ರೈತರಿಗೆ ಗಂಗಾ ಕಲ್ಯಾಣ ಯೋಜನೆ ಉಚಿತ ಬೋರ್ವೆಲ್ ಹಾಗೂ 450000 ರೂಪಾಯಿಗಳು ರೈತರಿಗೆ ಸಂಪೂರ್ಣ ಉಚಿತ.
ಕರ್ನಾಟಕ ಸರ್ಕಾರವು ರಾಜ್ಯದ ಜನರಿಗೆ ಸಿಹಿ ಸುದ್ದಿಯನ್ನ ನೀಡಿದೆ, ರೈತರಿಗೆ ತಮ್ಮ ಜಮೀನಿನಲ್ಲಿ ಉಚಿತವಾಗಿ ಬೋರ್ವೆಲ್ ನ್ನ ಹಾಕಿಸಿಕೊಳ್ಳಲು ಸರ್ಕಾರದಿಂದ 4 .50 ಲಕ್ಷವನ್ನ ಉಚಿತವಾಗಿ ನೀಡಲಾಗುತ್ತಿದೆ.
ಒಣಭೂಮಿಯಲ್ಲಿ ಕೃಷಿಯನ್ನ ಮಾಡುವ ರೈತರಿಗೆ ನೀರಾವರಿಯ ಸೌಲಭ್ಯವನ್ನ ಕಲ್ಪಿಸಿಕೊಳ್ಳಲು ಗಂಗಾ ಕಲ್ಯಾಣ ಯೋಜನೆಯ ಮೂಲಕ ರೈತರಿಗೆ ಈ ಸೌಲಭ್ಯವನ್ನ ಕಲ್ಪಿಸಿಕೊಡಲಾಗಿದೆ.
ಹಾಗಾದರೆ ಇಂತಹ ರೈತರಿಗೆ ಈ ಯೋಜನೆಯ ಲಾಭ ಸಿಗಲಿದೆ, ಅರ್ಜಿಯನ್ನ ಎಲ್ಲಿ ಸಲ್ಲಿಸಿಬೇಕು, ಅರ್ಜಿ ಸಲ್ಲಿಸಲು ಏನೇನು ದಾಖಲೆಗಳು ಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಒಣಭೂಮಿಯಲ್ಲಿ ವ್ಯವಸಾಯ ಮಾಡುವವರಿಗೆ ಸರ್ಕಾರದಿಂದ 4 .50 ಲಕ್ಷ ರೂಪಾಯಿಯಲ್ಲಿ ಬೋರ್ವೆಲ್ ಗಳನ್ನ ನಿರ್ಮಾಣ ಮಾಡಿಕೊಡಲಾಗುತ್ತಿದೆ ಮತ್ತು ಇದರ ಜೊತೆಗೆ ಪೈಪುಗಳನ್ನ ಉಚಿತವಾಗಿ ನೀಡಲಾಗುತ್ತಿದೆ.
ಇನ್ನು ಅರ್ಜಿಯನ್ನ ಸಲ್ಲಿಸಲು ನಿಮ್ಮ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಜಮೀನಿನ ಪಹಣಿ ಮತ್ತು ಮೂರೂ ಭಾವ ಚಿತ್ರಗಳನ್ನ ಅರ್ಜಿಯ ಜೊತೆಗೆ ಸಲ್ಲಿಸಬೇಕು.
ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವರಿಗೆ ಮಾತ್ರ ಈ ಯೋಜನೆ ಸೀಮಿತವಾಗಿದೆ, 2A,3A ಮತ್ತು 3B ಯವರು ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ನಿಮ್ಮ ಜಿಲ್ಲೆಯ ಅಥವಾ ನಿಮ್ಮ ತಾಲೂಕಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಅರ್ಜಿಯನ್ನ ತೆಗೆದುಕೊಂಡು ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ಇನ್ನು ಈ ಯೋಜನೆಗೆ ಯಾವುದೇ ಆನ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಲು ಅವಕಾಶ ಇರುವುದಿಲ್ಲ, ಇನ್ನು ಈ ಯೋಜನೆಯಲ್ಲಿ 3.50 ಉಚಿತವಾಗ ಸಿಗುತ್ತದೆ ಮತ್ತು 1 ಲಕ್ಷವನ್ನ ಸಾಲದ ಮೂಲಕ ನೀಡಲಾಗುತ್ತದೆ. ಒಟ್ಟು 4.50 ಲಕ್ಷವನ್ನ ಪಡೆದುಕೊಂಡು ನಿಮ್ಮ ಜಮೀನಿನಲ್ಲಿ ನಿಮಗಿಷ್ಟವಾದ ಜಗದಲ್ಲಿ ಬೋರ್ವೆಲ್ ಗಳನ್ನ ಮಾಡಿಸಿಕೊಂಡು ವ್ಯವಸಾಯವನ್ನ ಮಾಡಲು ಅವಕಾಶವನ್ನ ಕಲಿಪಿಸಿಕೊಡಲಾಗಿದೆ.
ಇನ್ನು ರೈತರು ಈ ಯೋಜನೆಯ ಸಲುವಾಗಿ ಯಾವುದೇ ಅಧಿಕಾರಿಗಳಿಗೆ 1 ರೂಪಾಯಿ ಕೂಡ ಪಾವತಿಸಬಾರದು, ಬೋರ್ವೆಲ್ ಹಾಕಿ ನೀರು ಹರಿಸುವ ತನಕ ಬೇಕಾಗುವ ವೆಚ್ಚವನ್ನ ಸರ್ಕಾರವೇ ಭರಿಸುತ್ತದೆ.

Leave a Reply