ದೇಶದಲ್ಲಿ ದಿನದಿಂದ ದಿನಕ್ಕೆ ವಾಹನ ಸವಾರರ ಮೇಲೆ ಕಟ್ಟುನಿಟ್ಟಿನ ಕ್ರಮಗಳನ್ನು ಕೇಂದ್ರದ ರಸ್ತೆ ಹಾಗು ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯವರು ಹೊಸ ಹೊಸ ನಿಯಮಗಳನ್ನು ಭದ್ರತೆಯ ದ್ರಷ್ಟಿಯಿಂದ ತರುತ್ತಿದ್ದಾರೆ. ಇಷ್ಟೇ ಅಲ್ಲದೆ ಅಪರಾಧ ಪತ್ತೆ ಮತ್ತು ಜನರ ಜೀವನ ರಕ್ಷಣೆಗಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ಪದೇ ಪದೇ ಹೇಳುತ್ತಲೇ ಇದ್ದಾರೆ. ಎಷ್ಟೇ ಹೇಳಿದರು ಕೂಡ ಜನರು ಮಾತ್ರ ತಮ್ಮ ಅಭ್ಯಾಸವನ್ನು ಬಿಡದೆ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸುತ್ತಲೇ ಇದ್ದಾರೆ. ಇದರಲ್ಲಿ ಹೆಚ್ಚು ಖಂಡಿಸು ಬರುತ್ತಿರುವುದು ಶಾಲಾ ಹಾಗು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಾಗಿದ್ದಾರೆ. ಇನ್ನು ಈ ಬಾರಿ ಕೇಂದ್ರ ಹಳೆಯ ನಿಯಮಕ್ಕೆ ಸ್ವಲ್ಪ ಒತ್ತಡ ಹೇರಿ ಮತ್ತಷ್ಟು ಬಿಗಿಗೊಳಿಸಿದ್ದಾರೆ.

ಈಗ ವಾಹನದ ನಾಮಫಲಕಕ್ಕೆ ಬಂದಿರುವ ಈ ಹೊಸ ರೂಲ್ಸ್ ಏನೆಂಬುದನ್ನು ನೀವು ತಿಳಿಯಲೇಬೇಕು. ಇತ್ತೀಚಿಗೆ ದೆಹಲಿಯಲ್ಲಿ ನಾಮಫಲಕವನ್ನು ಹಿಂದಿಯಲ್ಲಿ ಬರೆಸಿದ್ದಕ್ಕೆ ಕವಿಯೊಬ್ಬರಿಗೆ ಹತ್ತು ಸಾವಿರದವರೆಗೆ ದಂಡ ವಿಧಿಸಲಾಗಿತ್ತು ಆದರೆ ಕರ್ನಾಟಕದಲ್ಲಿ ಹಾಗಿಲ್ಲ ಇಲ್ಲಿ ನಾವು ಕನ್ನಡಲ್ಲೇ ನಾಮಫಲಕ ಹಾಕಬಹುದು, ಆದರೆ ಈ ನಂಬರ್ ಪ್ಲೇಟ್ ವಿಷಯವಾಗಿ ಸರ್ಕಾರ ತಂದಿರುವ ಆ ನಿಯಮ ಮಾತ್ರ ನಾಗರಿಕರು ತಿಳಿದುಕೊಳ್ಳಬೇಕು.

ಮೊದಲನೆಯದಾಗಿ ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಓದಲು ಯೋಗ್ಯವಾಗಿರಬೇಕು ಮತ್ತು ಅತಿಚಿಕ್ಕ ಗಾತ್ರದಲ್ಲಿ ಇರುವಂತಿಲ್ಲ, ಇಷ್ಟೇ ಅಲ್ಲದೆ ವಾಹನದ ಸಂಖ್ಯೆಗಳು ಒಂದೇ ನೇರದಲ್ಲಿ ಇರಬೇಕು ಒಂದು ಅಕ್ಷರ ದೊಡ್ಡದು ಮತ್ತೊಂದು ಚಿಕ್ಕದು ಹಾಗೆ ಇರಬಾರದು. ಇನ್ನು ಫ್ಯಾನ್ಸಿ ಡಿಸೈನ್ ಮಾಡಿ ನಂಬರ್ ಹಾಕುವಂತಿಲ್ಲ ಇದು ಕೂಡ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಅಪರಾಧವಾಗುತ್ತದೆ. ಇನ್ನು ಈ ಪ್ಲೇಟ್ ನಲ್ಲಿ ಯಾವುದೇ ಸಂಕೇತ ಅಥವಾ ಚಿಹ್ನೆ ಬಳಸುವಂತಿಲ್ಲ ಪ್ಲೇನ್ ಆಗಿರಬೇಕು. ಇದಿಷ್ಟು ನಿಯಮಗಳನ್ನು ಸರ್ಕಾರ ಕಟುಗೊಳಿಸಿದ್ದು ಪಾಲಿಸದೇ ಇದ್ದವರಿಗೆ ಸ್ಥಳದಲ್ಲೇ ಅಥವಾ ಕೋರ್ಟ್ ಮೂಲಕ ಒಂದು ಸಾವಿರದಿಂದ ಹತ್ತು ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ.

ಇನ್ನು ದೆಹಲಿಯಲ್ಲಿ ಹೊಸ ನಿಯಮವೊಂದು ಜಾರಿಯಾಗಿದ್ದು ಒಂದು ವೇಳೆ ನಿಮ್ಮ ಕಾರು ಕಳೆದು ಹೋಗಿದ್ದರೆ, ನಿಮಗೆ ಅದೇ ವಾಹನದ ಸಂಖ್ಯೆ ಬೇಕು ಏನಾದರೆ ಮತ್ತೆ ಪಡೆಯಬಹುದಾಗಿದೆ. ಸದ್ಯಕ್ಕೆ ಇದು ದೆಹಲಿಯಲ್ಲಿ ಜಾರಿಯಾಗಿದೆ, ಟ್ರಾಫಿಕ್ ನಿಯಮಗಳು ಹಾಗು ನಂಬರ್ ಪ್ಲೇಟ್ ಗೆ ಸಂಬಂದಿಸಿದ ನಿಯಮಗಳು ಎಲ್ಲ ಕಡೆ ಜಾರಿಯಲ್ಲಿದ್ದು ಜನರು ದಯವಿಟ್ಟು ಈ ವಿಷಯವನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗು ತಲುಪಿಸಿ.

Please follow and like us:
0
http://karnatakatoday.in/wp-content/uploads/2018/11/new-traffic-1024x576.pnghttp://karnatakatoday.in/wp-content/uploads/2018/11/new-traffic-150x104.pngKarnataka Today's Newsಅಂಕಣಆಟೋಎಲ್ಲಾ ಸುದ್ದಿಗಳು  ದೇಶದಲ್ಲಿ ದಿನದಿಂದ ದಿನಕ್ಕೆ ವಾಹನ ಸವಾರರ ಮೇಲೆ ಕಟ್ಟುನಿಟ್ಟಿನ ಕ್ರಮಗಳನ್ನು ಕೇಂದ್ರದ ರಸ್ತೆ ಹಾಗು ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯವರು ಹೊಸ ಹೊಸ ನಿಯಮಗಳನ್ನು ಭದ್ರತೆಯ ದ್ರಷ್ಟಿಯಿಂದ ತರುತ್ತಿದ್ದಾರೆ. ಇಷ್ಟೇ ಅಲ್ಲದೆ ಅಪರಾಧ ಪತ್ತೆ ಮತ್ತು ಜನರ ಜೀವನ ರಕ್ಷಣೆಗಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ಪದೇ ಪದೇ ಹೇಳುತ್ತಲೇ ಇದ್ದಾರೆ. ಎಷ್ಟೇ ಹೇಳಿದರು ಕೂಡ ಜನರು ಮಾತ್ರ ತಮ್ಮ ಅಭ್ಯಾಸವನ್ನು ಬಿಡದೆ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸುತ್ತಲೇ...Kannada News