ಕೆಲವರಿಗೆ ಸಾಮಾನ್ಯವಾಗಿ ಅವರು ಹುಟ್ಟುತ್ತಲೇ ಅವರ ದೇಹದಲ್ಲಿ ಕಪ್ಪು ಮಚ್ಛೆ ಇರುತ್ತದೆ ಮತ್ತು ಕೆಲವು ಜ್ಯೋತಿಷ್ಯರು ತಮ್ಮ ಕಪ್ಪು ಮಚ್ಛೆ ಮತ್ತು ಕೈಗಳನ್ನ ನೋಡಿ ನಮ್ಮ ಭವಿಷ್ಯವನ್ನ ಹೇಳುತ್ತಾರೆ ಮತ್ತು ಕೆಲವರು ಇದನ್ನ ನಂಬುತ್ತಾರೆ ಮತ್ತು ಕೆಲವು ಇದನ್ನ ಮೂಡನಂಬಿಕೆ ಅನ್ನುತ್ತಾರೆ. ಇನ್ನು ಆಡುಮಾತಿಗೆ ನಾವು ಕೆಲವರಿಗೆ ನಿಮ್ಮ ಬಾಯಿ ಮಚ್ಛೆ ಇದೆ ನೀನು ಹೇಳಿದ ಹಾಗೆ ಆಯಿತು ಎಂದು ಹೇಳುತ್ತೇವೆ, ಆದರೆ ಜ್ಯೋತಿಷ್ಯ ಶಾಸ್ತ್ರದ ಇನ್ನು ಶರೀರದ ಈ ಬಾಗಗಳಲ್ಲಿ ಕಪ್ಪು ಮಚ್ಛೆ ಇದ್ದರೆ ಆತ ಆದಷ್ಟು ಬೇಗ ಶ್ರೀಮಂತನಾಗುತ್ತಾನೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ, ಹಾಗಾದರೆ ಶರೀರದ ಯಾವ ಬಾಗಗಳಲ್ಲಿ ಕಪ್ಪು ಮಚ್ಛೆ ಇದ್ದರೆ ಏನು ಪ್ರಯೋಜನ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಕೆಲವರಿಗೆ ದೇಹದ ಕೆಲವು ಬಾಗಗಳಲ್ಲಿ ಮಚ್ಛೆಗಳು ಇರುತ್ತದೆ ಮತ್ತು ಕೆಲವರಿಗೆ ಕಪ್ಪು ಮಚ್ಛೆಯ ಮೇಲೆ ಕೂದಲು ಇರುತ್ತದೆ, ಯಾರಿಗೆ ಮಚ್ಛೆಯ ಮೇಲೆ ಕೂದಲು ಇರುತ್ತದೆಯೋ ಅವರು ಧನವಂತರು ಮತ್ತು ಬಹಳ ಅದೃಷ್ಟಶಾಲಿಗಳು ಆಗಿರುತ್ತಾರೆ. ಇನ್ನು ಯಾವ ಗಂಡಸು ತನ್ನ ಎರಡು ಕಣ್ಣಿನ ಮೇಲೆ ಮಚ್ಛೆ ಹೊಂದಿರುತ್ತಾನೋ ಆತ ಧೀರ್ಘ ಆಯಸ್ಸನ್ನ ಹೊಂದಿರುವ ಮನುಷ್ಯ ಆಗಿರುತ್ತಾನೆ ಮತ್ತು ಗಂಡಸಿನ ತಲೆಯ ಮೇಲೆ ಮಚ್ಛೆ ಇದ್ದರೆ ತುಂಬಾ ಗರ್ವವಂತ ಮತ್ತು ಒಳ್ಳೆಯ ವಿಮರ್ಶಕ ಆಗಿರುತ್ತಾನೆ ಎಂದು ಹೇಳುತ್ತಿದ್ದಾರೆ ಜ್ಯೋತಿಷ್ಯ ಪಂಡಿತರು.

Black mole future

ಇನ್ನು ಮಹಿಳೆಯರಿಗೆ ಅಥವಾ ಗಂಡಸರಿಗೆ ಹಣೆಯ ಮೇಲೆ ಕಪ್ಪು ಮಚ್ಛೆ ಇದ್ದರೆ ಅವರು ರಾಜಕೀಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನ ಮಾಡುತ್ತಾರೆ ಮತ್ತು ಹಣ ವಿಷಯದಲ್ಲಿ ಕೂಡ ಬಲಿಷ್ಠರಾಗಿರುತ್ತಾರೆ, ಇನ್ನು ಹಣೆಯ ಕೆಳಗಡೆ ಕಪ್ಪು ಮಚ್ಛೆ ಇದ್ದರೆ ಅಂತಹ ವ್ಯಕ್ತಿಗಳಿಗೆ ಏಕಾಗ್ರತೆ ಬಹಳ ಹೆಚ್ಚಾಗಿ ಇರುತ್ತದೆ. ಇನ್ನು ಕೆಲವರಿಗೆ ಕಣ್ಣಿನ ರೆಪ್ಪೆಯ ಮೇಲೆ ಕಪ್ಪು ಮಚ್ಛೆ ಇರುತ್ತದೆ ಮತ್ತು ಅಂತಹ ವ್ಯಕ್ತಿ ಎಷ್ಟೇ ಕಷ್ಟದ ಕೆಲಸವನ್ನ ಕೂಡ ತನ್ನ ಏಕಾಗ್ರತೆಯ ಮೂಲಕ ಅದನ್ನ ಯಶಸ್ವಿಯಾಗಿ ಮುಗಿಸುತ್ತಾರೆ. ಇನ್ನು ತುಟಿಯ ಮೇಲೆ ಮಚ್ಛೆ ಇದ್ದರೆ ಅವರಿಗೆ ಬಂದುಗಳಿಂದ ತುಂಬಾ ತೊಂದರೆ ಉಟಾಂಗುವ ಸಾಧ್ಯತೆ ಜಾಸ್ತಿ ಇದೆ ಮತ್ತು ನಾಲಿಗೆಯ ಮೇಲೆ ಮಚ್ಛೆ ಹೊಂದಿರುವವರು ತುಂಬಾ ಬುದ್ದಿವಂತರು ಆಗಿರುತ್ತಾರೆ.

ಇನ್ನು ಭುಜದ ಮೇಲೆ ಮಚ್ಛೆಯನ್ನ ಹೊಂದಿರುವ ವ್ಯಕ್ತಿಯೂ ಬಹಳ ನಿಷ್ಠಾವಂತ ವ್ಯಕ್ತಿ ಆಗಿರುತ್ತಾನೆ ಮತ್ತು ಆತ ಜೀವನದಲ್ಲಿ ಕಷ್ಟಪಟ್ಟು ದುಡಿಮೆಯನ್ನ ಮಾಡಿ ಮುಂದೆ ಬರುತ್ತಾನೆ, ಇನ್ನು ಕತ್ತಿನ ಎಡಭಾಗದಲ್ಲಿ ಮಚ್ಛೆ ಇದ್ದರೆ ಆತನಿಗೆ ದುರದೃಷ್ಟ ಕಟ್ಟಿಟ್ಟ ಬುತ್ತಿ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕಾಲಿನ ತೊಡೆಯ ಮೇಲೆ ಮಚ್ಛೆ ಇದ್ದರೆ ಅವರು ಮಾಡುವ ಕೆಲಸದಲ್ಲಿ ಯಶಸ್ಸನ್ನ ಸಾಧಿಸುತ್ತಾರೆ ಮತ್ತು ಮಾಡುವ ವ್ಯವಹಾರದಲ್ಲಿ ಒಳ್ಳೆಯ ಲಾಭವನ್ನ ಗಳಿಸುತ್ತಾರೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ.

Black mole future

Please follow and like us:
error0
http://karnatakatoday.in/wp-content/uploads/2019/10/body-secrets-1024x576.pnghttp://karnatakatoday.in/wp-content/uploads/2019/10/body-secrets-150x104.pngeditorಆರೋಗ್ಯಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಕೆಲವರಿಗೆ ಸಾಮಾನ್ಯವಾಗಿ ಅವರು ಹುಟ್ಟುತ್ತಲೇ ಅವರ ದೇಹದಲ್ಲಿ ಕಪ್ಪು ಮಚ್ಛೆ ಇರುತ್ತದೆ ಮತ್ತು ಕೆಲವು ಜ್ಯೋತಿಷ್ಯರು ತಮ್ಮ ಕಪ್ಪು ಮಚ್ಛೆ ಮತ್ತು ಕೈಗಳನ್ನ ನೋಡಿ ನಮ್ಮ ಭವಿಷ್ಯವನ್ನ ಹೇಳುತ್ತಾರೆ ಮತ್ತು ಕೆಲವರು ಇದನ್ನ ನಂಬುತ್ತಾರೆ ಮತ್ತು ಕೆಲವು ಇದನ್ನ ಮೂಡನಂಬಿಕೆ ಅನ್ನುತ್ತಾರೆ. ಇನ್ನು ಆಡುಮಾತಿಗೆ ನಾವು ಕೆಲವರಿಗೆ ನಿಮ್ಮ ಬಾಯಿ ಮಚ್ಛೆ ಇದೆ ನೀನು ಹೇಳಿದ ಹಾಗೆ ಆಯಿತು ಎಂದು ಹೇಳುತ್ತೇವೆ, ಆದರೆ ಜ್ಯೋತಿಷ್ಯ ಶಾಸ್ತ್ರದ ಇನ್ನು ಶರೀರದ...Film | Devotional | Cricket | Health | India