ಕನ್ನಡದ ಹಿರಿಯ ನಟರಲ್ಲಿ ಒಬ್ಬರಾದ ಚರಣ್ ರಾಜ್ ಇದೀಗ ಬಹಳ ದಿನಗಳಿಂದ ಚಂದನವನದಲ್ಲಿ ಸದ್ದು ಮಾಡುತ್ತಿರುವ ಶ್ರುತಿ ಹಾಗು ಅರ್ಜುನ್ ಸರ್ಜಾ ಪ್ರಕರಣದ ಬಗ್ಗೆ ಕೆಲ ಮಾತುಗಳನ್ನಾಡಿಸಿದ್ದಾರೆ. ವಿವಾದ ಈಗ ತನಿಖೆಯ ಹಂತದಲ್ಲಿದೆ, ಈ ನಡುವೆ ಚರಣ್ ರಾಜ್ ಕೂಡ ಈ ಬಗ್ಗೆ ತಮ್ಮ ಕೆಲ ಸಲಹೆಗಳನ್ನು ಹಾಗು ಕಳೆದ ಮೂವತ್ತು ವರ್ಷಗಳಿಂದ ಅರ್ಜುನ್ ಸರ್ಜಾ ಅವರ ಸ್ನೇಹಿತರಾಗಿರುವ ಇವರು ಶ್ರುತಿ ಹರಿಹರನ್‌ ಆರೋಪದ ಬಗ್ಗೆ ಕೆಲ ಕಿವಿಮಾತುಗಳನ್ನು ಹೇಳಿದ್ದಾರೆ. ಇವರಿಬ್ಬರ ಪ್ರಕರಣದ ಅಸಲಿ ಸಂಬಂಧದ ಬಗ್ಗೆ ಕೆಲ ಸಲಹೆಗಳನ್ನು ನೀಡಿದ್ದಾರೆ. ‘ಮಿ ಟೂ ಬಗ್ಗೆ ಮಾತನಾಡಲು ನನಗೇ ಭಯ ಆಗುತ್ತಿದೆ. ಮಿಟೂಗೆ ಬೇರೆನೇ ಅರ್ಥ ಇರಬಹುದು. ಆದರೆ, ಅದರ ಹೆಸರಿನಲ್ಲಿ ಮಾಡುತ್ತಿರುವ ಆರೋಪ ಆತಂಕ ಮೂಡಿಸುತ್ತಿದೆ.

ಅರ್ಜುನ್‌ ಸರ್ಜಾ ಜತೆ ನಾನು ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಮೂರು ದಶಕಗಳಿಂದ ನಾವಿಬ್ಬರೂ ಸ್ನೇಹಿತರು. ಅವರು ತುಂಬಾ ಒಳ್ಳೆಯ ವ್ಯಕ್ತಿ. ಶ್ರುತಿ ಹರಿಹರನ್‌ ಕೂಡ ಒಳ್ಳೆಯವರು. ಯಾರ ಆರೋಪದಲ್ಲಿ ಏನು ಹುರುಳಿದೆಯೋ ಗೊತ್ತಿಲ್ಲ. ಯಾರೇ ಮಧ್ಯೆಸ್ಥಿಕೆ ವಹಿಸಿದರೂ ಇದು ಸರಿ ಹೋಗುವಂಥದ್ದೂ ಅಲ್ಲ. ಅವರ ಮಧ್ಯೆ ಏನಾಗಿದೆಯೋ ಅವರಿಬ್ಬರಿಗೆ ಮಾತ್ರ ಗೊತ್ತು. ಹಾಗಾಗಿ ಅವರೇ ಕೂತುಕೊಂಡು, ಮಾತನಾಡಿಕೊಂಡು ಈ ಸಮಸ್ಯೆಯನ್ನು ಸರಿ ಮಾಡಿಕೊಳ್ಳಬೇಕು.

ಕೋರ್ಟ್‌, ಮಧ್ಯೆಸ್ಥಿಕೆಗಿಂತಲೂ ಅರ್ಜುನ್‌ ಮತ್ತು ಶ್ರುತಿ ಸರಿ ಮಾಡಿಕೊಳ್ಳಬೇಕು’ ಎಂದಿದ್ದಾರೆ ಚರಣ್‌ ರಾಜ್‌. ಅರ್ಜುನ್ ಅವರಿಗೆ ಹೆಣ್ಣುಮಕ್ಕಳಿದ್ದಾರೆ ಶ್ರುತಿ ಅವರಿಗೆ ಕೂಡ ವಿವಾಹ ಆಗಿದೆ ಆದ್ದರಿಂದ ಈ ವಿವಾದ ಮುಂದುವರಿಸುವುದು ಅಷ್ಟೊಂದು ಒಳ್ಳೆಯದಲ್ಲ ಎಂದಿದ್ದಾರೆ. ಅರ್ಜುನ್‌ ಮತ್ತು ನಾನು ಸಮುದ್ರದಲ್ಲಿ ಈಜಿದವರು. ಕೆರೆಯಲ್ಲಿ ಸಿಲುಕಿಕೊಂಡು ಒದ್ದಾಡುವಂತಾಗಿದೆ. ಆರೋಪ ಮತ್ತು ಪ್ರತ್ಯಾರೋಪ ಅಸಹ್ಯ ಅನಿಸುತ್ತದೆ.

ಮನುಷ್ಯ ತಪ್ಪು ಮಾಡದೇ ಮರ ತಪ್ಪು ಮಾಡೋಕೆ ಸಾಧ್ಯನಾ? ಮರಕ್ಕೆ ಬಾಯಿಲ್ಲ, ಮನುಷ್ಯನಿಗೆ ಬಾಯಿ ಇದೆ. ಹಾಗಾಗಿ ಮಾತನಾಡುತ್ತಿದ್ದಾರೆ. ಅವರವರ ತಪ್ಪುಗಳನ್ನು ಅವರೇ ಸರಿಪಡಿಸಿಕೊಳ್ಳಬೇಕು. ಗೊತ್ತಿಲ್ಲದೇ ಒಂದಷ್ಟು ತಪ್ಪುಗಳು ಆಗುತ್ತವೆ. ಅದಕ್ಕೆ ಕ್ಷಮೆ ಕೇಳಿಕೊಂಡು ಸರಿ ಪಡಿಸಿಕೊಳ್ಳಿ. ಚರಣ್ ರಾಜ್ ಅವರ ಈ ಮಾತುಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Please follow and like us:
0
http://karnatakatoday.in/wp-content/uploads/2018/11/charanraj-about-arjun-sarja-1024x576.jpghttp://karnatakatoday.in/wp-content/uploads/2018/11/charanraj-about-arjun-sarja-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಬೆಂಗಳೂರುಕನ್ನಡದ ಹಿರಿಯ ನಟರಲ್ಲಿ ಒಬ್ಬರಾದ ಚರಣ್ ರಾಜ್ ಇದೀಗ ಬಹಳ ದಿನಗಳಿಂದ ಚಂದನವನದಲ್ಲಿ ಸದ್ದು ಮಾಡುತ್ತಿರುವ ಶ್ರುತಿ ಹಾಗು ಅರ್ಜುನ್ ಸರ್ಜಾ ಪ್ರಕರಣದ ಬಗ್ಗೆ ಕೆಲ ಮಾತುಗಳನ್ನಾಡಿಸಿದ್ದಾರೆ. ವಿವಾದ ಈಗ ತನಿಖೆಯ ಹಂತದಲ್ಲಿದೆ, ಈ ನಡುವೆ ಚರಣ್ ರಾಜ್ ಕೂಡ ಈ ಬಗ್ಗೆ ತಮ್ಮ ಕೆಲ ಸಲಹೆಗಳನ್ನು ಹಾಗು ಕಳೆದ ಮೂವತ್ತು ವರ್ಷಗಳಿಂದ ಅರ್ಜುನ್ ಸರ್ಜಾ ಅವರ ಸ್ನೇಹಿತರಾಗಿರುವ ಇವರು ಶ್ರುತಿ ಹರಿಹರನ್‌ ಆರೋಪದ ಬಗ್ಗೆ ಕೆಲ ಕಿವಿಮಾತುಗಳನ್ನು...Kannada News