ಮಧ್ಯಮ ವರ್ಗದ ಬಡ ಜನರು ಅನಾರೋಗ್ಯಕ್ಕೆ ತುತ್ತಾದಾಗ ಅವರು ಪಡುವ ಸಂಕಷ್ಟ ಅಷ್ಟಿಷ್ಟಲ್ಲ, ಸರ್ಕಾರದ ಯಾವ ಯೋಜನೆಗಳು ಒಮ್ಮೊಮ್ಮೆ ಅವರಿಗೆ ಅರಿವಿಲ್ಲದೆಯೋ ಅಥವಾ ಬೇರೆ ಯಾವುದೊ ಕಾರಣಕ್ಕೋ ಯಾವ ರೀತಿಯಲ್ಲೂ ಸಹಾಯಕ್ಕೆ ಬರುವುದಿಲ್ಲ. ಒಮ್ಮೊಮ್ಮೆ ಆಸ್ಪತ್ರೆಗಳ ವೈಫಲ್ಯತೆ, ಹಾಗು ಸರಿಯಾದ ಮಾಹಿತಿ ಇಲ್ಲದೆ ಇರುವುದರಿಂದ ಕೂಡ ಅವರು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ ಮತ್ತು ನಿಜವಾಗಿ ಹೇಳಬೇಕೆಂದರೆ ಸರ್ಕಾರೀ ಆಸ್ಪತ್ರೆಗಳು ಇಂದು ಸ್ವಲ್ಪ ಮಟ್ಟಿಗೆ ಹೈಟೆಕ್ ಆಗಿದ್ದರೂ ಕೂಡ ಅಲ್ಲಿನ ನಿರ್ವಹಣಾ ವ್ಯವಸ್ಥೆ ಇನ್ನು ಕೂಡ ಸುಧಾರಿಸಿಲ್ಲ. ಆಸ್ಪತ್ರೆಗಳು ಜನರ ನೋವು ನೀಗಿಸುವ ತಾಣವಾಗಬೇಕೇ ಹೊರತು ಮತ್ತಷ್ಟು ಕಣ್ಣೀರಿಡುವಂತೆ ಮಾಡಬಾರದು, ಇಂದು ಅದೆಷ್ಟೋ ಸರಕಾರಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ತಾಂಡವ ಆಡುತ್ತಿದೆ.

ಸರ್ಕಾರ ಒಮ್ಮೆಯಾದರೂ ಇದರ ಬಗ್ಗೆ ಎಚ್ಛೆತ್ತುಕೊಳಲೇಬೇಕು, ಇನ್ನು ಸದ್ಯ ಬಂದಿರುವ ಬ್ರೇಕಿಂಗ್ ಸುದ್ದಿಗಳ ಪ್ರಕಾರ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸದ್ಯಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿದೆ. ಈಗಾಗಲೇ ಸರ್ಕಾರೀ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಎಂದರೆ ಕೂಡ ಉಚಿತವಾಗಿಲ್ಲ ಮತ್ತು ಅಲ್ಲಲ್ಲಿ ಸ್ವಲ್ಪ ಮಟ್ಟಿನ ಹಣ ಕೂಡ ಭರಿಸಲೇಬೇಕು, ಇದೆ ವಿಷಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಬಡವರ ಪರವಾಗಿ ಈ ಮಾಹಿತಿ ನೀಡಿದೆ.

BPL card free treatment

ಈ ಹಿಂದೆ ಬಿಪಿಎಲ್ ಕಾರ್ಡುದಾರರು ಆಸ್ಪತ್ರೆಗೆ ರೋಗಿಯಾಗಿ ಸೇರಿದಾಗ ವರಿಗೆ ನೀಡುವ ಚಿತ್ಸೆಯಾದ ಎಕ್ಸ್ ರೇ ಹಾಗು ಓಪಿಡಿ, ಮತ್ತು ಸ್ಕಾನಿಂಗ್ ಮಾಡಿಸಿದಲ್ಲಿ ಅದರ 50 ಪರ್ಸೆಂಟ್ ಹಣ ನೀಡಲೇಬೇಕಾಗಿತ್ತು ಆದರೆ ಈಗ ಹೊರಡಿಸಿರುವ ಅಧಿಸೂಚನೆಯಂತೆ ಕಾರ್ಡುದಾರರು ಯಾವ ಶುಲ್ಕ ಕೂಡ ನೀಡದೆ ಉಚಿತ ಸೇವೆ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಬದಲಾಗಿರುವ ಈಗಿನ ನಿಯಮದ ಪ್ರಕಾರ ರಾಜ್ಯ ಸರ್ಕಾರ ಹೇಳಿರುವ ವಿಷಯಗಳೇನು ಎನ್ನುವುದರ ಬಗ್ಗೆ ಕಣ್ಣು ಹಾಯಿಸೋಣ ಬನ್ನಿ ಬದಲಾಗಿರುವ ಈ ನಿಯಮಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ಅನಂಗೆ ತಿಳಿಸಿ.

ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಸಿ ಅಶ್ವತ್ ನಾರಾಯಣ್ ಅವರು ಹೊರಡಿಸಿರುವ ಸುತ್ತೋಲೆಯ ಪ್ರಕಾರ ಬಿಪಿಎಲ್ ಕಾರ್ಡ್ ಇದ್ದವರಿಗೆ ಉಚಿತ ವ್ಯದ್ಯಕೀಯ ಚಿಕೆತ್ಸೆ ನೀಡುವ ಬಗ್ಗೆ ಎಲ್ಲ ಪ್ರಸ್ತಾವನೆ ಇಡಲಾಗಿದೆ. ಇದರ ಪ್ರಕಾರ ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಸರ್ಕಾರೀ ವೈದ್ಯಕೀಯ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಹೊರರೋಗಿಗಳಿಗೆ ಚಿಕಿತ್ಸೆ ಹಾಗು ತಪಾಸಣೆ ಎರಡು ಕೂಡ ಉಚಿತವಾಗಿ ದೊರೆಯಲಿದೆ ಅದು ಕೂಡ ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ.

ರೋಗಿಯ ಬಳಿ ಬಿಪಿಎಲ್ ಜೊತೆ ಆಧಾರ್ ಕಾರ್ಡ್ ಕೂಡ ಇದ್ದಲ್ಲಿ ಅರೋಗ್ಯ ಕರ್ನಾಟಕ ಅಯುಷ್ಮಾನ್ ಭಾರತ ಯೋಜನೆಯಲ್ಲಿ ಶೇಕಡಾ 94 ರಷ್ಟು ಚಿತ್ಸೆಯ ಹಣವನ್ನು ಸರ್ಕಾರವೇ ಭರಿಸಲಿದೆ ಮತ್ತು ಇದು ಬಡವರ ಪಾಲಿಗೆ ಇದು ದೊಡ್ಡ ವರದಾನವಾಗಿದೆ. ಕೇಂದ್ರ ಸರ್ಕಾರದ ಅಯುಷ್ಮಾನ್ ಯೋಜನೆ ಹಾಗು ರಾಜ್ಯ ಸರ್ಕಾರದ ಅರೋಗ್ಯ ಕರ್ನಾಟಕ ಯೋಜನೆ ಇವೆರಡರ ಲಾಭವನ್ನು ಕೂಡ ಈಗ ಬಡವರು ಜೊತೆಯಲ್ಲಿ ಪಡೆಯಲಿದ್ದಾರೆ, ಹೀಗಾಗಿ ಎಲ್ಲಾ ರೋಗಿಗಳು ಆಧಾರ್ ಹಾಗಿ ರೇಷನ್ ಕಾರ್ಡ್ ಹೊಂದಿರಲೇಬೇಕು ಸದ್ಯಕ್ಕೆ ಈ ಮಾಹಿತಿಯನ್ನು ಎಲ್ಲ ಮಧ್ಯಮ ವರ್ಗದ ಜನರಿಗೂ ಕೂಡ ತಲುಪಿಸುವ ಜವಾಬ್ದಾರಿ ನಿಮ್ಮದು.

BPL card free treatment

Please follow and like us:
error0
http://karnatakatoday.in/wp-content/uploads/2019/10/bpl-free-1024x576.pnghttp://karnatakatoday.in/wp-content/uploads/2019/10/bpl-free-150x104.pngKarnataka Trendingಅಂಕಣಆರೋಗ್ಯನಗರಬೆಂಗಳೂರುಸುದ್ದಿಜಾಲಮಧ್ಯಮ ವರ್ಗದ ಬಡ ಜನರು ಅನಾರೋಗ್ಯಕ್ಕೆ ತುತ್ತಾದಾಗ ಅವರು ಪಡುವ ಸಂಕಷ್ಟ ಅಷ್ಟಿಷ್ಟಲ್ಲ, ಸರ್ಕಾರದ ಯಾವ ಯೋಜನೆಗಳು ಒಮ್ಮೊಮ್ಮೆ ಅವರಿಗೆ ಅರಿವಿಲ್ಲದೆಯೋ ಅಥವಾ ಬೇರೆ ಯಾವುದೊ ಕಾರಣಕ್ಕೋ ಯಾವ ರೀತಿಯಲ್ಲೂ ಸಹಾಯಕ್ಕೆ ಬರುವುದಿಲ್ಲ. ಒಮ್ಮೊಮ್ಮೆ ಆಸ್ಪತ್ರೆಗಳ ವೈಫಲ್ಯತೆ, ಹಾಗು ಸರಿಯಾದ ಮಾಹಿತಿ ಇಲ್ಲದೆ ಇರುವುದರಿಂದ ಕೂಡ ಅವರು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ ಮತ್ತು ನಿಜವಾಗಿ ಹೇಳಬೇಕೆಂದರೆ ಸರ್ಕಾರೀ ಆಸ್ಪತ್ರೆಗಳು ಇಂದು ಸ್ವಲ್ಪ ಮಟ್ಟಿಗೆ ಹೈಟೆಕ್ ಆಗಿದ್ದರೂ ಕೂಡ ಅಲ್ಲಿನ ನಿರ್ವಹಣಾ...Film | Devotional | Cricket | Health | India