Darshan and Vinod Prabhakar

ಚುನಾವಣಾ ಪ್ರಚಾರದಲ್ಲಿ ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬ್ಯುಸಿ ಆಗಿದ್ದಾರೆ ಅಂತಾನೆ ಹೇಳಬಹುದು, ಇನ್ನು ಕೈ ಪೆಟ್ಟಾಗಿರುವ ಕಾರಣದಿಂದ ಚುನಾವಣಾ ಪ್ರಚಾರಕ್ಕೆ ಬ್ರೇಕ್ ಕೊಟ್ಟಿರುವ ದರ್ಶನ್ ಅವರು ಈಗ ಗ್ಯಾಪ್ ನಲ್ಲಿ ಒಂದು ಒಳ್ಳೆಯ ಕೆಲಸವನ್ನ ಮಾಡಿದ್ದಾರೆ.

ಹಾಗಾದರೆ ಆ ಒಳ್ಳೆಯ ಕೆಲಸ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ದರ್ಶನ್ ಅವರ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ದರ್ಶನ್ ಅವರು ತಾನು ಎಷ್ಟೇ ಬ್ಯುಸಿ ಇದ್ದರೂ ಸಿನಿಮಾ ಶೂಟಿಂಗ್ ನಲ್ಲಿ ಬಿದ್ದು ಕಾಲನ್ನ ಮುರಿದುಕೊಂಡಿದ್ದ ತನ್ನ ಜೀವದ ಗೆಳೆಯನನ್ನ ಮೀಟ್ ಮಾಡಿ ಆರೋಗ್ಯವನ್ನ ವಿಚಾರಿಸಿ ಬಂದಿದ್ದಾರೆ, ಹೌದು ಶೂಟಿಂಗ್ ಬಿದ್ದು ಕಾಲನ್ನ ಮುರಿದುಕೊಂಡಿದ್ದ ನಟ ವಿನೋದ್ ಪ್ರಭಾಕರ್ ಅವರನ್ನ ಭೇಟಿ ಮಾಡಿ ಅವರ ಆರೋಗ್ಯವನ್ನ ವಿಚಾರಿಸಿದ್ದಾರೆ ನಟ ದರ್ಶನ್.

Darshan and Vinod Prabhakar

ಮರಿ ಟೈಗರ್ ಬಿದ್ದು ಗಾಯಗೊಂಡಿರುವ ಸುದ್ದಿಯನ್ನ ಕೇಳಿ ದರ್ಶನ್ ಅವರು ಗಾಭರಿಗೊಂಡಿದ್ದರು ಮತ್ತು ಆಗಲೇ ಅವರಿಗೆ ಫೋನ್ ಮಾಡು ವಿಚಾರಿಸಿದ್ದರು, ಆದರೆ ಈಗ ಟೈಮ್ ಸಿಕ್ಕಿರುವುದರಿಂದ ನೇರವಾಗಿ ಅವರನ್ನ ಮಾತನಾಡಿಸಿ ಆರೋಗ್ಯವನ್ನ ವಿಚಾರಿಸಿ ಬಂದಿದ್ದಾರೆ ನಟ ದರ್ಶನ್.

ದರ್ಶನ್ ಅವರು ಸ್ನೇಹ ಮತ್ತು ಸ್ನೇಹಿತರಿಗೆ ತುಂಬಾ ಬೆಲೆ ಕೊಡುವ ಮನುಷ್ಯ, ಅದರಲ್ಲೂ ಬೊಂಡಿ ಪ್ರಭಾಕರ್ ದರ್ಶನ್ ಅವರ ಆತ್ಮೀಯ ಸ್ನೇಹಿತನಾದ ಕಾರಣ ನೇರವಾಗಿ ಅವರನ್ನ ಬೇಟಿಮಾಡಿ ಅರೋಗ್ಯ ವಿಚಾರಿಸಿ ಬಂದಿದ್ದಾರೆ ನಟ ದರ್ಶನ್.

Darshan and Vinod Prabhakar

ತಾನು ಇಂದು ಎಷ್ಟೇ ಎತ್ತರಕ್ಕೆ ಬೆಳೆದು ಬಂದಿದ್ದರು ತಾನು ಬೆಳೆದ ದಾರಿಯನ್ನ ಮರೆಯದ ವ್ಯಕ್ತಿತ್ವ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದು, ಹಾಗಾಗಿ ಅವರ ಹಳೆಯ ಸ್ನೇಹಿತರನ್ನ ದರ್ಶನ್ ಅವರು ಇಂದು ಕೂಡ ಮರೆತಿಲ್ಲ.

ಇನ್ನು ವಿನೋದ್ ಪ್ರಭಾಕರ್ ಅವರನ್ನ ಭೇಟಿ ಮಾಡಿರುವ ದರ್ಶನ್ ಅವರು, ಇನ್ನುಮುಂದೆ ಈ ತರಹ ರಿಸ್ಕ್ ತೆಗೆದುಕೊಳ್ಳಬೇಡ, ಎಲ್ಲಕ್ಕಿಂದ ಜೀವ ಮುಖ್ಯ, ಚನ್ನಾಗಿ ವಿಶ್ರಾಂತಿ ಮಾಡಿ ಎಂದು ಹೇಳಿ ಬಂದಿದ್ದಾರೆ ನಟ ದರ್ಶನ್.

ಇನ್ನು ಕಾಲು ಮುರಿದುಕೊಂಡಿರುವ ವಿನೋದ್ ಪ್ರಭಾಕರ್ ಅವರಿಗೆ ಡಾಕ್ಟರ್ ಗಳು 5 ವಾರಗಳ ರೆಸ್ಟ್ ಹೇಳಿದ್ದಾರೆ, ವಿನೋದ್ ಪ್ರಭಾಕರ್ ಅವರು ಆದಷ್ಟು ಬೇಗ ಗುಣಮುಖರಾಗಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Darshan and Vinod Prabhakar

Please follow and like us:
0
http://karnatakatoday.in/wp-content/uploads/2019/04/Darshan-and-Vinod-Prabhakar-1-1024x576.jpghttp://karnatakatoday.in/wp-content/uploads/2019/04/Darshan-and-Vinod-Prabhakar-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಚುನಾವಣಾ ಪ್ರಚಾರದಲ್ಲಿ ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬ್ಯುಸಿ ಆಗಿದ್ದಾರೆ ಅಂತಾನೆ ಹೇಳಬಹುದು, ಇನ್ನು ಕೈ ಪೆಟ್ಟಾಗಿರುವ ಕಾರಣದಿಂದ ಚುನಾವಣಾ ಪ್ರಚಾರಕ್ಕೆ ಬ್ರೇಕ್ ಕೊಟ್ಟಿರುವ ದರ್ಶನ್ ಅವರು ಈಗ ಗ್ಯಾಪ್ ನಲ್ಲಿ ಒಂದು ಒಳ್ಳೆಯ ಕೆಲಸವನ್ನ ಮಾಡಿದ್ದಾರೆ. ಹಾಗಾದರೆ ಆ ಒಳ್ಳೆಯ ಕೆಲಸ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ದರ್ಶನ್ ಅವರ ಈ ಕೆಲಸದ ಬಗ್ಗೆ ನಿಮ್ಮ...Kannada News