bike insurance

ಇತ್ತೀಚಿಗೆ ರೋಡ್ ನಲ್ಲಿ ಆಕ್ಸಿಡೆಂಟ್ ಜಾಸ್ತಿ ಆಗಿದೆ, ರಿಪೋರ್ಟ್ ಪ್ರಕಾರ ಪ್ರತಿ ಒಂದು ವರ್ಷಕ್ಕೆ 1 ಲಕ್ಷಕ್ಕೂ ಹೆಚ್ಚಿನ ಜನ ಆಕ್ಸಿಡೆಂಟ್ ನಿಂದ ತಮ್ಮ ಜೀವವನ್ನೆ ಕಳೆದುಕೊಳ್ಳುತ್ತಿದ್ದಾರೆ.

ಕೆಲವೊಮ್ಮೆ ರೋಡ್ ನಲ್ಲಿ ಸುಮ್ಮನೆ ನಡೆದುಕೊಂಡು ಹೋಗುವಾಗ ಆಕ್ಸಿಡೆಂಟ್ ಆದಾಗ ಅಂದರೆ ಅಲ್ಲಿ ಮೂರನೇ ವ್ಯಕ್ತಿ ಸತ್ತರೆ ಅವರಿಗೆ ಯಾವುದೇ ಪರಿಹಾರ ಸಿಕ್ಕುತ್ತ ಇರಲಿಲ್ಲ, ಆದರೆ ಇನ್ನುಮುಂದೆ ಸುಪ್ರೀಮ್ ಕೋರ್ಟ್ ನ ಆದೇಶದ ಪ್ರಕಾರ ಪ್ರತಿಯೊಬ್ಬರು ಅಂದರೆ ವಾಹನ ಓಡಿಸುವವರು ಇನ್ಸೂರೆನ್ಸ್ ಹೊಂದಿರಲೇಬೇಕು.

bike insurance

ಇನ್ನು ಹೊಸ ಕಾರ್ ಖರೀದಿ ಮಾಡುವವರು ಕಡ್ಡಾಯವಾಗಿ ಮೂರೂ ವರ್ಷದ ಥರ್ಡ್ ಪಾರ್ಟಿ ಇನ್ಸೂರೆನ್ಸ್ ಮಾಡಿಸಲೇಬೇಕು ಮತ್ತು ಬೈಕ್ ಖರೀದಿಸುವವರು ಕಡ್ಡಾಯವಾಗಿ 5 ವರ್ಷದ ಥರ್ಡ್ ಪಾರ್ಟಿ ಇನ್ಸೂರೆನ್ಸ್ ಮಾಡಿಸಲೇಬೇಕು.

ಇನ್ನು ಹೊಸ ಕಾರ್ ಗೆ 24000 ರೂಪಾಯಿಯ ಥರ್ಡ್ ಪಾರ್ಟಿ ಇನ್ಸೂರೆನ್ಸ್ ಮತ್ತು ಹೊಸ ಬೈಕ್ ಗೆ 13000 ರೂಪಾಯಿಯ ಥರ್ಡ್ ಪಾರ್ಟಿ ಇನ್ಸೂರೆನ್ಸ್ ಮಾಡಿಸಲೇಬೇಕು.

ಇನ್ನು ಈ ಇನ್ಸೂರೆನ್ಸ್ ಇದ್ದಾಗ ಆಕ್ಸಿಡೆಂಟ್ ಆಗಿ ಮೂರನೇ ವ್ಯಕ್ತಿ ಸತ್ತರೆ ಅವರಿಗೂ ಕೂಡ ಇನ್ಸೂರೆನ್ಸ್ ಹಣ ಸಿಗುತ್ತದೆ, ಅಷ್ಟೇ ಅಲ್ಲದೆ ಮೊದಲು ವಾಹನ ಆಕ್ಸಿಡೆಂಟ್ ಆಗಿ ವಾಹನದ ಓನರ್ ಸತ್ತರೆ ಅವರಿಗೆ 1 ಲಕ್ಷ ರೂಪಾಯಿ ಸಿಕ್ತ ಇತ್ತು ಆದರೆ ಈಗ ಹೊಸ ಪೋಲೀಸಿಯ ಪ್ರಕಾರ ವಾಹನ ಓನರ್ ಗೆ 15 ಲಕ್ಷ ರೂಪಾಯಿ ಸಿಗಲಿದೆ, ಇದಕ್ಕೋಸ್ಕರ ನೀವು ಪ್ರತಿ ವರ್ಷ 750 ರೂಪಾಯಿ ಎಕ್ಸ್ಟ್ರಾ ಹಣವನ್ನ ಕೂಡ ತುಂಬಲಾಗುತ್ತದೆ.

bike insurance

ಸುಪ್ರೀಮ್ ಕೋರ್ಟ್ ನ ಈ ನಿರ್ಧಾರದಿಂದ ಹಣ ಕಟ್ಟುವವರಿಗೆ ಸ್ವಲ್ಪ ದುಬಾರಿ ಅನಿಸಬಹುದು ಆದರೆ ಆಕ್ಸಿಡೆಂಟ್ ಆಗಿ ವಾಹನದ ಓನರ್ ಸತ್ತರೆ ಆತನ ಕುಟುಂಬಕ್ಕೆ ತುಂಬಾ ಹೆಲ್ಪ್ ಆಗುತ್ತದೆ.

ಇನ್ನು ನೀವು ಕೂಡ ನಿಮ್ಮ ವಾಹನ ಇನ್ಸೂರೆನ್ಸ್ ತುಂಬುವ ಮೊದಲು ಅಲ್ಲಿ ಯಾವ ಯಾವ ರೀತಿಯ ಆಫರ್ ಇದೆ ಅಂತ ಮೊದಲು ಕೇಳಿಕೊಳ್ಳಿ ಮತ್ತು ಅದರಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಯಾವುದು ಬೆಸ್ಟ್ ಅನಿಸುತ್ತದೆಯೋ ಅದೇ ಇನ್ಸೂರೆನ್ಸ್ ನ್ನ ಮಾಡಿ, ಇನ್ನು ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಇದನ್ನ ಪ್ರತಿಯೊಬ್ಬರಿಗೂ ಕಳುಹಿಸಿ ಯಾಕೆ ಅಂದರೆ ನಿಮಗಲ್ಲದಿದ್ದರು ಬೇರೆಯವರಿಗಾದರು ಉಪಯೋಗವಾಗಲಿ.

bike insurance

Please follow and like us:
0
http://karnatakatoday.in/wp-content/uploads/2018/10/bike-insurance-1-1024x576.jpghttp://karnatakatoday.in/wp-content/uploads/2018/10/bike-insurance-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಇತ್ತೀಚಿಗೆ ರೋಡ್ ನಲ್ಲಿ ಆಕ್ಸಿಡೆಂಟ್ ಜಾಸ್ತಿ ಆಗಿದೆ, ರಿಪೋರ್ಟ್ ಪ್ರಕಾರ ಪ್ರತಿ ಒಂದು ವರ್ಷಕ್ಕೆ 1 ಲಕ್ಷಕ್ಕೂ ಹೆಚ್ಚಿನ ಜನ ಆಕ್ಸಿಡೆಂಟ್ ನಿಂದ ತಮ್ಮ ಜೀವವನ್ನೆ ಕಳೆದುಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ರೋಡ್ ನಲ್ಲಿ ಸುಮ್ಮನೆ ನಡೆದುಕೊಂಡು ಹೋಗುವಾಗ ಆಕ್ಸಿಡೆಂಟ್ ಆದಾಗ ಅಂದರೆ ಅಲ್ಲಿ ಮೂರನೇ ವ್ಯಕ್ತಿ ಸತ್ತರೆ ಅವರಿಗೆ ಯಾವುದೇ ಪರಿಹಾರ ಸಿಕ್ಕುತ್ತ ಇರಲಿಲ್ಲ, ಆದರೆ ಇನ್ನುಮುಂದೆ ಸುಪ್ರೀಮ್ ಕೋರ್ಟ್ ನ ಆದೇಶದ ಪ್ರಕಾರ ಪ್ರತಿಯೊಬ್ಬರು ಅಂದರೆ ವಾಹನ ಓಡಿಸುವವರು ಇನ್ಸೂರೆನ್ಸ್...Kannada News