ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ಕನಸಿನಲ್ಲೂ ಭಯ ಬೀಳುವಂತೆ ದಂಡ ಹಾಕುತ್ತಿರುವ ಪೊಲೀಸರು ಸಾಕಷ್ಟು ದಂಡವನ್ನು ಈಗಾಗಲೇ ಕಲೆಕ್ಟ್ ಮಾಡಿದ್ದಾರೆ. ಬೆಂಗಳೂರು ನಗರದಲ್ಲೇ ಕೋಟಿ ಕೋಟಿ ಕಲೆಕ್ಷನ್ ಆಗಿದೆ. ಇತ್ತ ಚಿಕ್ಕ ಪುಟ್ಟ ಕಾನೂನು ಮೀರಿದ್ದಕ್ಕೂ ಸರ್ಕಾರ ಮೂರುಪಟ್ಟು ದಂಡವನ್ನು ನಿರ್ದಾಕ್ಷಣ್ಯ ಇಲ್ಲದೆ ವಿಧಿಸಿದೆ. ಹೊಸ ಮೋಟಾರು ನಿಯಮದಡಿ ಇದೀಗ ಸಾಕಷ್ಟು ಮಂದಿ ಫೈನ್ ಕಟ್ಟಿದ್ದಾರೆ. ಒಂದೊಂದು ಗಾಡಿಗೆ 23000 ರೂ ದಂಡ ವಿಧಿಸಿದ ಉದಾಹರಣೆ ಇದೆ. ಇನ್ನು ಲಾರಿ ಒಂದಕ್ಕೆ ಒಂದು ಲಕ್ಷ ರು ದಂಡ ಹಾಕಿದ ಘಟನೆ ಬೇರೆ ರಾಜ್ಯದಲ್ಲಿ ನಡೆದಿದೆ. ಒಟ್ಟಾರೆ ಹೇಳುವುದಾದರೆ ಇನ್ಮೇಲೆ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಕಡ್ಡಾಯವಾಗಿ ನೀವು ಹಣ ಕಟ್ಟಲೇಬೇಕು.

ಒಂದೊಂದೇ ಕಾರಣ ಹುಡುಕಿ ಫೈನ್ ಹಾಕುತ್ತಿರುವ ಪೊಲೀಸರು ಇತ್ತೀಚಿಗೆ ಸಾದಾ ಚಪ್ಪಲಿ ಧರಿಸಿ ದ್ವಿಚಕ್ರ ವಾಹನ ಚಲಾಯಿಸಿದ ವ್ಯಕ್ತಿಗೆ 1000 ರೂ ಫೈನ್ ಹಾಕಿರುವ ಸಂಗತಿ ಹೊರಬಿದ್ದಿದೆ. ಇಸಕ್ಕೂ ಮೊದಲಿಗೆ ಇದೊಂದು ಸುಳ್ಳು ಘಟನೆ ಎನ್ನಲಾಗಿತ್ತು. ಆದರೆ ಮೋಟಾರು ನಿಯಮ ಪ್ರಕಾರ ಇದು ಕೂಡ ಅಪರಾಧವೇ ಸರಿ. ಹಾಗಿದ್ದರೆ ಸ್ಲಿಪ್ಪರ್ ಚಪ್ಪಲಿ ಧರಿಸಿ ಬೈಕ್ ಚಾಲನೆ ಮಾಡಿದರೆ ಏಕೆ ಅಪರಾಧ ಏನಿದರ ಹಿಂದಿನ ರಹಸ್ಯ ನೋಡೋಣ.

ದೇಶಾದ್ಯಂತ ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿರುವ ಮೋಟಾರು ವಾಹನ ತಿದ್ದುಪಡಿ ಕಾಯಿದೆ ಪ್ರಕಾರ ದ್ವಿಚಕ್ರ ವಾಹನ ಸವಾರರು ಚಪ್ಪಲಿ ಅಥವಾ ಸ್ಯಾಂಡಲ್ಸ್ ಹಾಕಿ ಗಾಡಿ ಓಡಿಸಿದರೂ 1,000ರೂ ದಂಡ ವಿಧಿಸಲು ಅವಕಾಶವಿದೆ ಎನ್ನಲಾಗುತ್ತಿದೆ.ಶೂ ಹಾಕಿ ಬೈಕ್ ಓಡಿಸಬೇಕು. ಚಪ್ಪಲಿ ಅಥವಾ ಸ್ಯಾಂಡಲ್ಸ್ ಹಾಕಿದರೆ, ಸುಲಭವಾಗಿ ಗೇರ್ ಬದಲಾಯಿಸಲು ಸಾಧ್ಯವಾಗದೆ ಅಪಘಾತಕ್ಕೆ ಈಡಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಈ ನಿಮಯವನ್ನು ಕಾಯಿದೆಗೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದಂಡದ ಮೊತ್ತ 1,000 ರೂ. ಆಗಿದ್ದು, ಈ ತಪ್ಪು ಮರುಕಳಿಸಿದರೆ ದಂಡದ ಜೊತೆಗೆ 15 ದಿನಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ, ಎಂದು ಸಹ ಹೇಳಲಾಗುತ್ತಿದೆ. ನಿಯಮ ಉಲ್ಲಂಘಿಸುವ ಚಾಲಕರಿಗೆ ದುಬಾರಿ ದಂಡ ವಿಧಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ಕೇಳಿ ಬರುತ್ತಿದೆ. ಚಪ್ಪಲಿ ಬದಲು ಶೂವನ್ನೇ ಹಾಕಬೇಕೆಂಬ ನಿಯಮ ನಿಜವೆಂದಾದರೆ ಈ ಬಗ್ಗೆ ಆಕ್ಷೇಪ ಕೇಳಿಬರದೇ ಇರಲಂತೂ ಸಾಧ್ಯವಿಲ್ಲ.

ಸ್ಲಿಪ್ಪರ್, ಹವಾಯಿ ಚಪ್ಪಲಿ ಹಾಕಿದರೆ ದ್ವಿಚಕ್ರ ವಾಹನದ ಗೇರ್ ಬದಲಾಯಿಸಲು, ವಾಹನ ನಿಯಂತ್ರಣಕ್ಕೆ, ಅಲ್ಪಮಟ್ಟಿಗೆ ತೊಂದರೆ ಆಗಲಿದೆ. ಅಷ್ಟೇ ಅಲ್ಲದೆ ಅಪಘಾತದ ಸಂದರ್ಭದಲ್ಲಿ ಕಾಲಿಗೆ ಪೆಟ್ಟುಬೀಳುವ ಸಂಭವ ಹೆಚ್ಚು, ಇದೆ ಕಾರಣಕ್ಕಾಗಿ ಈ ನಿಯಮ ಜಾರಿಯಲ್ಲಿದೆ. ನಿಮಗೆ ಆಶ್ಚರ್ಯ ಎನಿಸಬಹುದು ಈ ನಿಯಮ ಜಾರಿಗೆ ಬಂದಿದ್ದು 1988 ರಲ್ಲೇ, ಆದರೆ ಈಗ ಮೋಟಾರು ವಾಹನ ತಿದ್ದುಪಡಿ ಮತ್ತು ಕಡ್ಡಾಯವಾಗಿ ದಂಡ ವಿಧಿಸುವ ಕಾರ್ಯ ಜಾರಿಯಲ್ಲಿದೆ. ಹೀಗಾಗಿ ಪೊಲೀಸರು ನೀವು ಮಾಡುವ ಎಲ್ಲಾ ತಪ್ಪುಗಳನ್ನು ಕೂಡ ಗಮನಿಸಲಿದ್ದಾರೆ. ಟ್ರಾಫಿಕ್ ನಿಯಮಗಳ ಬಗ್ಗೆ ಎಚ್ಛೆತ್ತುಕೊಂಡಿರುವ ಸರ್ಕಾರ ನೀವು ಸ್ವಲ್ಪ ಯಾಮಾರಿದರೂ ಕೂಡ ದಂಡ ಗ್ಯಾರಂಟಿ.

Please follow and like us:
error0
http://karnatakatoday.in/wp-content/uploads/2019/09/chappal-while-riding-1024x576.jpghttp://karnatakatoday.in/wp-content/uploads/2019/09/chappal-while-riding-150x104.jpgKarnataka Trendingಆಟೋಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ಕನಸಿನಲ್ಲೂ ಭಯ ಬೀಳುವಂತೆ ದಂಡ ಹಾಕುತ್ತಿರುವ ಪೊಲೀಸರು ಸಾಕಷ್ಟು ದಂಡವನ್ನು ಈಗಾಗಲೇ ಕಲೆಕ್ಟ್ ಮಾಡಿದ್ದಾರೆ. ಬೆಂಗಳೂರು ನಗರದಲ್ಲೇ ಕೋಟಿ ಕೋಟಿ ಕಲೆಕ್ಷನ್ ಆಗಿದೆ. ಇತ್ತ ಚಿಕ್ಕ ಪುಟ್ಟ ಕಾನೂನು ಮೀರಿದ್ದಕ್ಕೂ ಸರ್ಕಾರ ಮೂರುಪಟ್ಟು ದಂಡವನ್ನು ನಿರ್ದಾಕ್ಷಣ್ಯ ಇಲ್ಲದೆ ವಿಧಿಸಿದೆ. ಹೊಸ ಮೋಟಾರು ನಿಯಮದಡಿ ಇದೀಗ ಸಾಕಷ್ಟು ಮಂದಿ ಫೈನ್ ಕಟ್ಟಿದ್ದಾರೆ. ಒಂದೊಂದು ಗಾಡಿಗೆ 23000 ರೂ ದಂಡ ವಿಧಿಸಿದ ಉದಾಹರಣೆ ಇದೆ. ಇನ್ನು ಲಾರಿ...Film | Devotional | Cricket | Health | India