Cafe coffee day owner

ಸ್ನೇಹಿತರೆ ಎಸ್ ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಅವರು ಮೊನ್ನೆ ರಾತ್ರಿಯಿಂದ ಕಾಣೆಯಾಗಿ ಇಂದು ಮೃತದೇಹ ಸಿಕ್ಕಿದ್ದು ನಿಮಗೆಲ್ಲ ಗೊತ್ತೆ ಇದೆ, ಹೌದು ಬೆಳಿಗ್ಗೆ ಸಿದ್ಧಾರ್ಥ್ ಅವರ ಮೃರ್ತದೇಹ ಹೊಯಿಗೆ ಬಜಾರ್ ನ ಮುಳಿಹಿತ್ಲು ಐಸ್ ಪ್ಲಾಂಟ್ ಸಮೀಪ ಪತ್ತೆಯಾಗಿದೆ. ಇನ್ನು ಅದೆಷ್ಟೋ ಕುಟುಂಬಗಳಿಗೆ ಆಶಾಕಿರಣರಾಗಿದ್ದ, ತುಂಬಾ ಸರಳ ವ್ಯಕ್ತಿ ಮತ್ತು ಕ್ರಿಯಾಶೀಲರಾಗಿದ್ದ ಇವರು ಕಾಫಿ ಮಾರುಕಟ್ಟೆಯ ವಿಸ್ತರಣೆಯ ಜೊತೆಗೆ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕೂಡ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು.

ಇನ್ನು ಸಿದ್ಧಾರ್ಥ್ ಅವರ ಕಳೆದುಕೊಂಡು ಅದೆಷ್ಟೋ ಬಡ ಕುಟುಂಬಗಳು ಅನಾಥವಾಗಿದೆ ಮತ್ತು ಸಿದ್ದಾರ್ಥ್ ಅವರ ಅಗ್ಗಳಿಕೆ ಇಡೀ ಭಾರತ ಭರಿಸಲಾಗದ ನಷ್ಟವಾಗಿದೆ ಆಗಿದೆ ಅಂತ ಹೇಳಿದರೆ ತಪ್ಪಾಗಲ್ಲ, ಇನ್ನು ಸಿದ್ಧಾರ್ಥ್ ಅವರ ನಾಪತ್ತೆ ಹಿನ್ನಲೆಯಲ್ಲಿ ಕಾಫಿ ಡೇ ಷೇರುಗಳು ಇಂದು ಅವರ ಸಾವಿನ ಹಿನ್ನಲೆಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದಿದೆ.

Cafe coffee day owner

ಇನ್ನು ಡಿ ಕೆ ಶಿವಕುಮಾರ್ ಅವರ ಕರೆ ಮಾಡಿದ್ದರು ಸಿದ್ಧಾರ್ಥ್ ಅವರ ಅಳಿಯ ಅನ್ನುವ ವಿಷಯ ಈಗ ತಿಳಿದು ಬಂದಿದೆ, ಹೌದು ಕೊನೆಯ ಕ್ಷಣದಲ್ಲಿ ಡಿ ಕೆ ಶಿವಕುಮಾರ್ ಅವರಿಗೆ ಸಿದ್ಧಾರ್ಥ್ ಅವರು ಕಾಲ್ ಮಾಡಿದ್ದರು ಎಂದು ಈಗ ತಿಳಿದು ಬಂದಿದೆ. ಹಾಗಾದರೆ ಡಿ ಕೆ ಶಿವಕುಮಾರ್ ಅವರಿಗೆ ಕಾಲ್ ಮಾಡಿ ಸಿದ್ದಾರ್ಥ್ ಅವರು ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಸಿದ್ಧಾರ್ಥ್ ಅವರ ಸಾವಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಇನ್ನು ಡಿ ಕೆ ಶಿವಕುಮಾರ್ ಅವರಿಗೆ ಕಾಲ್ ಮಾಡಿದ್ದ ಸಿದ್ಧಾರ್ಥ್ ಅವರು ನಾನು ನಿಮ್ಮನ್ನ ಅರ್ಜೆಂಟ್ ಆಗಿ ಭೇಟಿ ಮಾಡಬೇಕು ಎಂದು ಹೇಳಿದ್ದರು, ಆದರೆ ಡಿ ಕೆ ಶಿವಕುಮಾರ್ ತಾನು ಸ್ವಲ್ಪ ಹೊರಗೆ ಇರುವ ಕಾರಣ ಈಗ ಆಗಲ್ಲ ಸಂಜೆ ಸಿಗುತ್ತೀನಿ ಎಂದು ಹೇಳಿದ್ದರು.

Cafe coffee day owner

ಇನ್ನು ಮಾತು ಮುಂದುವರೆಸಿದ ಸಿದ್ಧಾರ್ಥ್ ಅವರು ಪರವಾಗಿಲ್ಲ ನಾಳೆ ಅಥವಾ ನಾಡಿದ್ದು ಭೇಟಿ ಮಾಡುವ ಎಂದು ಹೇಳಿದ್ದರು, ಇನ್ನು ಸಿದ್ದಾರ್ಥ್ ಅವರ ಕಾಲ್ ಬಗ್ಗೆ ಸ್ವತಃ ಡಿ ಕೆ ಶಿವಕುಮಾರ್ ಅವರೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

ಇನ್ನು ಸಿದ್ಧಾರ್ಥ್ ಅವರು ಸಾಯುವಂತಹ ವ್ಯಕ್ತಿ ಅಲ್ಲ ಇದರ ಹಿಂದೆ ಏನೋ ಇದೆ ಮತ್ತು ಸಾವಿನ ಕುರಿತು ತನಿಖೆ ಆಗಬೇಕು ಎಂದು ಹೇಳಿದ್ದಾರೆ ಡಿ ಕೆ ಶಿವಕುಮಾರ್ ಅವರು, ಇನ್ನು ಡಿ ಕೆ ಶಿವಕುಮಾರ್ ಅವರು ಬಳಿ ಸಿದ್ಧಾರ್ಥ್ ಅವರು ಇನ್ನಷ್ಟು ಮಾತುಗಳನ್ನ ಆಡಿದ್ದಾರೆ ಆದರೆ ಅದನ್ನ ಹೇಳಲು ಇದು ಸಮಯವಲ್ಲ ಎಂದು ಹೇಳಿದ್ದಾರೆ ಡಿ ಕೆ ಶಿವಕುಮಾರ್ ಅವರು, ಸ್ನೇಹಿತರೆ ಸಿದ್ಧಾರ್ಥ್ ಅವರ ಸಾವಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Cafe coffee day owner

Please follow and like us:
error0
http://karnatakatoday.in/wp-content/uploads/2019/07/siddarth-secrets-1024x576.jpghttp://karnatakatoday.in/wp-content/uploads/2019/07/siddarth-secrets-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಸ್ನೇಹಿತರೆ ಎಸ್ ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಅವರು ಮೊನ್ನೆ ರಾತ್ರಿಯಿಂದ ಕಾಣೆಯಾಗಿ ಇಂದು ಮೃತದೇಹ ಸಿಕ್ಕಿದ್ದು ನಿಮಗೆಲ್ಲ ಗೊತ್ತೆ ಇದೆ, ಹೌದು ಬೆಳಿಗ್ಗೆ ಸಿದ್ಧಾರ್ಥ್ ಅವರ ಮೃರ್ತದೇಹ ಹೊಯಿಗೆ ಬಜಾರ್ ನ ಮುಳಿಹಿತ್ಲು ಐಸ್ ಪ್ಲಾಂಟ್ ಸಮೀಪ ಪತ್ತೆಯಾಗಿದೆ. ಇನ್ನು ಅದೆಷ್ಟೋ ಕುಟುಂಬಗಳಿಗೆ ಆಶಾಕಿರಣರಾಗಿದ್ದ, ತುಂಬಾ ಸರಳ ವ್ಯಕ್ತಿ ಮತ್ತು ಕ್ರಿಯಾಶೀಲರಾಗಿದ್ದ ಇವರು ಕಾಫಿ ಮಾರುಕಟ್ಟೆಯ ವಿಸ್ತರಣೆಯ ಜೊತೆಗೆ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕೂಡ...Film | Devotional | Cricket | Health | India