ಧರ್ಮಸ್ಥಳದ ಅತಿ ದೊಡ್ಡ ರಹಸ್ಯ…. ನಮೋ ಮಂಜುನಾಥ ಸ್ವಾಮಿ.
ಸ್ನೇಹಿತರೆ ಧರ್ಮಸ್ಥಳ ಮಂಜುನಾಥನ ಬಗ್ಗೆ ನಿಮಗೆಷ್ಟು ಗೊತ್ತು, ಅಷ್ಟಕ್ಕೂ ಮಂಜುನಾಥ ದೇವರು ಧರ್ಮಸ್ಥಳಕ್ಕೆ ಬಂದು ನೆಲೆಸಿದ್ದು ಹೇಗೆ, ಯಾಕೆ ವೀರೇಂದ್ರ ಹಗ್ಗಡೆಯವರನ್ನ ಧರ್ಮಸ್ಥಳದಲ್ಲಿ ದೇವರು ಎಂದು ಕರೆಯುತ್ತಾರೆ. ಈ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಧರ್ಮಸ್ಥಳ ಮಂಜುನಾಥನ ಮಹಿಮೆ ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ, ಮಂಜುನಾಥ ಸ್ವಾಮಿ ದೇವರು ಇರುವ ಈ ಊರು ಬಹಳ ಪ್ರಸಿದ್ದವಾದ ಊರು, ಶ್ರಾವಣ ಬೆಳಗೊಳದಂತೆ ಬಾಹುಬಲಿಯ ಪ್ರತಿಮೆ ಇಲ್ಲೂ ಕೂಡ ಇದೆ.
ಇನ್ನು ಈ ಧರ್ಮಸ್ಥಳ ಕ್ಷೇತ್ರಕ್ಕೆ ಏಳು ನೂರು ವರ್ಷಗಳ ಇತಿಹಾಸ ಇದೆ, ನೇತ್ರಾವತಿ ನದಿಯ ದಡದಲ್ಲಿ ಇರುವ ಈ ದೇವಸ್ಥಾನದ ಆರಾಧ್ಯ ದೇವರು ಶ್ರೀ ಮಂಜುನಾಥ ಸ್ವಾಮಿ, ಇನ್ನು ಮಂಜುನಾಥ ಸ್ವಾಮಿ ಇಲ್ಲಿಗೆ ಬಂದಿದ್ದು ಹೇಗೆ ಅನ್ನುವುದರ ಬಗ್ಗೆನೇ ಒಂದು ಕುತೂಹಲಕಾರಿ ಕಥೆ ಇದೆ.
ಸ್ನೇಹಿತರೆ ಧರ್ಮಸ್ಥಳದ ಹಿಂದಿನ ಹೆಸರು ‘ಕುಡುಮ’ ಇಲ್ಲಿನ ನೆಲ್ಯಾಡಿ ಬೀಡಿನಲ್ಲಿ ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎನ್ನುವ ಗಂಡ ಮತ್ತು ಹೆಂಡತಿ ವಾಸವಿದ್ದರು ಮತ್ತು ಇವರಿಗೆ ಅಪಾರವಾದ ದೈವ ಭಕ್ತಿ ಕೂಡ ಇದ್ದಿತ್ತು. ಒಂದು ದಿನ ಇವರ ಮನೆಗೆ ನಾಲ್ಕು ಜನ ಅಥಿತಿಗಳು ಬಂದರು, ಇನ್ನು ಮನೆಗೆ ಬಂದವರನ್ನ ಈ ಗಂಡ ಹೆಂಡತಿ ತುಂಬಾ ಚನ್ನಾಗಿ ಅಥಿತಿ ಸತ್ಕಾರ ಮಾಡಿದರು.
ಇನ್ನು ಅವರು ಬಂದ ದಿನ ರಾತ್ರಿ ಒಂದು ಪವಾಡ ನಡೆಯಿತು, ಆ ನಾಲ್ವರು ಅಥಿತಿಗಳು ಧರ್ಮ ದೇವತೆಗಳ ರೂಪದಲ್ಲಿ ಬಿರ್ಮಣ್ಣ ಪೆರ್ಗಡೆಯವರ ಕನಸಿನಲ್ಲಿ ಕಾಣಿಸಿಕೊಂಡರು ಮತ್ತು ತಾವೆಲ್ಲರೂ ಈ ಮನೆಯಲ್ಲೇ ನೆಲೆಸುವ ಆಸೆಯನ್ನ ವ್ಯಕ್ತಪಡಿಸಿದರು.
ಇನ್ನು ಅವರ ಆಸೆಯನ್ನ ಬಿರ್ಮಣ್ಣ ದಂಪತಿಗಳು ಮನೆಯನ್ನ ಖಾಲಿ ಮಾಡಿ ಅದನ್ನ ಅವರಿಗೆ ಬಿಟ್ಟು ಕೊಟ್ಟರು, ಇನ್ನು ಈ ರೀತಿ ಕಾಳರಾಹು-ಪುರುಷ ದೈವ, ಕಲರ್ಕಯಿ-ಸ್ತ್ರೀ ದೈವ, ಕುಮಾರಸ್ವಾಮಿ-ಪುರುಷ ದೈವ ಮತ್ತು ಕನ್ಯಾಕುಮಾರಿ- ಸ್ತ್ರೀ ದೈವ ಅಂದಿನಿಂದ ಆ ಮನೆಯಲ್ಲಿ ನೆಲೆ ನಿಂತರು ಮತ್ತು ಬಿರ್ಮಣ್ಣ ಅಲ್ಲಿ ಗುಡಿ ಕಟ್ಟಿಸಿ ನಿತ್ಯ ಪೂಜೆಗೆ ಅರ್ಚಕರನ್ನ ಕೂಡ ನೇಮಕ ಮಾಡಿದನು.
ಇನ್ನು ಘಟನೆ ನಡೆದ ನಂತರ ಒಬ್ಬ ಶಿವ ಯೋಗಿಗಳು ಈ ಸ್ಥಳದಲ್ಲಿ ಈಶ್ವರ ಲಿಂಗವನ್ನ ಸ್ಥಾಪನೆ ಮಾಡುವಂತೆ ಸಲಹೆ ನೀಡಿದರು ಮತ್ತು ಧರ್ಮ ದೇವತೆಗಳು ಕೂಡ ಇದನ್ನೇ ಹೇಳಿದ್ದರು. ಕದ್ರಿಯಲ್ಲಿ ಇರುವ ಮಂಜುನಾಥನ ಲಿಂಗವನ್ನ ತರಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪ ಸ್ವಾಮಿಯನ್ನ ಕಳುಹಿಸಿದರು ಬಿರ್ಮಣ್ಣ, ಇನ್ನು ಅಣ್ಣಪ್ಪಸ್ವಾಮಿ ಮಂಜುನಾಥನನ್ನ ತರುವಷ್ಟರಲ್ಲಿ ಕುಡುಮದಲ್ಲಿ ಪವಾಡ ಆಗಿ ಹೋಗಿತ್ತು, ಅಲ್ಲಿ ನೆಲೆಸಿದ್ದ ಧರ್ಮ ದೇವತೆಗಳು ಮಂಜುನಾಥನ ಲಿಂಗ ಬರುವಷ್ಟರಲ್ಲಿ ಅವನಿಗಾಗಿ ದೇವಸ್ಥಾನವನ್ನೇ ಕಟ್ಟಿಬಿಟ್ಟಿದ್ದರು.
ಇಂತಹ ಧರ್ಮ ಕ್ಷೇತ್ರ ಈಗ ವಿದ್ಯೆ, ಅನ್ನ, ಅರೋಗ್ಯ ಮತ್ತು ಅಭಯದಾನದ ಮೂಲಕ ಚತುರ್ದಾನ ಕ್ಷೇತ್ರವಾಗಿ ಸೇವೆಯನ್ನ ಸಲ್ಲಿಸುತ್ತಿದೆ, ಇವೆಲ್ಲವೂ ವೀರೇಂದ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.
ಇನ್ನು ಈ ಭಾಗದಲ್ಲಿ ವೀರೇಂದ್ರ ಹೆಗ್ಗಡೆಯವರಿಗೆ ಜನರು ತಮ್ಮ ತಂದೆಯಷ್ಟೆ ಗೌರವವನ್ನ ಕೊಡುತ್ತಾರೆ, ಈಗ ವೀರೇಂದ ಹೆಗ್ಗಡೆಯವರಿಗೆ 70 ವರ್ಷ, ಇವರು ತಮ್ಮ 20 ನೇ ವಯಸ್ಸಿನಲ್ಲಿಯೇ ಇಲ್ಲಿ ತಮ್ಮ ಸೇವೆ ಸಲ್ಲಿಸಲು ಆರಂಭ ಮಾಡಿದರು, ಇವರಿಗಿಂತ ಮೊದಲು ಇವರ ಮನೆತನ ಹಲವರು ಇಲ್ಲಿ ಧರ್ಮಾಧಿಕಾರಿಯಾಗಿ ಸೇವೆಯನ್ನ ಸಲ್ಲಿಸಿದ್ದಾರೆ.
ಇಲ್ಲಿ ನಮ್ಮ ದೇಶ ಮಾತ್ರವಲ್ಲದೆ ದೇಶ ವಿದೇಶದಿಂದಲೂ ಭಕ್ತರು ಶ್ರೀ ಮಂಜುನಾಥನನ್ನ ನೋಡಲು ಬರುತ್ತಾರೆ, ಸ್ನೇಹಿತರೆ ಇದು ಮಂಜುನಾಥ ಸ್ವಾಮಿಯ ಇತಿಹಾಸದ ಕಥೆ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Leave a Reply