ಬೆಳಿಗ್ಗೆ ಎದ್ದ ತಕ್ಷಣ ಹಲವಾರು ಜನರಿಗೆ ವಿವಿಧ ರೀತಿಯ ಹವ್ಯಾಸ ಇರುತ್ತದೆ. ಇನ್ನು ಆಹಾರದ ವಿಷಯಕ್ಕೆ ಬಂದರೆ ಬೆಳಿಗ್ಗೆ ಎದ್ದು ಕಾಫಿ ಅಥವಾ ಟಿ ಕುಡಿಯುವುದನ್ನು ಮೈಗೂಡಿಸಿಕೊಂಡಿರುತ್ತಾರೆ. ಬೆಳಿಗ್ಗೆಯ ಈ ಆಹಾರದ ಬಗ್ಗೆ ಪ್ರತಿಯೊಬ್ಬರೂ ಭಿನ್ನ ಭಿನ್ನ ಅಭಿಪ್ರಾಯ ಹೇಳುತ್ತಾರೆ. ಕಾಫೀ ಕುಡಿಯುವ ಅಭ್ಯಾಸ ಒಳ್ಳೆಯದಲ್ಲ ಹಾಗೆ ಹೀಗೆ ಎಂದು ಆದರೆ ವಿಜ್ಞಾನ ಇದೀಗ ವಿಷಯದ ಬಗ್ಗೆ ಚಿಕ್ಕ ವರದಿ ನೀಡಿದೆ ಅದೇನು ತಿಳಿದುಕೊಳ್ಳೋಣ ಬನ್ನಿ. ಕಚೇರಿಯಲ್ಲಿ ಕೆಲಸ ಮಾಡುವಾಗ ಅಥವಾ ತಡ ರಾತ್ರಿಯಲ್ಲಿ ಕೆಲಸ ಮಾಡುವ ವೇಳೆ ನಿದ್ರೆ/ಆಯಾಸ ತಪ್ಪಿಸಲು ಜನರು ಕಾಫಿ ಮತ್ತು ಚಹಾಕ್ಕೆ ವ್ಯಸನಿಯಾಗುವುದು ಸಾಮಾನ್ಯವಾಗಿ ಕಂಡುಬರುತ್ತದೆ.

ಕಾಫಿ ಅಥವಾ ಚಹಾ ಕುಡಿದರೆ ಮೈಂಡ್ ಫ್ರೆಶ್ ಆಗುತ್ತೆ ಅನ್ನೋದು ಇನ್ನೂ ಕೆಲವರ ನಂಬಿಕೆ. ಹಲವೊಮ್ಮೆ ಆಯ್ಯೋ ನಾನು ಕಾಫಿ/ಚಹಾ ಕುಡಿದೇ ಇಲ್ಲ ಅದಕ್ಕೆ ನನ್ನ ತಲೆ ಓಡ್ತಾನೆ ಇಲ್ಲ ಎಂದೂ ಕೂಡ ಕೆಲವರು ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಕಾಫಿ ಕುಡಿದ ನಂತರ ಮನಸ್ಸಿಗೆ ನೆಮ್ಮದಿ, ಕೆಲಸ ಮಾಡೋಕೆ ಒಂದು ರೀತಿಯ ಟಾನಿಕ್ ಇದ್ದ ಹಾಗೆ ಎಂದು ಕೆಲ ಜನರು ಹೇಳುತ್ತಾರೆ.

ಕಾಫಿ ಕುಡಿಯುವ ಮೂಲಕ ಮನಸ್ಥಿತಿ ಏನೋ ಹಗುರವಾಗುತ್ತದೆ, ಆದರೆ ನಿಮ್ಮ ದೇಹದ ಸ್ಥಿತಿ ಏನು, ಪ್ರತಿದಿನ 2 ರಿಂದ 4 ಕಪ್ ಕಾಫಿ ಕುಡಿದರೆ ಅದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಹಲವರು ಸಲಹೆ ನೀಡುತ್ತಾರೆ. ನಿಮಗೂ ಅದೇ ಚಿಂತೆ ಇದ್ದರೆ, ಯೋಚನೆ ಬಿಡಿ ನಿತ್ಯ ನಿಮಗೆ ಬೇಕಾದಷ್ಟು ಕಾಫಿ ಕುಡಿಯಿರಿ.

ವಿಶೇಷವಾಗಿ ದಿನಕ್ಕೆ 25 ಕಪ್ ವರೆಗೆ ಕಾಫಿ ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿಯಲ್ಲ ಎಂದು ಸಂಶೋಧನೆಯೊಂದು ತಿಳಿಸಿದೆ.
ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನದಲ್ಲಿ 8,000 ಜನರನ್ನು ತೊಡಗಿಸಿಕೊಂಡಿದ್ದಾರೆ. ದಿನಕ್ಕೆ ಎಷ್ಟು ಕಾಫಿ ಸೇವಿಸುತ್ತಾರೆ ಎಂಬುದರ ಆಧಾರದ ಮೇಲೆ 8 ಸಾವಿರ ಜನರನ್ನು ಮೂರು ಭಾಗಗಳಾಗಿ ವಿಂಗಡಿಸಿ ಅಧ್ಯಯನ ನಡೆಸಲಾಗಿದೆ. ಅಧ್ಯಯನಕ್ಕಾಗಿ ಕಾಫಿ ಸೇವನೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಮೊದಲನೆಯವರು ದಿನದಲ್ಲಿ ಒಂದು ಕಪ್ ಗಿಂತ ಕಡಿಮೆ ಕಾಫಿ ಕುಡಿಯುತ್ತಾರೆ, ಎರಡನೆಯವರು ದಿನಕ್ಕೆ ಒಂದರಿಂದ ಮೂರು ಕಪ್ ಕುಡಿಯುತ್ತಾರೆ ಮತ್ತು ಮೂರನೆಯವರು ಮೂರು ಕಪ್ ಗಿಂತ ಹೆಚ್ಚಿನ ಕಾಫಿಯನ್ನು ಕುಡಿಯುತ್ತಾರೆ. ಈ ಎಲ್ಲ ಫಲಿತಶಗಳು ದೇಹಕ್ಕೆ ಒಳ್ಳೆಯದನ್ನೇ ಬಯಸಿವೆ ಹೊರತು ಕೆಟ್ಟದ್ದನ್ನಲ್ಲ, ಹೀಗಾಗಿ ನಿತ್ಯ ಕಾಫಿ ಸೇವನೆ ಒಳ್ಳೆಯದೇ ಎನ್ನಲಾಗಿದೆ

Please follow and like us:
error0
http://karnatakatoday.in/wp-content/uploads/2019/08/coffee-1024x576.jpghttp://karnatakatoday.in/wp-content/uploads/2019/08/coffee-150x104.jpgKarnataka Trendingಎಲ್ಲಾ ಸುದ್ದಿಗಳುಬೆಳಿಗ್ಗೆ ಎದ್ದ ತಕ್ಷಣ ಹಲವಾರು ಜನರಿಗೆ ವಿವಿಧ ರೀತಿಯ ಹವ್ಯಾಸ ಇರುತ್ತದೆ. ಇನ್ನು ಆಹಾರದ ವಿಷಯಕ್ಕೆ ಬಂದರೆ ಬೆಳಿಗ್ಗೆ ಎದ್ದು ಕಾಫಿ ಅಥವಾ ಟಿ ಕುಡಿಯುವುದನ್ನು ಮೈಗೂಡಿಸಿಕೊಂಡಿರುತ್ತಾರೆ. ಬೆಳಿಗ್ಗೆಯ ಈ ಆಹಾರದ ಬಗ್ಗೆ ಪ್ರತಿಯೊಬ್ಬರೂ ಭಿನ್ನ ಭಿನ್ನ ಅಭಿಪ್ರಾಯ ಹೇಳುತ್ತಾರೆ. ಕಾಫೀ ಕುಡಿಯುವ ಅಭ್ಯಾಸ ಒಳ್ಳೆಯದಲ್ಲ ಹಾಗೆ ಹೀಗೆ ಎಂದು ಆದರೆ ವಿಜ್ಞಾನ ಇದೀಗ ವಿಷಯದ ಬಗ್ಗೆ ಚಿಕ್ಕ ವರದಿ ನೀಡಿದೆ ಅದೇನು ತಿಳಿದುಕೊಳ್ಳೋಣ ಬನ್ನಿ. ಕಚೇರಿಯಲ್ಲಿ ಕೆಲಸ...Film | Devotional | Cricket | Health | India