court traffic rule

ಸ್ನೇಹಿತರೆ ಈಗ ದೇಶದಲ್ಲಿ ಚರ್ಚೆಯಾಗುತ್ತಿರುವ ಒಂದೇ ವಿಷಯ ಏನು ಅಂದರೆ ಅದೂ ದೇಶದಲ್ಲಿ ಬದಲಾಗಿರುವ ಮೋಟಾರು ವಾಹನ ಕಾಯಿದೆ, ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಹೊಸದಾಗಿ ಜಾರಿಗೆ ಬಂದಿರುವ ಮೋಟಾರು ವಾಹನ ಕಾಯಿದೆ ನಿಯಮದಲ್ಲಿ ವಾಹನ ಸವಾರರು ನಿರೀಕ್ಷಿಸದ ಮಟ್ಟದಲ್ಲಿ ಭಾರಿ ಪ್ರಮಾಣದ ಹೆಚ್ಚಿನ ದಂಡವನ್ನ ಕೊಡಬೇಕಾಗಿದೆ.

ಹಾಗಾದರೆ ಈ ವಿಷಯಗಳಿಗೆ ಸಂಬಂಧಿಸಿದಂತೆ ವಾಹನ ಸವಾರರಿಗೆ ಇರುವ ಅಧಿಕಾರ ಏನು ಮತ್ತು ಪೊಲೀಸರು ನಿಮ್ಮನ್ನ ಕೇಳಿದಾಗ ಏನು ಮಾಡಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

court traffic rule

ನಮ್ಮ ಭಾರತ ದೇಶದಲ್ಲಿ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಭಾರಿ ಹೆಚ್ಚಿನ ಪ್ರಮಾಣದಲ್ಲಿ ಇದೆ, ಇನ್ನು ಭಾರಿ ಪ್ರಮಾಣದ ದಂಡವನ್ನ ವಿಧಿಸುವ ಮೋಟಾರು ವಾಹನ ಕಾಯಿದೆ ನಿಯಮವನ್ನ ಕೇಂದ್ರ ಸರ್ಕಾರ ಜಾರಿಗೆ ತಂಡ ನಂತರ ಕೆಲವು ಕಡೆಗಳಲ್ಲಿ ವಿರೋದನ್ನ ವ್ಯಕ್ತಪಡಿಸಲಾಗಿದೆ. ಹಿಂದೆ ಸಂಚಾರಿ ಪೊಲೀಸರಿಗೆ ಸಿಕ್ಕಿ ಬಿದ್ದರೆ ನೂರು ಅಥವಾ ಇನ್ನೂರು ರೂಪಾಯಿಯನ್ನ ಕೊಟ್ಟು ತಪ್ಪಿಸಿಕೊಳ್ಳಬಹುದಿತ್ತು ಆದರೆ ಈಗ ಸಾವಿರ ಅಥವಾ ಐದು ಸಾವಿರ ರೂಪಾಯಿ ದಂಡವನ್ನ ಕೊಡಬೇಕು, ಇದು ಕೆಲವರಿಗೆ ತಲೆನೋವಾಗಿ ಪರಿಣಮಿಸಿದೆ.

ನಿಮ್ಮ ವಾಹನವನ್ನ ಹಿಡಿಯುವ ಯಾವುದೇ ಸಂಚಾರಿ ಪೊಲೀಸರಿಗೆ ಅಗತ್ಯವಾದ ದಾಖಲೆಗಳನ್ನ ಕೇಳುವ ಅಧಿಕಾರ ಇದೆ, ಇನ್ನು ನಿಯಮಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನ ಅವರು ಕೇಳಿದಾಗ ನೀವು DL ನ್ನ ಸಂಚಾರಿ ಪೋಲೀಸರ ಕೈಗೆ ನೀಡಿ ತೋರಿಸಬೇಕು ಮತ್ತು ಇನ್ನುಳಿದ ದಾಖಲೆಗಳನ್ನ ಪೋಲೀಸರ ಕೈ ಗೆ ಕೊಟ್ಟು ತೋರಿಸುವ ಅವಶ್ಯಕತೆ ಇಲ್ಲ.

court traffic rule

ಇನ್ನು ಎರಡನೆಯದಾಗಿ ಸಮವಸ್ತ್ರದಲ್ಲಿ ಇಲ್ಲದ ಪೊಲೀಸರು ನಿಮ್ಮ ವಾಹನವನ್ನ ತಡೆಹಿಡಿದು ದಾಖಲೆಯನ್ನ ಕೇಳಿದಾಗ ಆ ಪೋಲೀಸರ ID ಕಾರ್ಡ್ ಕೇಳುವ ಅಧಿಕಾರ ಪ್ರತಿಯೊಬ್ಬ ವಾಹನ ಸವಾರರಿಗೆ ಇದೆ. ಇನ್ನು ಸಮವಸ್ತ್ರದಲ್ಲಿ ಇಲ್ಲದ ಪೊಲೀಸ್ ಅಧಿಕಾರಿಗಳು ID ಕಾರ್ಡ್ ತೋರಿಸದೆ ಇದ್ದರೆ ನೀವು ದಂಡ ಕಟ್ಟಬೇಕಾದ ಅಗತ್ಯ ಇರುವುದಿಲ್ಲ, ಇನ್ನು ಯಾವುದೇ ಪೊಲೀಸರು ಮೋಟಾರು ವಾಹನ ಕಾಯಿದೆ ಉಲ್ಲಂಘನೆ ಮಾಡಿದ್ದಕ್ಕೆ ಬಂದಿಸಿದ ಹಿನ್ನಲೆಯಲ್ಲಿ 24 ಗಂಟೆಯ ಒಳಗಾಗಿ ಮ್ಯಾಜೆಸ್ಟ್ರೇಟ್ ಕೋರ್ಟ್ ನ ಮುಂದೆ ನಿಮ್ಮನ್ನ ಹಾಜರು ಪಡಿಸಬೇಕು.

ಇನ್ನು ವಾಹನ ಸವಾರರ ಬಳಿ ದಂಡವನ್ನ ವಸೂಲಿ ಮಾಡುವ ಯಾವುದೇ ಪೋಲೀಸರ ಬಳಿ ಒರಿಜಿನಲ್ ಆದ ಚಲನ್ ಪತ್ರ ಅಥವಾ ಇ ಚಲನ್ ಪತ್ರ ಕಡ್ಡಾಯವಾಗಿ ಇರಲೇಬೇಕು ಮತ್ತು ಬಾಯಿ ಮಾತಿನಲ್ಲಿ ದಂಡವನ್ನ ಕೇಳಿದರೆ ನೀವು ಕೊಡಬೇಕಾದ ಅಗತ್ಯ ಇರುವುದಿಲ್ಲ.

court traffic rule

Please follow and like us:
error0
http://karnatakatoday.in/wp-content/uploads/2019/09/Court-traffic-rules-1024x576.jpghttp://karnatakatoday.in/wp-content/uploads/2019/09/Court-traffic-rules-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ಈಗ ದೇಶದಲ್ಲಿ ಚರ್ಚೆಯಾಗುತ್ತಿರುವ ಒಂದೇ ವಿಷಯ ಏನು ಅಂದರೆ ಅದೂ ದೇಶದಲ್ಲಿ ಬದಲಾಗಿರುವ ಮೋಟಾರು ವಾಹನ ಕಾಯಿದೆ, ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಹೊಸದಾಗಿ ಜಾರಿಗೆ ಬಂದಿರುವ ಮೋಟಾರು ವಾಹನ ಕಾಯಿದೆ ನಿಯಮದಲ್ಲಿ ವಾಹನ ಸವಾರರು ನಿರೀಕ್ಷಿಸದ ಮಟ್ಟದಲ್ಲಿ ಭಾರಿ ಪ್ರಮಾಣದ ಹೆಚ್ಚಿನ ದಂಡವನ್ನ ಕೊಡಬೇಕಾಗಿದೆ. ಹಾಗಾದರೆ ಈ ವಿಷಯಗಳಿಗೆ ಸಂಬಂಧಿಸಿದಂತೆ ವಾಹನ ಸವಾರರಿಗೆ ಇರುವ ಅಧಿಕಾರ ಏನು ಮತ್ತು ಪೊಲೀಸರು ನಿಮ್ಮನ್ನ ಕೇಳಿದಾಗ ಏನು ಮಾಡಬೇಕು ಅನ್ನುವುದರ...Film | Devotional | Cricket | Health | India