆ ಹೋದ ಮೇಲೆ ಆ್ಯಂಡಿ ವಿರುದ್ಧ ದೂರು ನೀಡುತ್ತೇವೆ ಎಂದು ತಿಳಿಸಿದ್ದೆ. ಅವರು ಕೂಡ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಕವಿತಾ ಹೇಳಿದರು.

ಟಾಸ್ಕ್ ಹೆಸರಿನಲ್ಲಿ ಕಿರುಕುಳ ಕೊಡುತ್ತಿದ್ದರು. ಹೀಗಾಗಿ ಬಿಗ್‍ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಅವರು ಬರುತ್ತಿದ್ದ ಕಾರ್ಯಕ್ರಮಕ್ಕೆ ಗೈರು ಆಗುತ್ತಿದೆ ಎಂದರು. ಮುಂದಿನ ಸೀಸನ್‍ನಲ್ಲಿ ಇಂತಹ ಅಹಿತಕರ ಘಟನೆಗಳು ಮರುಕಳಿಸಬಾರದು ಎನ್ನುವ ಕಾಳಜಿ ಇದೆ. ಜೊತೆಗೆ ಆ್ಯಂಡಿ ಬಿಗ್‍ಬಾಸ್ ಮನೆಯಿಂದ ಹೊರಬಂದರೂ ಬದಲಾಗಿಲ್ಲ. ಹೀಗಾಗಿ ಆ್ಯಂಡಿ ವಿರುದ್ಧ ದೂರು ನೀಡುತ್ತಿದ್ದೇನೆ ಎಂದು ಸ್ಪಷ್ಟ ಪಡಿಸಿದ್ದಾರೆ. ಅದೇನೇ ಇರಲಿ ಎಲ್ಲವು ಶೀಘ್ರ ಸರಿಯಾಗಲಿ ಎನ್ನುವುದೇ ಚಿನ್ನು ಅಭಿಮಾನಿಗಳ ಆಶಯ.

Please follow and like us:
0
http://karnatakatoday.in/wp-content/uploads/2019/02/kavita-andy-fight-1024x576.jpghttp://karnatakatoday.in/wp-content/uploads/2019/02/kavita-andy-fight-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕರುನಾಡ ಜನರು ಎಂದು ಮರೆಯದ ಅದ್ಬುತ ಕಲಾವಿದೆ ಕವಿತಾ ಗೌಡ. ಹೆಚ್ಚಾಗಿ ಚಿನ್ನು ಎಂದೇ ಖ್ಯಾತಿ ಪಡೆದಿರುವ ಈ ಅಮೋಘ ನಟಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಇವರು ಈಗ ಸ್ಪರ್ದಿಯೊಬ್ಬರ ಮೇಲೆ ಆರೋಪ ಮಾಡಿದ್ದಾರೆ. ಕನ್ನಡದ ಮನೆ ಮಗಳು ಎಂದೇ ಹಲವಾರು ಜನರ ಅಭಿಮಾನ ಗಳಿಸಿರುವ ಚಿನ್ನು ಏನು ಹೇಳಿದ್ದಾರೆ ಕೇಳೋಣ ಬನ್ನಿ. ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಎಂಬ...Kannada News