ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ನಿಮ್ಮಲ್ಲಿದ್ದರೆ, ಯಾವುದೇ ದೇವಸ್ಥಾನಕೆ ನೀವು ಹೋಗುವ ಅಗತ್ಯವಿಲ್ಲ, ಬದಲಾಗಿ ಆ ದೇವರೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾನೆ ಎಂಬ ಮಾತಿದೆ. ಅದರಂತೆಯೇ ಸಹಾಯದ ಗುಣ ಮತ್ತು ಮಾಡುವ ಮನಸ್ಸು ನಿಮ್ಮಲ್ಲಿದ್ದರೆ ಎಂತಹ ದಾರಿಯನ್ನು ಕೂಡ ಆ ದೇವರು ತೋರಿಸಬಲ್ಲ, ಹೌದು ಇಡೀ ಕರ್ನಾಟಕವೇ ಈಗ ಭಾರಿ ಮಳೆಯಿಂದ ಕಂಗೆಟ್ಟಿರುವ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಎಲ್ಲಿಲ್ಲದ ಧನ ಸಹಾಯ ಹರಿದು ಬರುತ್ತಿದೆ. ಕೋಟಿಗಟ್ಟಲೆ ಹಣ ಸುರಿದು ಬಂದರೂ ಕೂಡ ಕಮ್ಮಿಯೇ ಸರಿ.

ಗಣ್ಯರು ದೇವಸ್ಥಾನಗಳು, ಹಾಗು ಬೇರೆ ರಾಜ್ಯದಿಂದಲೂ ನೆರವು ಬಂದಿದೆ. ಮುಖ್ಯವಾದ ಸಂಗತಿ ಏನೆಂದರೆ ಬೆಂಗಳೂರು ಪರಪ್ಪನ ಅಗ್ರಹಾರದ ಜೈಲಿನ ಖೈದಿಗಳು ನೆರೆ ಸಂತ್ರಸ್ತರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಿದ್ದಾರೆ ಗೊತ್ತಾ, ಒಮ್ಮೆ ಕೇಳಿದರೆ ಭೇಷ್ ಎನ್ನುತ್ತೀರಾ. ಉತ್ತರ ಕರ್ನಾಟಕ ಮಹಾ ಮಳೆಯಿಂದ ನಲುಗಿ ಹೋಗಿರುವುದು ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ಬಂದಿಗಳ ಮನ ಕಲಕಿದೆ.

ಕಾರಾಗೃಹದಲ್ಲಿರುವ 5035 ಬಂದಿಗಳು ಅಪರೂಪಕ್ಕೆ ಒಮ್ಮತದಿಂದ ಒಂದು ತೀರ್ಮಾನ ತೆಗೆದುಕೊಂಡಿದ್ದು ನಾಲ್ಕು ವಾರಗಳ ತಮ್ಮ ಪಾಲಿನ ಮಾಂಸಾಹಾರವನ್ನು ತ್ಯಜಿಸಿ ಇದರಿಂದ ಉಳಿತಾಯವಾಗುವ ಸರಾಸರಿ 10 ಲಕ್ಷ ರೂಪಾಯಿ ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ. ಬೆಂಗಳೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಈ ಮೊತ್ತದ ಹಣ ಸಲ್ಲಿಕೆ ಆಗುವಂತೆ ಮಾಡಿದ್ದಾರೆ.

ಉತ್ತರ ಕರ್ನಾಟಕ ಮಂದಿಯ ಸಂಕಷ್ಟವನ್ನು ನೋಡುತ್ತಲೇ ಇದ್ದೇವೆ. ನಮ್ಮಲ್ಲಿರುವ ಬಹುತೇಕ ಬಂದಿಗಳೂ ಉತ್ತರ ಕರ್ನಾಟಕ ಭಾಗದ ಬಡ ಕುಟುಂಬಗಳಿಂದಲೇ ಬಂದವರು. ಈ ಸಂಕಷ್ಟದ ಸಂದರ್ಭದಲ್ಲಿ ಎಷ್ಟು ನೆರವು ಹರಿದು ಬಂದರೂ ಅವರ ಬದುಕನ್ನು ಮೊದಲಿನಂತೆ ಕಟ್ಟಿ ನಿಲ್ಲಿಸುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಈ ಸಂದರ್ಭದಲ್ಲಿ ನಮ್ಮಿಂದ ಆಗುವ ಕಿರು ನೆರವನ್ನು ನೀಡಲು ನಿರ್ಧರಿಸಿದ್ದೇವೆ ಎಂದು ಬಂದಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಜೈಲಿನಲ್ಲಿದ್ದರು ಕೂಡ ಸಹಾಯದ ಗುಣವನ್ನು ಹೊಂದಿರುವ ಈ ಕೈದಿಗಳಿಗೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.ರಾಜ್ಯ ಎಂದೂ ಕಾಣದ ಭೀಕರ ಬರಗಾಲಕ್ಕೆ ತುತ್ತಾಗಿದ್ದು, ರಾಜ್ಯಾದ್ಯಂತ ನೆರವಿನ ಮಹಾಪೂರವೇ ಹರಿದು ಬಂದಿದೆ. ಅದೇನೇ ಇರಲಿ ಸಹಾಯ ಹಸ್ತ ಚಾಚುವ ಗುಣ ಇರುವ ಈ ಕೈದಿಗಳ ಒಮ್ಮತದ ನಿರ್ಧಾರಕ್ಕೆ ರಾಜ್ಯವೇ ಸಂತಸಪಟ್ಟಿದೆ. ಇನ್ನಾದರೂ ನಾವು ಈ ಭೀಕರ ನೆರೆಯ ಪಾಠವನ್ನು ಕಲಿತು ಪರಿಸರ ಸಂರಕ್ಷಣೆಯ ಪಾಠ ಕಲಿಯೋಣ.

Please follow and like us:
error0
http://karnatakatoday.in/wp-content/uploads/2019/08/BANGLORE-JAIL-1024x576.jpghttp://karnatakatoday.in/wp-content/uploads/2019/08/BANGLORE-JAIL-150x104.jpgKarnataka Trendingಎಲ್ಲಾ ಸುದ್ದಿಗಳುಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ನಿಮ್ಮಲ್ಲಿದ್ದರೆ, ಯಾವುದೇ ದೇವಸ್ಥಾನಕೆ ನೀವು ಹೋಗುವ ಅಗತ್ಯವಿಲ್ಲ, ಬದಲಾಗಿ ಆ ದೇವರೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾನೆ ಎಂಬ ಮಾತಿದೆ. ಅದರಂತೆಯೇ ಸಹಾಯದ ಗುಣ ಮತ್ತು ಮಾಡುವ ಮನಸ್ಸು ನಿಮ್ಮಲ್ಲಿದ್ದರೆ ಎಂತಹ ದಾರಿಯನ್ನು ಕೂಡ ಆ ದೇವರು ತೋರಿಸಬಲ್ಲ, ಹೌದು ಇಡೀ ಕರ್ನಾಟಕವೇ ಈಗ ಭಾರಿ ಮಳೆಯಿಂದ ಕಂಗೆಟ್ಟಿರುವ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಎಲ್ಲಿಲ್ಲದ ಧನ ಸಹಾಯ ಹರಿದು...Film | Devotional | Cricket | Health | India