Actress Shilpa Shetty

ಚಿತ್ರರಂಗಕ್ಕೆ ಬಂದ ಬಳಿಕ ಕೆಲವು ನಟ ನಟಿಯರು ಹಣ ಸಂಪಾದನೆ ಮುಖ್ಯ ಎಂದು ಜಾಹಿರಾತು ಹಾಗೂ ಇನ್ನಿತರ ಪ್ರಮೋಷನ್ ಗಳಲ್ಲಿ ಹೆಚ್ಚಾಗಿ ಬ್ಯುಸಿ ಇರುತ್ತಾರೆ, ಅದರಲ್ಲೂ ಟಿವಿ ಶೋ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಬಂದು ಶೋ ಕೊಡುವವರ ಸಂಖ್ಯೆ ಹೆಚ್ಚು. ಇನ್ನು ಕೆಲವೇ ಕೆಲವು ಮಂದಿ ಮಾತ್ರ ಜಾಹೀರಾತುಗಳನ್ನು ಒಪ್ಪಿಕೊಳ್ಳುವ ಮೊದಲು ಅದರಿಂದ ಜನರಿಗೆ ಲಾಭ ಇದೆಯಾ ಅಥವಾ ನಷ್ಟವೋ ಎನ್ನುವುದನ್ನು ಯೋಚಿಸುತ್ತಾರೆ, ಈಗ ಅಂತಹುದೇ ಸಾಲಿಗೆ ಶಿಲ್ಪಾ ಶೆಟ್ಟಿ ಕೂಡ ಸೇರಿದ್ದಾರೆ.

ನಮಗೆಲ್ಲ ತಿಳಿದಿರುವಂತೆ ಶಿಲ್ಪಾ ಆರೋಗ್ಯದ ವಿಷಯದಲ್ಲಿ ಬಹಳ ಎಚ್ಚರಿಕೆ ವಹಿಸುತ್ತಾರೆ, ಯಾವಾಗಲೂ ಯೋಗ ಹಾಗೂ ವ್ಯಾಯಾಮ ಈ ರೀತಿಯ ಚಟುವಟಿಕೆಯಲ್ಲಿ ತೊಡಗಿರುತ್ತಾರೆ, ಬಾಲಿವುಡ್ ನಟಿ ಮಂಗಳೂರು ಮೂಲದ ಚೆಲುವೆ ಶಿಲ್ಪಾ ಶೆಟ್ಟಿ ಫಿಟ್ ನೆಸ್ ಗೆ ಎಷ್ಟು ಮಹತ್ವ ನೀಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.

Actress Shilpa Shetty

ಇನ್ನು ಶಿಲ್ಪಿ ಶೆಟ್ಟಿ ಅವರು ಕಳೆದ 13 ವರ್ಷಗಳಿಂದ ಯೋಗ ಕುರಿತ ವೀಡಿಯೊ ಸಿದ್ದಪಡಿಸುವಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದಾರೆ, ಫಿಟ್ ನೆಸ್ ಗೆ ಸಂಬಂಧಿಸಿದ ಕಂಪನಿಯೊಂದು ಅವರಿಗೆ ಹೊಸ ಆಫರ್ ನೀಡಿದೆ, ಪ್ರಮುಖ ಆಯುರ್ವೇದ ಕಂಪನಿಯಾದ ಸ್ಲಿಮ್ಮಿಂಗ್ ಪಿಲ್ಸ್ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳಲು 10 ಕೋಟಿ ರೂ. ನೀಡುವುದಾಗಿ ಕಂಪನಿ ತಿಳಿಸಿದೆ, ಆದರೆ ಶಿಲ್ಪಾ ಶೆಟ್ಟಿ ಕಂಪನಿಯ ಜಾಹಿರಾತಿನಲ್ಲಿ ಕಾಣಿಸಿಕೊಳ್ಳಲು ನಿರಾಕರಿಸಿದ್ದಾರೆ.

ತಮಗೆ ನಂಬಿಕೆಯಿಲ್ಲದ ವಿಷಯಗಳನ್ನು ಜನರಿಗೆ ಹೇಳಲು ತಮ್ಮಿಂದ ಸಾಧ್ಯವಿಲ್ಲ ಎಂದು ಕಂಪನಿಗೆ ಖಡಕ್ ಆಗಿ ಉತ್ತರಿಸಿದ್ದಾರೆ, ಸರಿಯಾದ ದೈಹಿಕ ಅಭ್ಯಾಸ, ಸೂಕ್ತ ಆಹಾರ ಸೇವಿಸಿದರೆ, ಫಿಟ್ ನೆಸ್ ತಾನಾಗಿಯೇ ಬರುತ್ತದೆ ಎಂಬುದು ಶಿಲ್ಪಾಳ ವಾದ.

Actress Shilpa Shetty

ಸ್ಲಿಮ್ಮಿಂಗ್ ಮಾತ್ರೆಗಳನ್ನು ಸೇವಿಸಿದರೆ ತೂಕ ಕಡಿಮೆಯಾಗಲಿದೆ ಎಂಬ ಕಂಪನಿಯ ಜಾಹಿರಾತಿನಲ್ಲಿ ಕಾಣಿಸಿಕೊಳ್ಳಲು ತಮ್ಮ ಆತ್ಮಸಾಕ್ಷಿ ಅಡ್ಡಿಯಾಗುತ್ತಿದೆ, ಮನಸಾಕ್ಷಿ ಒಪ್ಪದ ಯಾವ ಕೆಲಸವನ್ನು ತಾವು ಎಂದೂ ಮಾಡುವುದಿಲ್ಲ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ. ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಸ್ವಲ್ಪ ತಡವಾಗಿಯಾದರೂ ದೇಹದ ತೂಕ ಇಳಿಸಬಹುದಾಗಿದೆ.

ಫಿಟ್ನೆಸ್ ಮತ್ತು ಆರೋಗ್ಯಕರ ಆಹಾರ ಪದಾರ್ಥಗಳ ಕುರಿತು ಶಿಲ್ಪಾ ಶೆಟ್ಟಿ ಆ್ಯಪ್ ಅನ್ನು ಸಹ ಬಿಡುಗಡೆ ಮಾಡಿದ್ದಾರೆ. ಇನ್ನು ಈ ಆ್ಯಪ್ ಮೂಲಕ ಆಹಾರ ನಿಯಮ ಮತ್ತು ಫಿಟ್ ನೆಸ್ ಕುರಿತು ಸಲಹೆ ಕೇಳಿ ಪಡೆಯಬಹುದಾಗಿದೆ,ಇನ್ನು ರಾಜ್ ಕುಂದ್ರಾ ರನ್ನು ವರಿಸಿದ ಬಳಿಕ ಶಿಲ್ಪಾ ಶೆಟ್ಟಿ ಚಿತ್ರರಂಗದಿಂದ ದೂರವಾಗಿದ್ದರು ಇದೀಗ ಮತ್ತೆ ಕಾಲಿಡಲಿದ್ದಾರೆ ಅನ್ನುವ ಸುದ್ದಿ ಸಿಕ್ಕಿದೆ.

Actress Shilpa Shetty

Please follow and like us:
error0
http://karnatakatoday.in/wp-content/uploads/2019/08/Actress-Shilpa-Silpa-Shetty-1024x576.jpghttp://karnatakatoday.in/wp-content/uploads/2019/08/Actress-Shilpa-Silpa-Shetty-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲ  ಚಿತ್ರರಂಗಕ್ಕೆ ಬಂದ ಬಳಿಕ ಕೆಲವು ನಟ ನಟಿಯರು ಹಣ ಸಂಪಾದನೆ ಮುಖ್ಯ ಎಂದು ಜಾಹಿರಾತು ಹಾಗೂ ಇನ್ನಿತರ ಪ್ರಮೋಷನ್ ಗಳಲ್ಲಿ ಹೆಚ್ಚಾಗಿ ಬ್ಯುಸಿ ಇರುತ್ತಾರೆ, ಅದರಲ್ಲೂ ಟಿವಿ ಶೋ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಬಂದು ಶೋ ಕೊಡುವವರ ಸಂಖ್ಯೆ ಹೆಚ್ಚು. ಇನ್ನು ಕೆಲವೇ ಕೆಲವು ಮಂದಿ ಮಾತ್ರ ಜಾಹೀರಾತುಗಳನ್ನು ಒಪ್ಪಿಕೊಳ್ಳುವ ಮೊದಲು ಅದರಿಂದ ಜನರಿಗೆ ಲಾಭ ಇದೆಯಾ ಅಥವಾ ನಷ್ಟವೋ ಎನ್ನುವುದನ್ನು ಯೋಚಿಸುತ್ತಾರೆ, ಈಗ ಅಂತಹುದೇ ಸಾಲಿಗೆ ಶಿಲ್ಪಾ...Film | Devotional | Cricket | Health | India