ನಮ್ಮ ಹಿಂದೂ ಸಂಪ್ರದಾಯದಲ್ಲಿ ತೆಂಗಿನ ಕಾಯಿಗೆ ಬಹಳ ಮಹತ್ವದ ಸ್ಥಾನವನ್ನ ಕೊಡಲಾಗಿದೆ, ಪ್ರತಿಯೊಂದು ಪೂಜಾ, ಹೋಮ ಹವನಗಳಲ್ಲಿ ಮತ್ತು ಮಂಗಳ ಕಾರ್ಯಗಳಲ್ಲಿ ತೆಂಗಿನ ಕಾಯಿಗೆ ಬಹಳ ಒಳ್ಳೆಯ ಸ್ಥಾನ ಇದೆ. ಪ್ರತಿಯೊಂದು ಮಂಗಳ ಕಾರ್ಯದಲ್ಲಿ ತೇಗಿನ ಕಾಯಿ ಇರಲೇಬೇಕು ಮತ್ತು ತೆಂಗಿನ ಕಾಯಿಯನ್ನ ಸ್ತ್ರೀ ಸ್ವರೂಪಿಸಿ ಎಂದು ಕರೆಯುತ್ತಾರೆ. ಹಾಗಾದರೆ ತೆಂಗಿನ ಕಾಯಿಯನ್ನ ಪೂಜೆಯ ಸಮಯದಲ್ಲಿ ಯಾಕೆ ಒಡೆಯುತ್ತಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಸ್ನೇಹಿತರೆ ವಿಷ್ಣು ಭೂಲೋಕಕ್ಕೆ ಬರುವಾಗ ಲಕ್ಷ್ಮಿ ದೇವಿ, ಕಲ್ಪವೃಕ್ಷ ಮತ್ತು ಕಾಮದೇನುಗಳನ್ನ ತನ್ನ ಜೊತೆ ಕರೆದುಕೊಂಡು ಬರುತ್ತಾನೆ ಆದ್ದರಿಂದ ಕಲ್ಪವೃಕ್ಷ ಮರದಿಂದ ಉದ್ಭವ ಆಗುವ ತೆಂಗಿನ ಕಾಯಿಗೆ ತನ್ನದೇ ಆದ ವಿಶೇಷವಾದ ಸ್ಥಾನ ಇದೆ. ಇನ್ನು ತೆಂಗಿನ ಕಾಯಿಯನ್ನ ಲಕ್ಷ್ಮಿಯ ಸ್ವರೂಪ ಎಂದು ಕರೆಯುತ್ತಾರೆ ಮತ್ತು ಈ ಕಾರಣಕ್ಕೆ ತೆಂಗಿನ ಕಾಯಿಯನ್ನ ಎಲ್ಲಾ ಮಂಗಳ ಕಾರ್ಯಗಳಲ್ಲಿ ಬಳಕೆ ಮಾಡುತ್ತಾರೆ ಮತ್ತು ಹೋಮ ಹವನಗಳಲ್ಲಿ ತೆಂಗಿನ ಕಾಯಿಯನ್ನ ಪ್ರಮುಖವಾಗಿ ಬಳಸಲಾಗುತ್ತದೆ.

coconut in pooja

ಕಳಸದ ಸ್ಥಾಪನೆಗೆ ತೆಂಗಿನ ಕಾಯಿ ಬೇಕೇ ಬೇಕು ಮತ್ತು ನವರಾತ್ರಿಯಲ್ಲಿ ತೆಂಗಿನ ಕಾಯಿಗೆ ಬಹಳಷ್ಟು ಮಹತ್ವದ ಸ್ಥಾನ ಇದೆ, ಇನ್ನು ತೆಂಗಿನ ಕಾಯಿ ವಿಷ್ಣು ದೇವರಿಗೆ ಬಹಳಷ್ಟು ಪ್ರಿಯವಾದದ್ದು ಆದ್ದರಿಂದ ತೆಂಗಿನ ಕಾಯಿಯನ್ನ ಪ್ರಸಾದ ರೂಪದಲ್ಲಿ ಇಟ್ಟು ಪೂಜೆಯನ್ನ ಮಾಡಲಾಗುತ್ತದೆ. ಇನ್ನು ಪೂಜೆ ಸಮಯದಲ್ಲಿ ಕಳಸದಲ್ಲಿ ತೆಂಗಿನ ಕಾಯಿಯನ್ನ ಇಟ್ಟು ಪೂಜೆ ಮಾಡಲಾಗುತ್ತದೆ ನಂತರ ಕಳಸದ ತೆಂಗಿನ ಕಾಯಿಯನ್ನ ಕಲಸದಲ್ಲೇ ಇಟ್ಟು ಪೂಜೆಗೆ ಉಪಯೋಗಿಸಿದ ಉಳಿದ ತೆಂಗಿನ ಕಾಯಿಯನ್ನ ಒಡೆದು ನಂತರ ಅದರಲ್ಲಿ ಪ್ರಸಾದವನ್ನ ಮಾಡಿ ಎಲ್ಲರಿಗೂ ಹಂಚಲಾಗುತ್ತದೆ.

ಇನ್ನು ಮುಖ್ಯವಾದ ವಿಚಾರ ಏನು ಅಂದರೆ ಪೂಜೆ ಮಾಡಿದ ತೆಂಗಿನ ಕಾಯಿಯನ್ನ ಯಾವುದೇ ಕಾರಣಕ್ಕೂ ಮಹಿಳೆಯರು ಒಡೆಯಬಾರದು ಮತ್ತು ಒಂದುವೇಳೆ ಸ್ತ್ರೀಯರು ತೆಂಗಿನ ಕಾಯಿಯನ್ನ ಒಡೆದರೆ ಮಾಡಿದ ಪೂಜೆಗೆ ಫಲ ಸಿಗುವುದಿಲ್ಲ ಹಾಗು ಅಂದುಕೊಂಡ ಕೆಲಸಗಳು ನೆರವೇರುವುದಿಲ್ಲ ಆದ್ದರಿಂದ ಯಾವುದೇ ಕಾರಣಕ್ಕೂ ಈ ತಪ್ಪನ್ನ ನೀವು ಮಾಡಬೇಡಿ. ಸ್ನೇಹಿತರೆ ಇನ್ನು ತೆಂಗಿನ ಕಾಯಿಯನ್ನ ಪೂಜೆಗೆ ಬಳಸುವಾಗ ಯಾವುದೇ ಕಾರಣಕ್ಕೂ ತೆಂಗಿನ ಕಾಯಿಯ ಮುಟ್ಟನ್ನ ತೆಗೆಯಲೇಬಾರದು ಮತ್ತು ತೆಂಗಿನ ಕಾಯಿಯ ಮುಟ್ಟನ್ನ ತೆಗೆದು ಪೂಜೆ ಮಾಡಿದರೆ ನಿಮ್ಮ ಪೂಜೆ ಫಲ ಸಿಗುವುದಿಲ್ಲ.

ಇನ್ನು ಇನ್ನು ಪೂಜೆ ಮಾಡಿ ತೆಂಗಿನ ಕಾಯಿಯನ್ನ ಒಡೆಯುವಾಗ ಆ ತೆಂಗಿನ ಕಾಯಿ ಹಾಳಾಗಿದ್ದರೆ ಅದು ಅಶುಭ ಎಂದು ಕೆಲವರು ಭಾವಿಸುತ್ತಾರೆ ಆದರೆ ಅದು ಅಶುಭ ಅಲ್ಲ ಸ್ನೇಹಿತರೆ, ಹೌದು ತೆಂಗಿನ ಕಾಯಿ ಹಾಳಾಗಿದ್ದರೆ ನೀವು ಮಾಡಿದ ಪೂಜೆಯಲ್ಲಿ ಏನೋ ತೊಂದರೆಯಾಗಿದೆ ಎಂದು ಅರ್ಥ ಮತ್ತು ನೀವು ಆ ತೊಂದರೆಯನ್ನ ಸರಿ ಮಾಡಿಕೊಂಡು ಇನ್ನೊಮ್ಮೆ ಪೂಜೆ ಮಾಡಿ ಅನ್ನುವುದರ ಸೂಚನೆ ಆದಾಗಿದೆ.

coconut in pooja

Please follow and like us:
error0
http://karnatakatoday.in/wp-content/uploads/2019/10/coconut-in-pooja-1-1024x576.jpghttp://karnatakatoday.in/wp-content/uploads/2019/10/coconut-in-pooja-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲನಮ್ಮ ಹಿಂದೂ ಸಂಪ್ರದಾಯದಲ್ಲಿ ತೆಂಗಿನ ಕಾಯಿಗೆ ಬಹಳ ಮಹತ್ವದ ಸ್ಥಾನವನ್ನ ಕೊಡಲಾಗಿದೆ, ಪ್ರತಿಯೊಂದು ಪೂಜಾ, ಹೋಮ ಹವನಗಳಲ್ಲಿ ಮತ್ತು ಮಂಗಳ ಕಾರ್ಯಗಳಲ್ಲಿ ತೆಂಗಿನ ಕಾಯಿಗೆ ಬಹಳ ಒಳ್ಳೆಯ ಸ್ಥಾನ ಇದೆ. ಪ್ರತಿಯೊಂದು ಮಂಗಳ ಕಾರ್ಯದಲ್ಲಿ ತೇಗಿನ ಕಾಯಿ ಇರಲೇಬೇಕು ಮತ್ತು ತೆಂಗಿನ ಕಾಯಿಯನ್ನ ಸ್ತ್ರೀ ಸ್ವರೂಪಿಸಿ ಎಂದು ಕರೆಯುತ್ತಾರೆ. ಹಾಗಾದರೆ ತೆಂಗಿನ ಕಾಯಿಯನ್ನ ಪೂಜೆಯ ಸಮಯದಲ್ಲಿ ಯಾಕೆ ಒಡೆಯುತ್ತಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ...Film | Devotional | Cricket | Health | India