ಚಂದನ್ ಶೆಟ್ಟಿ ಮತ್ತು ನಿವೇದಿತಾ ಮದುವೆ ಯಾವಾಗ ಗೊತ್ತಾ, ನಿವೇದಿತಾ ತಂದೆ ಹೇಳಿದ್ದೇನು ನೋಡಿ .
ತನ್ನ ಹಾಡುಗಳ ಮೂಲಕ ಕನ್ನಡಿಗರ ಮನಗೆದ್ದಿದ್ದ ಚಂದನ್ ಶೆಟ್ಟಿ ತನ್ನ ಬಹುದಿನಗಳ ಗೆಳತಿ ನಿವೇದಿತಾ ಗೌಡ ಅವರಿಗೆ ಮೈಸೂರಿನ ಯುವದಸರ ವೇದಿಕೆಯ ಮೇಲೆ ಪ್ರೊಪೋಸ್ ಮಾಡುವ ಮೂಲಕ ಎಲ್ಲರಿಗೂ ಅಚ್ಚರಿಯನ್ನ ಮೂಡಿಸಿದರು. ಇನ್ನು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಹಲವು ದಿನಗಳಿಂದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರೂ ಕೂಡ ಪ್ರೀತಿ ಮಾಡುತ್ತಿದ್ದಾರೆ ಅನ್ನುವ ಮಾತುಗಳು ಹರಿದಾಡುತ್ತಿದ್ದದ್ದು ನಿಮಗೆಲ್ಲ ಗೊತ್ತೇ ಇದೆ.
ಈಗ ಎಲ್ಲಾ ಮಾತುಗಳಿಗೆ ತೆರೆ ಎಳೆಯುವಂತೆ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಎಲ್ಲರ ಎದುರಲ್ಲೇ ಪ್ರೊಪೋಸ್ ಮಾಡಿ ನಾವು ಇನ್ನುಮುಂದೆ ಲವರ್ಸ್ ಅನ್ನುವುದನ್ನ ಸಾಭೀತು ಪಡಿಸಿದ್ದಾರೆ. ಹಾಗಾದರೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಮದುವೆ ಯಾವ ನಡೆಯಲಿದೆ ಮತ್ತು ಇದನ್ನ ನೋಡಿ ನಿವೇದಿತಾ ಅವರ ತಂದೆ ತಾಯಿ ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಪ್ರೊಪೋಸ್ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಸ್ನೇಹಿತರೆ ಹಾಡುಗಾರ ಚಂದನ್ ಶೆಟ್ಟಿ ಅವರು ಈ ಮೊದಲು ನಿವೇದಿತಾ ಗೌಡ ಅವರಿಗೆ ಪ್ರೊಪೋಸ್ ಮಾಡಲು ಹೊರದೇಶಕ್ಕೆ ಕರೆದುಕೊಂಡು ಹೋಗಬೇಕು ಅಂದುಕೊಂಡಿದ್ದರಂತೆ, ಆದರೆ ತನ್ನ ವೃತ್ತಿ ಬದುಕನ್ನ ಆರಂಭಿಸಿದ ಮೈಸೂರಿನಲ್ಲಿ ಅದರಲ್ಲೂ ಸಾಂಸ್ಕ್ರತಿಕ ಕಾರ್ಯಕ್ರಮವನ್ನ ಮಾಡಲಾಗುತ್ತಿದ್ದ ಯುವದಸರ ಕಾರ್ಯಕ್ರಮದಲ್ಲಿ ನಿವೇದಿತಾ ಅವರಿಗೆ ಪ್ರೊಪೋಸ್ ಮಾಡಿದರೆ ಇನ್ನು ಚನ್ನಾಗಿ ಇರುತ್ತದೆ ಅನ್ನುವ ಉದ್ದೇಶದಿಂದ ನಿವೇದಿತಾ ಗೌಡ ಅವರಿಗೆ ಪ್ರೊಪೋಸ್ ಮಾಡಿ ಮುತ್ತಿಟ್ಟು ಬೆರಳಿಗೆ ಉಂಗುರವನ್ನ ಕೂಡ ತೊಡಿಸಿದ್ದಾರೆ.
ಇನ್ನು ಇದಾದ ನಂತರ ವೇದಿಕೆಯ ಮೇಲೆ ಇಬ್ಬರೂ ಕೂಡ ಮಾತನಾಡಿ ನಾವು ಹೆಚ್ಚು ದಿನ ನಿಮ್ಮನ್ನ ಕಾಯಿಸುವುದಿಲ್ಲ ಮತ್ತು ಇನ್ನೇನು ಕೆಲವೇ ದಿನಗಳಲ್ಲಿ ನಾವಿಬ್ಬರು ಮದುವೆಯಾಗುತ್ತೇವೆ ಎಂದು ಹೇಳುವ ಮೂಲಕ ಸಿಹಿ ಸದ್ದಿಯನ್ನ ಕೊಟ್ಟಿದ್ದಾರೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು. ಇನ್ನು ಮಾಹಿತಿಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಮದುವೆ ಮೂರೂ ತಿಂಗಳ ನಂತರ ಅಂದರೆ 2020 ರ ಜನವರಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.
ಇನ್ನು ಇಬ್ಬರ ಮದುವೆಗೆ ನಿವೇದಿತಾ ಅವರ ತಂದೆ ಕೂಡ ಒಪ್ಪಿಗೆಯನ್ನ ಸೂಚಿಸಿದ್ದಾರೆ ಮತ್ತು ವೇದಿಕೆಯ ಮೇಲೆ ಚಂದನ್ ಶೆಟ್ಟಿ ನನ್ನ ಮಗಳಿಗೆ ಪ್ರೊಪೋಸ್ ಮಾಡಿದ್ದು ನನಗೆ ಶಾಕ್ ಆಯಿತು ಹಾಗು ಆಶ್ಚರ್ಯ ಕೂಡ ಆಯಿತು ಎಂದು ಹೇಳಿದ್ದಾರೆ ನಿವೇದಿತಾ ಗೌಡ ಅವರ ತಂದೆ. ಸ್ನೇಹಿತರೆ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರಿಗೆ ದಸರಾ ವೇದಿಕೆಯ ಮೇಲೆ ಪ್ರೊಪೋಸ್ ಮಾಡಿದ್ದು ಸರಿನಾ ಅನ್ನುವುದರ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Leave a Reply