Dharshan yajamana movie

ದರ್ಶನ್ ಅಭಿನಯದ ಯಜಮಾನ ಚಿತ್ರ ಈಗಾಗಲೇ ಟ್ರೇಲರ್ ರಿಲೀಸ್ ಆಗಿ ಯೌಟ್ಯೂಬ್ ನಲ್ಲಿ ದಾಖಲೆ ಮಾಡಿದ್ದೂ 24 ಗಂಟೆಗಳಲ್ಲಿ ಹೆಚ್ಚು ವೀಕ್ಷಣೆ ಕಂಡ ಎರಡನೇ ಚಿತ್ರವಾಗಿ ಹೊರಹೊಮ್ಮಿದೆ, ಇನ್ನು ಡಿ ಬಾಸ್ ಅಭಿಮಾಗಳಂತೂ ಚಿತ್ರಕ್ಕಾಗಿ ಎಲ್ಲಿಲ್ಲದ ಉತ್ಸಕಥೆ ಹೊಂದಿದ್ದಾರೆ.

ಟ್ರೈಲರ್ ನಲ್ಲಿ ದರ್ಶನ್​ ಖಡಕ್ ಡೈಲಾಗ್, ಆಕ್ಷನ್​ ಮೂಲಕ ಅಬ್ಬರಿಸಿದ್ದು, ಟ್ರೈಲರ್ ನಲ್ಲಿನ ಪಂಚಿಂಗ್ ಡೈಲಾಗ್ ಗಳು ದರ್ಶನ್ ಅಭಿಮಾನಿಗಳ ಮನ ಸೆಳೆಯುತ್ತದೆ, ‘ಆಕಾಶಕ್ಕೆ ತಲೆಕೊಟ್ಟು, ಭೂಮಿಗೆ ಬೆವರಿಳಿಸಿ, ನಿಯತ್ತಿಂದ ಕಟ್ಟಿರೊ ಸ್ವಂತ ಬ್ರಾಂಡೊ,’ಆನೆ ನಡೆದಿದ್ದೇ ದಾರಿ ತಾಕತ್ತಿದ್ದರೆ ಕಟ್ಟಾಕು’ ಎಂಬ ಡೈಲಾಗ್ ಗಳು ಈಗಾಗಲೇ ವೈರಲ್ ಆಗಿವೆ.

Dharshan yajamana movie

ಇನ್ನು ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡಿದ್ದು, ಇದು ದರ್ಶನ್ ಮತ್ತು ಹರಿಕೃಷ್ಣ ಅವರ ಕಾಂಬಿನೇಷನ್ ನಲ್ಲಿ ಬರುತ್ತಿರುವ 25ನೇ ಸಿನಿಮಾ ಇದಾಗಿದೆ ಎಂಬುದು ‘ಯಜಮಾನ’ ಚಿತ್ರದ ಮತ್ತೊಂದು ವಿಶೇಷ. ಇನ್ನು ದರ್ಶನ್ ಗೆ ಜೋಡಿಯಾಗಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದು, ಡಾಲಿ ಖ್ಯಾತಿಯ ಧನಂಜಯ್ ಮತ್ತು ಬಾಲಿವುಡ್ ನಟ ಅನೂಪ್ ಸಿಂಗ್ ಹಾಗೂ ಆರ್ಮುಗಂ ಖ್ಯಾತಿಯ ಆರ್ಮುಗಂ ರವಿಶಂಕರ್ ಖಳನಟರಾಗಿ ಅಭಿನಯಿಸಿದ್ದಾರೆ.

ಯಜಮಾನನ ಆರ್ಭಟಕ್ಕೆ ಯೌಟ್ಯೂಬ್ ಸಂಸ್ಥೆ ಕೂಡ ಖುಷಿ ಆಗಿದ್ದು ಚಿತ್ರದ ಕ್ರೇಜ್ ಬಗ್ಗೆ ಟ್ವೀಟ್ ಮಾಡಿದ್ದಾರೆ, ಇನ್ನೇನು ಕೆಲ ದಿನಗಳಲ್ಲಿ ಡಿ ಬಾಸ್ ಬರ್ತಡೇ ಬರಲಿದ್ದು ಈ ಬಾರಿ ಅಂಬರೀಷ್ ನಿಧನದ ಕಾರಣ ಸ್ವಲ್ಪ ಕಡಿಮೆ ಅದ್ದೂರಿಯಲ್ಲಿ ನಡೆಯಲಿದೆ.

Dharshan yajamana movie

ಅದಕ್ಕೂ ಮೊದಲೇ ದರ್ಶನ್ ಮಾಡಿರುವ ಮತ್ತೊಂದು ಕೋರಿಕೆ ಇದೀಗ ವೈರಲ್ ಆಗಿದೆ, ಹೌದು ಕೆಲ ಅಭಿಮಾನಿಗಳು ನನ್ನ ಹುಟ್ಟಿದ ದಿನದಂದು ಮನೆಯ ಮುಂದೆ ಆಹಾರ ಪದಾರ್ಥಗಳನ್ನು ತಂದು ಕೊಡಲಿದ್ದೇವೆ, ಅದನ್ನು ಬಡವರಿಗೆ ಹಾಗು ಸಿದ್ದಗಂಗಾ ಮಠಕ್ಕೆ ತಲುಪಿಸಿ ಎನ್ನುವ ಮಾತನ್ನು ತಿಳಿಸಿದ್ದಾರೆ. ಇದಕ್ಕೆ ಒಪ್ಪಿಕೊಂಡ ದರ್ಶನ್ ಮಠಕ್ಕೆ ಅಲ್ಲದೆ ಪ್ರತಿ ಜಿಲ್ಲೆಯ ಅನಾಥಾಶ್ರಮಕ್ಕೂ ತಲುಪಿಸುವ ಜವಾಬ್ದಾರಿ ನನ್ನದು ಎಂದಿದ್ದಾರೆ.

ನೋಡಿದಿರಲ್ಲ ಡಿ ಬಾಸ್ ಇನ್ನೊಂದು ಮುಖವನ್ನ, ಅಭಿಮಾನಿಗಳ ಒಂದು ಮಾತಿಗೆ ಬೆಲೆ ಕೊಟ್ಟು ದೊಡ್ಡದಾದ ಪುಣ್ಯದ ಕೆಲಸಕ್ಕೆ ಮುಂದಾಗಿದ್ದಾರೆ ದರ್ಶನ್ ಅವರ ಈ ಒಳ್ಳೆಯ ಗುಣಕ್ಕೆ ಆ ಸಿದ್ದಗಂಗಾ ಹರಸಲಿ ಎಂದು ಹಾರೈಸೋಣ, ದರ್ಶನ್ ಹುಟ್ಟುಹಬ್ಬಕ್ಕೆ ಈಗಲೇ ವಿಶ್ ತಿಳಿಸಿ.

Dharshan yajamana movie

Please follow and like us:
0
http://karnatakatoday.in/wp-content/uploads/2019/02/yajamana-trend-1024x576.jpghttp://karnatakatoday.in/wp-content/uploads/2019/02/yajamana-trend-150x104.jpgKarnataka Today's Newsಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲದರ್ಶನ್ ಅಭಿನಯದ ಯಜಮಾನ ಚಿತ್ರ ಈಗಾಗಲೇ ಟ್ರೇಲರ್ ರಿಲೀಸ್ ಆಗಿ ಯೌಟ್ಯೂಬ್ ನಲ್ಲಿ ದಾಖಲೆ ಮಾಡಿದ್ದೂ 24 ಗಂಟೆಗಳಲ್ಲಿ ಹೆಚ್ಚು ವೀಕ್ಷಣೆ ಕಂಡ ಎರಡನೇ ಚಿತ್ರವಾಗಿ ಹೊರಹೊಮ್ಮಿದೆ, ಇನ್ನು ಡಿ ಬಾಸ್ ಅಭಿಮಾಗಳಂತೂ ಚಿತ್ರಕ್ಕಾಗಿ ಎಲ್ಲಿಲ್ಲದ ಉತ್ಸಕಥೆ ಹೊಂದಿದ್ದಾರೆ. ಟ್ರೈಲರ್ ನಲ್ಲಿ ದರ್ಶನ್​ ಖಡಕ್ ಡೈಲಾಗ್, ಆಕ್ಷನ್​ ಮೂಲಕ ಅಬ್ಬರಿಸಿದ್ದು, ಟ್ರೈಲರ್ ನಲ್ಲಿನ ಪಂಚಿಂಗ್ ಡೈಲಾಗ್ ಗಳು ದರ್ಶನ್ ಅಭಿಮಾನಿಗಳ ಮನ ಸೆಳೆಯುತ್ತದೆ, 'ಆಕಾಶಕ್ಕೆ ತಲೆಕೊಟ್ಟು, ಭೂಮಿಗೆ ಬೆವರಿಳಿಸಿ, ನಿಯತ್ತಿಂದ...Kannada News