ದಿನದಿಂದ ದಿನಕ್ಕೆ ಭಾರತದಲ್ಲಿ ಇದೀಗ ಹೊಸ ಹೊಸ ನಿಯಮಗಳು ಕಠಿಣವಾಗಿ ಅನುಷ್ಠಾನಕ್ಕೆ ಬರುತ್ತಿವೆ ಇದೀಗ ವಾಹನ ಸವಾರರ ಸರದಿ. ಭಾರತದಲ್ಲಿ ದಿನವೊಂದಕ್ಕೆ ಅಪಘಾತಗಳ ಮೂಲಕ ಅದೆಷ್ಟೋ ಜೀವಹಾನಿ ಆಗುತ್ತಿದೆ. ನಿಯಮಗಳು ಗೊತ್ತಿದ್ದರೂ ಸಹ ತಪ್ಪು ಮಾಡುವವರ ಸಂಖ್ಯೆ ಹೆಚ್ಚು, ಇದಕ್ಕಾಗಿಯೇ ಕೇಂದ್ರ ಕಾನೂನು ಮತ್ತಷ್ಟು ಬಿಗಿಗೊಳಿಸಿದೆ, ಈ ಹಿಂದೆ ಇದ್ದ ಕಾನೂನಿಗೆ ಸ್ವಲ್ಪ ಸರ್ಜರಿ ಮಾಡಿ ಹೊಸದಾಗಿ ಕೆಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಇದೆ ತಿಂಗಳ 13 ರಿಂದ ಈ ನಿಯಮ ಜಾರಿಗೆ ಬರಲಿದೆ, ಇದು ಬೈಕು ಕಾರು ಹೊಂದಿರುವವರಿಗೆ ದೊಡ್ಡ ಶಾಕ್ ಎನ್ನಬಹುದು.

ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಹೆಚ್ಚು ಕಂಡು ಬರುತ್ತಿರುವ ದ್ರಶ್ಯ ಏನಂದ್ರೆ ಅದು ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡುವುದು, ಹಿಂದಿನ ಕಾನೂನಿನ ಪ್ರಕಾರ ಇದಕ್ಕೆ 500 ದಂಡ ವಿಧಿಸಲಾಗಿತ್ತು ಆದರೆ ಈಗ ಪೋಲೀಸರ ಕಣ್ಣಿಗೆ ನೀವು ಬಿದ್ದರೆ 5000 ರು ದಂಡ ವಿಧಿಸಲಾಗುತ್ತದೆ ಎಚ್ಚರವಹಿಸಿ. ಇನ್ನು ಎರಡನೆಯ ನಿಯಮ ಪಾಲಕರು ಗಮನವಿಟ್ಟು ಕೇಳಬೇಕು ಒಂದು ವೇಳೆ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಲಾಯಿಸಿದ್ದು ಕಂಡುಬಂದರೆ 25000 ದಂಡವನ್ನು ಕೋರ್ಟ್ನಲ್ಲಿ ಕಟ್ಟಿ ಬರಬೇಕಾಗುತ್ತದೆ, ಗ್ರಾಮೀಣ ಭಾಗದಲ್ಲಿ ಈ ನಿಯಮ ಅಷ್ಟೊಂದು ಬಿಸಿ ಮುಟ್ಟಿಸದಿದ್ದರು ನಗರದ ಜನರು ಸ್ವಲ್ಪ ಕಾಳಜಿವಹಿಸಿ.

ಮತ್ತೊಂದು ಶಾಕಿಂಗ್ ನಿಯಮ ಏನೆಂದರೆ ಇಂದು ವೇಳೆ ನಿಮ್ಮ ಕಾರು ಅಥವಾ ಬೈಕಿಗೆ ಇನ್ಶೂರೆನ್ಸ್ ಮಾಡಿಸಿಲ್ಲ ಎಂದರೆ ನಿಮಗಿದೆ ದೊಡ್ಡ ಆಪತ್ತು, ಒಂದು ವೇಳೆ ಅಪಘಾತವಾದಾಗ ನಿಮ್ಮ ವಾಹನದ ವಿಮೆ ಇಲ್ಲದಿದ್ದರೆ ನಿಮ್ಮ ಗಾಡಿಯನ್ನು ಹರಾಜು ಪ್ರಕ್ರಿಯೆ ಮೂಲಕ ಮಾರಿ, ಪರಿಹಾರವನ್ನು ಸಂತ್ರಸ್ತನಿಗೆ ನೀಡಲಾಗುವುದು. ಎಷ್ಟೋ ಜನ ಗಡಿಗಳನ್ನು ಕಾಲ ಕಾಲಕ್ಕೆ ವಿಮೆ ಮಾಡದೇ ಉಳಿಯುತ್ತಾರೆ ಇದೊಂದು ದೊಡ್ಡ ತಪ್ಪು ನಾಳೆ ಏನಾದರು ಅಚಾನಕ್ ನಮ್ಮಿದಳೆ ತಪ್ಪು ನಡೆದರೆ ಖಂಡಿತ ದಂಡ ತೆರಬೇಕಾಗುತ್ತದೆ.

ಇನ್ನು ಫ್ಯಾನ್ಸಿ ನಂಬರ್ ಪ್ಲೇಟ್ ಹಾಕಿಸುವವರು ಕೂಡ ಸ್ವಲ್ಪ ಎಚ್ಚರ ವಹಿಸಿ, ಈ ರೀತಿ ವಿವಿಧ ಶೈಲಿಯಲ್ಲಿ ನಂಬರ್ ಡಿಸೈನ್ ಮಾಡುವಂತಿಲ್ಲ. ವಾಹನ ಸಂಖ್ಯೆಗಳು ಸ್ಪಷ್ಟವಾಗಿ ಗೋಚರಿಸುವಂತಿರಬೇಕು. ಇದರಿಂದ ಅಪರಾಧ ಪತ್ತೆ ಸುಲಭವಾಗುತ್ತದೆ. ಸರ್ಕಾರದ ಈ ನಡೆ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಪ್ರತಿಯೊಬ್ಬ ನಾಗರಿಕರಿಗೂ ಈ ವಿಷಯ ತಿಳಿಸಿ.

Please follow and like us:
0
http://karnatakatoday.in/wp-content/uploads/2018/10/police-bike-1024x576.pnghttp://karnatakatoday.in/wp-content/uploads/2018/10/police-bike-150x104.pngKarnataka Today's Newsಅಂಕಣಆಟೋಆರೋಗ್ಯಎಲ್ಲಾ ಸುದ್ದಿಗಳುಗ್ಯಾಡ್ಜೆಟ್ಸ್ದಿನದಿಂದ ದಿನಕ್ಕೆ ಭಾರತದಲ್ಲಿ ಇದೀಗ ಹೊಸ ಹೊಸ ನಿಯಮಗಳು ಕಠಿಣವಾಗಿ ಅನುಷ್ಠಾನಕ್ಕೆ ಬರುತ್ತಿವೆ ಇದೀಗ ವಾಹನ ಸವಾರರ ಸರದಿ. ಭಾರತದಲ್ಲಿ ದಿನವೊಂದಕ್ಕೆ ಅಪಘಾತಗಳ ಮೂಲಕ ಅದೆಷ್ಟೋ ಜೀವಹಾನಿ ಆಗುತ್ತಿದೆ. ನಿಯಮಗಳು ಗೊತ್ತಿದ್ದರೂ ಸಹ ತಪ್ಪು ಮಾಡುವವರ ಸಂಖ್ಯೆ ಹೆಚ್ಚು, ಇದಕ್ಕಾಗಿಯೇ ಕೇಂದ್ರ ಕಾನೂನು ಮತ್ತಷ್ಟು ಬಿಗಿಗೊಳಿಸಿದೆ, ಈ ಹಿಂದೆ ಇದ್ದ ಕಾನೂನಿಗೆ ಸ್ವಲ್ಪ ಸರ್ಜರಿ ಮಾಡಿ ಹೊಸದಾಗಿ ಕೆಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಇದೆ ತಿಂಗಳ 13...Kannada News