ದಿನದಿಂದ  ದಿನಕ್ಕೆ ಬೆಲೆ ಏರಿಕೆ ಎನ್ನುವುದು ಜನರಿಗೆ ಸ್ವಲ್ಪ ಮಟ್ಟಿನ ತೊಂದರೆಯಾಗುತ್ತಿದೆ. ಹೌದು ಜನರ ಕೈಯಲ್ಲಿ ಈಗ ಹಣ ಉಳಿಸುವುದು ಎಂದರೆ ಬಹಳ ಕಷ್ಟಕರವಾಗುತ್ತಿದೆ ಹಣವನ್ನು ಮ್ಯಾನೇಜ್ ಮಾಡುವುದು ಎಂದರೆ ಅದು ಸುಲಭದ ಕೆಲಸವಲ್ಲ ಪ್ರತಿ ತಿಂಗಳಿನಲ್ಲಿ ಬರುವ ಎಲ್ಲ ಖರ್ಚುಗಳತ್ತ ಒಬ್ಬ ಸಂಸಾರಸ್ಥ ಸ್ವಲ್ಪ ಗಮನಹರಿಸಿದರೆ ಆತನಿಗೆ ತಿಳಿಯುತ್ತದೆ ಎಲ್ಲಿ ನನ್ನ ಹಣ ಪೋಲಾಗುತ್ತಿದೆ ಎಂದು. ಇಂದು  ಹಣದ ಉಳಿತಾಯದ ಬಗ್ಗೆ ಹೇಳುತ್ತಿದ್ದೇವೆ ಸ್ವಲ್ಪ ಕೇಳಿ. ಸಾಮಾನ್ಯವಾಗಿ ಮನೆಯಲ್ಲಿ ಕರೆಂಟ್ ಬಿಲ್ ಎನ್ನುವುದು ನಾವು ಹೆಚ್ಚಾಗಿ ಯೋಚಿಸಲ್ಲ ಯಾಕೆಂದರೆ ಬೈಕು ಕಾರು ಪೆಟ್ರೋಲ್ ಬೆಲೆಗೆ ನೀಡಿದಷ್ಟು ಮಹತ್ವ ಮನೆಯ ವಿದ್ಯುತ್ ಗೆ ಹೆಚ್ಚು ನೀಡಲ್ಲ. ಸರಿಯಾಗಿ ನೀವು ನಾವು ಹೇಳಿದ ಈ ಕೆಲಸಗಳನ್ನು ಮಾಡಿದರೆ ಖಂಡಿತ ಮನೆಯ ಕರೆಂಟ್ ಬಿಲ್ ತಿಂಗಳಿಗೆ ಅರ್ಧಕ್ಕೆ ಅರ್ಧದಷ್ಟು ಕಮ್ಮಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹಾಗಿದ್ದರೆ ಆ ಉಪಾಯ ಯಾವುದು ಎಂದು ತಿಳಿಯೋಣ. ಮೊದಲನೆಯದಾಗಿ ನಮ್ಮ ಮನೆಗೆ ತರುವಂತಹ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳ ರೇಟಿಂಗ್ ತಿಳಿದುಕೊಳ್ಳಿ. ಎಸಿ, ಫ್ರಿಡ್ಜ್ , ಇವುಗಳು 1 ಸ್ಟಾರ್, 5 ಸ್ಟಾರ್ ಈ ರೀತಿ ಇರುತ್ತದೆ. ಒಂದು ಸ್ಟಾರ್ ಎಂದರೆ ಹೆಚ್ಚು ವಿದ್ಯುತ್ ಬಳಕೆ ಮಾಡುತ್ತದೆ ಎಂದು ಮತ್ತು ಐದೂ ಸ್ಟಾರ್ ಕಡಿಮೆ ವಿದ್ಯುತ್ ಬಳಕೆ ಮಾಡುತ್ತದೆ ಎಂದರ್ಥ ಇತ್ತ ಸ್ವಲ್ಪ ಗಮನ ಹರಿಸಿ ಕಡಿಮೆ ಕರೆಂಟ್ ಉಪಯೋಗಿಸುವ ಸಾಧನ ಬಳಸಿ.

ಎರಡನೆಯದಾಗಿ LED ಬಲ್ಬ್ ಗಾಲ ಬಳಕೆ, ಹೌದು ಸ್ವಲ್ಪ ದುಬಾರಿ ಎನಿಸಿದರೂ ಅತಿ ಕಡಿಮೆ ಕರೆಂಟ್ ತಗೆದುಕೊಂಡು ಹೆಚ್ಚು ಬಿಳಿ ಬೆಳಕನ್ನು ನೀಡುತ್ತದೆ ಈ ಬಲ್ಬ್, ಆದ್ದರಿಂದ ಮನೆಯ ಎಲ್ಲ ಕಡೆ ಇದನ್ನ ಉಪಯೋಗಿಸಿ ಖಂಡಿತ ಫಲಿತಾಂಶ ಸಿಗುತ್ತದೆ. ಇನ್ನು ಮೂರನೆಯದು, ಈಗಾಗಲೇ ಮನೆಯಲ್ಲಿರುವ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳನ್ನು ಅಂದರೆ ಹಳೆಯ ಟಿವಿ, ಫ್ರಿಡ್ಜ್ , ಎಸಿ ಮುಂತಾದವುಗಳನ್ನು ಒಮ್ಮೆ ಕ್ಯಾಲಿಬ್ರೆಷನ್ ಮಾಡಿಸಿ.

ಆದಷ್ಟು ವಿದ್ಯುತ್ ಕಡಿಮೆ ಬಳಸಿ ಮತ್ತು ಅಗತ್ಯ ಇಲ್ಲದ ಕಡೆ ಹೆಚ್ಚು ಬಳಕೆ ಮಾಡಬೇಡಿ. ಸೂರ್ಯನ ಬೆಳಕು ಹೆಚ್ಚು ಬೀಳುವ ನಿಮ್ಮ ಮನೆಯ ವಠಾರದಲ್ಲಿ ಸೋಲಾರ್ ಕೋಶ ಅಳವಡಿಸಿ ಇದರಿಂದ ಎನರ್ಜಿ ಸೇವ್ ಮಾಡಿ ಅದನ್ನು ಇತರ ಕೆಲಸಗಳಿಗೆ ಬಳಸಬಹುದು. ಅಂದರೆ  ಇವುಗಳು ನಿಯಮಿತ ಕರೆಂಟ್ ಗಿಂತ ಹೆಚ್ಚು ಬಳಸುತ್ತಿವೆಯೇ ಎಂದು ತಿಳಿಯಿರಿ ಇದರಿಂದ ಕರೆಂಟ್ ಬಿಲ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುತ್ತದೆ. ಮತ್ತು ಪ್ರತಿ ತಿಂಗಳ ಕೊನೆಯಲ್ಲಿ ಈ ವಿಷಯದ ಬಗ್ಗೆ ಗಮನಕೊಡಿ. ಮಾಹಿತಿಯನ್ನು ಇತರರಿಗೂ ತಲುಪಿಸಿ.

Please follow and like us:
0
http://karnatakatoday.in/wp-content/uploads/2018/10/current-1024x576.pnghttp://karnatakatoday.in/wp-content/uploads/2018/10/current-150x104.pngKarnataka Today's Newsಅಂಕಣಆಟೋಎಲ್ಲಾ ಸುದ್ದಿಗಳುದಿನದಿಂದ  ದಿನಕ್ಕೆ ಬೆಲೆ ಏರಿಕೆ ಎನ್ನುವುದು ಜನರಿಗೆ ಸ್ವಲ್ಪ ಮಟ್ಟಿನ ತೊಂದರೆಯಾಗುತ್ತಿದೆ. ಹೌದು ಜನರ ಕೈಯಲ್ಲಿ ಈಗ ಹಣ ಉಳಿಸುವುದು ಎಂದರೆ ಬಹಳ ಕಷ್ಟಕರವಾಗುತ್ತಿದೆ ಹಣವನ್ನು ಮ್ಯಾನೇಜ್ ಮಾಡುವುದು ಎಂದರೆ ಅದು ಸುಲಭದ ಕೆಲಸವಲ್ಲ ಪ್ರತಿ ತಿಂಗಳಿನಲ್ಲಿ ಬರುವ ಎಲ್ಲ ಖರ್ಚುಗಳತ್ತ ಒಬ್ಬ ಸಂಸಾರಸ್ಥ ಸ್ವಲ್ಪ ಗಮನಹರಿಸಿದರೆ ಆತನಿಗೆ ತಿಳಿಯುತ್ತದೆ ಎಲ್ಲಿ ನನ್ನ ಹಣ ಪೋಲಾಗುತ್ತಿದೆ ಎಂದು. ಇಂದು  ಹಣದ ಉಳಿತಾಯದ ಬಗ್ಗೆ ಹೇಳುತ್ತಿದ್ದೇವೆ ಸ್ವಲ್ಪ ಕೇಳಿ. ಸಾಮಾನ್ಯವಾಗಿ...Kannada News