ರಾಜ್ಯದಲ್ಲಿ ಓದುತ್ತಿರುವ ಎಲ್ಲಾ ಪ್ರೌಢಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರವು ಒಂದು ಬಂಪರ್ ಕೊಡುಗೆಯನ್ನ ನೀಡಿದೆ, ಹಾಗಾದರೆ ಏನದು ಬಂಪರ್ ಕೊಡುಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಮನೆಯಲ್ಲಿ ಕೂಡ ಪ್ರಾಢಶಾಲಾ ವಿದ್ಯಾರ್ಥಿಗಳು ಇದ್ದರೆ ಈ ಮಾಹಿತಿಯನ್ನ ತಪ್ಪದೆ ಅವರಿಗೆ ತಲುಪಿಸಿ. ದೇಶದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ಕಂಪ್ಯೂಟರೀಕರಣವನ್ನ ಗಮನಿಸಿ ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಪ್ರಾಢಶಾಲಾ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಮತ್ತು ಕಡ್ಡಾಯವಾಗಿ ಕಂಪ್ಯೂಟರ್ ಶಿಕ್ಷಣವನ್ನ ಕೊಡಲು ಮುಂದಾಗಿದೆ.

ಇನ್ನು ವಿಷಯಕ್ಕೆ ಸಂಬಂಧಪಟ್ಟಂತೆ ಪೂರಕ ವಸ್ತುಗಳು ಮತ್ತು ಶಿಕ್ಷಣ ನೀಡುವ ಶಿಕ್ಷಕರಿಗೆ ತರಬೇತಿಯನ್ನ ನೀಡಲಾಗುತ್ತಿದೆ ಎಂದು ಶಿಕ್ಷಣ ಇಲಾಖೆಯು ಹೇಳಿದೆ. ಇನ್ನು ಇದೆ ರೀತಿಯಾಗಿ ರಾಜ್ಯದಲ್ಲಿ 8 ನೇ ತರಗತಿ, 9 ನೇ ತರಗತಿ ಮತ್ತು 10 ನೇ ತರಗತಿಯ ಎಲ್ಲಾ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಉಚಿತವಾಗಿ ಲ್ಯಾಪ್ ಟಾಪ್ ಗಳನ್ನ ವಿತರಣೆ ಮಾಡಲು ರಾಜ್ಯ ಸರ್ಕಾರ ಈಗ ಮುಂದಾಗಿದೆ.

Learn Computer

ಹೌದು ಈಗಿನ ಆಧುನಿಕ ಜಗತ್ತಿನಲ್ಲಿ ಎಲ್ಲಾ ಕಡೆ ಕಂಪ್ಯೂಟರ್ ಜ್ಞಾನ ತುಂಬಾ ಅವಶ್ಯಕವಾಗಿದ್ದು ಸರ್ಕಾರೀ ಶಾಲೆಯಲ್ಲಿ ಓದುತ್ತಿರುವ ಎಲ್ಲಾ ಮಕ್ಕಳಿಗೆ ಸರ್ಕಾರದಿಂದ ಉಚಿತವಾಗಿ ಲ್ಯಾಪ್ ಟಾಪ್ ನೀಡುವುದರ ಮೂಲಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಕೊಡಿಸುವುದಾಗಿ ಶಿಕ್ಷಣ ಇಲಾಖೆ ಹೇಳಿದೆ. ಇನ್ನು ಈಗಾಗಲೇ 12 ಸಾವಿರ ಶಿಕ್ಷಕರಿಗೆ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ನೀಡಲು ಅವರಿಗೆ ತರಬೇತಿಯನ್ನ ನೀಡಲಾಗುತ್ತಿದೆ ಮತ್ತು ರಾಜ್ಯದ 2500 ಪ್ರಾಢಶಾಲೆಗಳಿಗೆ ಲ್ಯಾಪ್ ಟಾಪ್ ಗಳು ಮತ್ತು ಪ್ರೊಜೆಕ್ಟರ್ ಗಳನ್ನ ನೀಡಲಾಗುತ್ತಿದೆ.

ಇನ್ನು ಶಾಲೆಗಳಿಗೆ ಕಂಪ್ಯೂಟರ್ ಶಿಕ್ಷಣದ ಪಠ್ಯಕ್ರಮವನ್ನ ಕೂಡ ಅಳವಡಿಕೆ ಮಾಡಲಾಗುತ್ತಿದೆ, ಇನ್ನು ಈ ಯೋಜನೆಯನ್ನ ಇದೆ ವರ್ಷದಲ್ಲಿ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆಯನ್ನ ಮಾಡಿದೆ ಮತ್ತು ಕಂಪ್ಯೂಟರ್ ಶಿಕ್ಷಣವನ್ನ ಪಠ್ಯಕ್ರಮದ ಒಂದು ವಿಷಯವನ್ನಾಗಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದ ಮುಖ್ಯ ಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು 8 -10 ನೇ ತರಗತಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ತುಂಬಾ ಅಗತ್ಯ ಎಂದು ತಿಳಿಸಿದ್ದು ಕಂಪ್ಯೂಟರ್ ಶಿಕ್ಷಣವನ್ನ ಕಡ್ಡಾಯವಾಗಿ ಒಂದು ವಿಷಯವನ್ನಾಗಿ ಮಾಡಲು ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ ಮತ್ತು ರಾಜ್ಯದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಉಚಿತವಾಗಿ ಲ್ಯಾಪ್ ಟಾಪ್ ಗಳು ದೊರೆಯಲಿದೆ.

ಇನ್ನು ಹೊಸ ಲ್ಯಾಪ್ ಟಾಪ್ ಗಳನ್ನ ಇದೆ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ನೀಡಲು ಸರ್ಕಾರ ಚಿಂತನೆಯನ್ನ ಮಾಡಿದೆ, ಇನ್ನುಮುಂದೆ ರಾಜ್ಯದ ಪ್ರಾಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ಗಳು ದೊರೆಯಲಿದ್ದು ನಿಮ್ಮ ಮನೆಯಲ್ಲಿ ಪ್ರಾಢಶಾಲಾ ಮಕ್ಕಳು ಇದ್ದರೆ ಈ ಮಾಹಿತಿಯನ್ನ ತಪ್ಪದೆ ಅವರಿಗೆ ತಲುಪಿಸಿ ಮತ್ತು ಸರ್ಕಾರದ ಈ ನಿಯಮದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Learn Computer

Please follow and like us:
error0
http://karnatakatoday.in/wp-content/uploads/2019/10/Learn-Computer-1024x576.jpghttp://karnatakatoday.in/wp-content/uploads/2019/10/Learn-Computer-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲರಾಜ್ಯದಲ್ಲಿ ಓದುತ್ತಿರುವ ಎಲ್ಲಾ ಪ್ರೌಢಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರವು ಒಂದು ಬಂಪರ್ ಕೊಡುಗೆಯನ್ನ ನೀಡಿದೆ, ಹಾಗಾದರೆ ಏನದು ಬಂಪರ್ ಕೊಡುಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಮನೆಯಲ್ಲಿ ಕೂಡ ಪ್ರಾಢಶಾಲಾ ವಿದ್ಯಾರ್ಥಿಗಳು ಇದ್ದರೆ ಈ ಮಾಹಿತಿಯನ್ನ ತಪ್ಪದೆ ಅವರಿಗೆ ತಲುಪಿಸಿ. ದೇಶದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ಕಂಪ್ಯೂಟರೀಕರಣವನ್ನ ಗಮನಿಸಿ ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಪ್ರಾಢಶಾಲಾ ವಿದ್ಯಾರ್ಥಿಗಳಿಗೆ...Film | Devotional | Cricket | Health | India