ಬಿರಿಯಾನಿ ತಿನ್ನುವವರಿಗೆ ಶಾಕಿಂಗ್ ಸುದ್ದಿ…. ಇಲ್ಲಿ ನಡೆದಿದ್ದು ಕೇಳಿದರೆ ಜನ್ಮದಲ್ಲಿ ತಿನ್ನಲ್ಲ.
ನೀವು ಹೊರಗಡೆ ಹೋಟೆಲ್ ನಲ್ಲಿ ಬಿರಿಯಾನಿ ತಿನ್ನುತ್ತಿದ್ದೀರಾ, ಹಾಗಾದರೆ ನೀವು ನಂಬಲಾರದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಕೆಲವು ವರ್ಷಗಳಿಂದ ಎಲ್ಲಾ ಕಡೆ ಅಂಬುರ್ ಬಿರಿಯಾನಿಯಲ್ಲಿ 50 ರುಪಾಯಿಗೆ ಚಿಕನ್ ಬಿರಿಯಾನಿ, 100 ರುಪಾಯಿಗೆ ಮಟನ್ ಬಿರಿಯಾನಿಯ ಲೌಟ್ ಲೇಟ್ ನ್ನ ನೋಡೇ ಇರುತ್ತೀರಾ, ಇನ್ನು ರೈಲ್ವೆ ಸ್ಟೇಷನ್ ಗಳಲ್ಲಿ ಕೆಜಿಗಟ್ಟಲೆ ಬಿರಿಯಾನಿಗಳು 150 ರೂಪಾಯಿಯಿಂದ 200 ರುಪಾಯಿಗೆ ಸಿಗುತ್ತದೆ.
ಆದರೆ ಅಲ್ಲಿ ಸಿಗುವ ಮಾಂಸ ಯಾವುದು ಅಂತ ಯಾವತ್ತಾದರೂ ಯೋಚನೆ ಮಾಡಿದ್ದೀರಾ, ಯಾಕೆ ಅಂದರೆ ಇಡೀ ಭಾರತವೇ ಬೆಚ್ಚಿ ಬೀಳುವ ಒಂದು ಸ್ಪೋಟಕ ಸುದ್ದಿ ಹೊರಬಿದ್ದಿದೆ.
ನಿನ್ನೆ ಚನೈ ನ ಎಗ್ಮೋರ್ ರೈಲ್ವಟ್ ಸ್ಟೇಷನ್ ನ ಫ್ಲಾಟ್ ಫಾರಂ ನಂಬರ್ 5 ರಲ್ಲಿ ರೈಲ್ವೆ ಪೊಲೀಸರು ಗೂಡ್ಸ್ ಪಾರ್ಸೆಲ್ ನ್ನ ತನಿಖೆ ಮಾಡುತ್ತಿದ್ದರು. ಹೀಗೆ ತನಿಖೆ ಮಾಡುವಾಗ ಒಂದೇ ತರಹ ಪ್ಯಾಕಿಂಗ್ ಮಾಡಿದ ಹತ್ತಾರು ಬಾಕ್ಸ್ ಗಳು ಪೊಲೀಸರು ಸಿಕ್ಕವು, ಇನ್ನು ಪೊಲೀಸರು ಅದನ್ನ ತಗೆದು ನೋಡಿದಾಗ ಅದರಲ್ಲಿ ಇದ್ದ ಮಾಂಸ ಕೋಳಿ ಅಥವಾ ಕುರಿಯ ಮಾಂಸ ಅಲ್ಲ ಬದಲಾಗಿ ನಾಯಿಯ ಮಾಂಸ ಇದ್ದಿತ್ತು.
ಇನ್ನು ನಾಯಿಯ ಮಾಂಸ ಎಷ್ಟಿತ್ತು ಅಂದರೆ ಬರೊಬ್ಬರು 2 ಸಾವಿರ ಕೆಜಿ ಮಾಂಸ ಇದ್ದವು, ಇನ್ನು ಇದನ್ನ ನೋಡಿ ಗಾಬರಿಗೊಂಡ ಪೊಲೀಸರು ಎಲ್ಲಾ ಬಾಕ್ಸ್ ಗಳನ್ನ ಸೀಜ್ ಮಾಡಿ ವಿಚಾರಣೆ ಮಾಡಿದಾಗ, ಆಗ ಪೊಲೀಸರಿಗೆ ತಿಳಿದಿದ್ದು ಏನು ಅಂದರೆ ಈ ಎಲ್ಲಾ ಬಾಕ್ಸ್ ಗಳು ರಾಜಸ್ಥಾನ್ ನಿಂದ ಚನೈ ಗೆ ರೈಲಿನಲ್ಲಿ ಬಂದಿದ್ದವು ಎಂದು ಪೊಲೀಸರಿಗೆ ಗೊತ್ತಾಗಿದೆ.
ನಂತರ ಪೊಲೀಸರಿಗೆ ತಿಳಿದು ಬಂದಿದ್ದು ಏನು ಅಂದರೆ ಈ ಮಾಂಸಗಳನ್ನ ಹತ್ತಿರದ ಕೋಳಿ ಮತ್ತು ಚಿಕೆನ್ ಬಿರಿಯಾನಿ ಹೋಟೆಲ್ ಗಳಿಗೆ ಕಳುಹಿಸಲಾಗುತ್ತದೆ ಎಂದು, ಅಲ್ಲಿ ಮಟನ್ ಮತ್ತು ಚಿಕೆನ್ ಮಾಂಸದ ಜೊತೆಗೆ ನಾಯಿ ಮಾಂಸವನ್ನ ಕೂಡ ಮಿಕ್ಸ್ ಮಾಡುತ್ತಾರೆ ಎಂದು ಪೊಲೀಸರಿಗೆ ತಿಳಿದು ಬಂದಿದೆ.
ಏನೇ ಆಗಲಿ ಕಡಿಮೆ ಬೆಲೆಯಲ್ಲಿ ಬಿರಿಯಾನಿ ಕೊಡುತ್ತೇವೆ ಎಂದು ಗ್ರಾಹಕರನ್ನ ಮೋಸ ಮಾಡುವುದು ಎಷ್ಟು ಮಾತ್ರ ಸರಿ, ನೀವು ಕೂಡ ಮುಂದೆ ಹೋಟೆಲ್ ಗಳಲ್ಲಿ ಬಿರಿಯಾನಿ ತಿನ್ನುವಾಗ ಒಮ್ಮೆ ಯೋಚನೆ ಮಾಡಿ, ಇನ್ನು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Leave a Reply