D boss premier league

ಸಿನಿಮಾರಂಗ ಅಂದಮೇಲೆ ಅಲ್ಲಿ ಅಭಿಮಾನಿಗಳಿಂದ ಒಳ್ಳೆಯ ಕೆಲಸಗಳು ಆಗುತ್ತಿರುತ್ತವೆ, ಇತ್ತೀಚಿಗಷ್ಟೆ ಕೆಸಿಸಿ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನ ಯಶಸ್ವಿಯಾಗಿ ನಡೆದಿದೆ, ಈಗ ಡಿಪಿಎಲ್ ಸಮಯ.

ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಂದ ಪ್ರತಿ ವರ್ಷದಂತೆ ಈ ವರ್ಷವೂ ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ಅನ್ನು ಆಯೋಜನೆ ಮಾಡಲಾಗಿದೆ.

D boss premier league

ಸಾಮಾನ್ಯವಾಗಿ ಒಗ್ಗಟ್ಟು ಪ್ರದರ್ಶನ ಮಾಡಲು ಅಥವಾ ಬ್ಯುಸಿ ಲೈಫ್ ನಲ್ಲಿ ಒಂದಿಷ್ಟು ಸಮಯ ಒಟ್ಟಿಗೆ ಕಳೆಯುವ ಉದ್ದೆಶದಿಂದ ಅಥವಾ ಸ್ಟಾರ್ ಗಳ ಹುಟ್ಟುಹಬ್ಬದ ಸಲುವಾಗಿ ಕ್ರಿಕೆಟ್ ಪಂದ್ಯಾವಳಿಗಳನ್ನು ಮಾಡುತ್ತಾರೆ.

ಆದರೆ ಡಿ ಬಾಸ್ ಅಭಿಮಾನಿಗಳು ಒಂದು ಒಳ್ಳೆ ಉದ್ದೇಶವನ್ನಿಟ್ಟುಕೊಂಡು ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ನಡೆಸುತ್ತಿದ್ದಾರೆ. ಹಾಗಾದರೆ ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ನಡೆಯುವುದು ಯಾವಾಗ? ಎಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತದೆ, ಚಾಲೆಂಜಿಂಗ್ ಸ್ಟಾರ್ ಅಭಿಮಾನಿ ಬಳಗ ‘ಡಿ ಕಂಪನಿ’ ವತಿಯಿಂದ ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಶುರುವಾಗಲಿದೆ.

D boss premier league

ಇದೇ ತಿಂಗಳ ಏರ್ಪಿಲ್ 14 ಮತ್ತು 15 ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ, ಕಳೆದ ನಾಲ್ಕು ವರ್ಷದಿಂದ ದರ್ಶನ್ ಅಭಿಮಾನಿ ಬಳಗವಾದ ಡಿ ಕಂಪನಿಯಿಂದ ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ನಡೆಸಿಕೊಂಡು ಬರಲಾಗುತ್ತಿದೆ.

D boss premier league

ರಾಜ್ಯದಲ್ಲಿರುವ ಎಲ್ಲಾ ದರ್ಶನ್ ಅಭಿಮಾನಿಗಳನ್ನ ತಂಡವನ್ನಾಗಿ ಮಾಡಿ ಕ್ರಿಕೆಟ್ ನಲ್ಲಿ ಭಾಗಿ ಮಾಡಿಕೊಳ್ಳಲಾಗುತ್ತದೆ. ದಾವಣಗೆರೆ, ಮೈಸೂರು, ಹಾಸನ್, ಕುಣಿಗಲ್, ಮಂಡ್ಯ, ಶಿವಮೊಗ್ಗ, ಕೆಂಗೇರಿ, ನೆಲಮಂಗಲ, ಹುಬ್ಬಳಿ, ತಿಪಟೂರು ಹೀಗೆ ಹತ್ತು ತಂಡಗಳಾಗಿ ಮಾಡಿಕೊಂಡು ಎರಡು ದಿನಗಳು ಅಭಿಮಾನಿಗಳು ಮೈದಾನಕ್ಕೆ ಇಳಿದು ಕ್ರಿಕೆಟ್ ಆಡಲಿದ್ದಾರೆ.

Please follow and like us:
0
http://karnatakatoday.in/wp-content/uploads/2018/04/dc-1024x576.pnghttp://karnatakatoday.in/wp-content/uploads/2018/04/dc-150x150.pngeditorಆಟೋಎಲ್ಲಾ ಸುದ್ದಿಗಳುಚಲನಚಿತ್ರಸುದ್ದಿಜಾಲಸಿನಿಮಾರಂಗ ಅಂದಮೇಲೆ ಅಲ್ಲಿ ಅಭಿಮಾನಿಗಳಿಂದ ಒಳ್ಳೆಯ ಕೆಲಸಗಳು ಆಗುತ್ತಿರುತ್ತವೆ, ಇತ್ತೀಚಿಗಷ್ಟೆ ಕೆಸಿಸಿ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನ ಯಶಸ್ವಿಯಾಗಿ ನಡೆದಿದೆ, ಈಗ ಡಿಪಿಎಲ್ ಸಮಯ. ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಂದ ಪ್ರತಿ ವರ್ಷದಂತೆ ಈ ವರ್ಷವೂ ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ಅನ್ನು ಆಯೋಜನೆ ಮಾಡಲಾಗಿದೆ. ಸಾಮಾನ್ಯವಾಗಿ ಒಗ್ಗಟ್ಟು ಪ್ರದರ್ಶನ ಮಾಡಲು ಅಥವಾ ಬ್ಯುಸಿ ಲೈಫ್ ನಲ್ಲಿ ಒಂದಿಷ್ಟು ಸಮಯ ಒಟ್ಟಿಗೆ ಕಳೆಯುವ ಉದ್ದೆಶದಿಂದ ಅಥವಾ ಸ್ಟಾರ್ ಗಳ ಹುಟ್ಟುಹಬ್ಬದ ಸಲುವಾಗಿ ಕ್ರಿಕೆಟ್ ಪಂದ್ಯಾವಳಿಗಳನ್ನು...Kannada News