ಅಭಿಮಾನಿಗಳ ಪಾಲಿನ ಡಿ ಬಾಸ್ ತೆರೆಯೇ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲಿ ಕಷ್ಟ ಎಂದು ಬಂದವರ ಪಾಲಿನ ಕರುಣಾಮಯಿ, ಹೌದು ಕಷ್ಟ ಎಂದು ಬಂದವರಿಗೆ ಸಹಾಯ ಮಾಡುವ ದೊಡ್ಡ ಗುಣ ದರ್ಶನ್ ಅವರದ್ದು ಆಗಿದೆ. ತಮ್ಮ ಯಾರೇ ಸಹಾಯವನ್ನ ಕೇಳಿಕೊಂಡು ಬಂದರು ಕೂಡ ದರ್ಶನ್ ತನ್ನ ಸಹಾಯ ಹಸ್ತವನ್ನ ಚಾಚುತ್ತಾರೆ, ದರ್ಶನ್ ಅವರಿಗೆ ಅಭಿಮಾನಿಗಳು ಅಂದರೆ ತುಂಬಾ ಪ್ರೀತಿ ಮತ್ತು ಗೌರವ ಮತ್ತು ತಮ್ಮ ಅಭಿಮಾನಿಗಳು ಕಷ್ಟದಲ್ಲಿ ಇದ್ದಾರೆ ಅಂದರೆ ದರ್ಶನ್ ಅವರು ಏನು ಮಾಡಲು ಹಿಂದೆ ಸರಿಯುವುದಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಚಾಲೆಂಜಿಂಗ್ ದರ್ಶನ್ ಅವರು ಅನೇಕ ಸಮಾಜಮುಖಿ ಕೆಲಸಗಳನ್ನ ಯಾವಾಗಲೂ ಮಾಡುತ್ತಿರುತ್ತಾರೆ, ಹೌದು ವನ್ಯ ಜೀವಿಗಳನ್ನ ದತ್ತು ಪಡೆಯುವುದು, ಅರಣ್ಯ ಇಲಾಖೆಯಲ್ಲಿನ ಗುತ್ತಿಗೆ ನೌಕರರಿಗೆ ಸಹಾಯ ಹಸ್ತವನ್ನ ಚಾಚುವುದು ಸೇರಿದಂತೆ ಅದೆಷ್ಟೋ ಸಮಾಜಮುಖಿ ಕೆಲಸಗಳನ್ನ ಮಾಡುತ್ತಿದ್ದಾರೆ ದರ್ಶನ್ ಅವರು.

ದರ್ಶನ್ ಅವರಿಗೆ ಅಭಿಮಾನಿಗಳು ಅಂದರೆ ಪ್ರಾಣಕ್ಕಿಂತ ಹೆಚ್ಚು ಮತ್ತು ತನ್ನನ್ನ ಪ್ರಾಣಕ್ಕಿಂತ ಜಾಸ್ತಿ ಪ್ರೀತಿ ಮಾಡುವ ಅಭಿಮಾನಿಯೊಬ್ಬ ಕಳೆದ ವರ್ಷ ಇಹಲೋಕ ತ್ಯಜಿಸಿದ್ದು ದರ್ಶನ್ ಅವರು ತುಂಬಾ ಕಣ್ಣೀರು ಹಾಕಿದ್ದರು. ಇನ್ನು ಈಗ ದರ್ಶನ್ ಅವರು ಆ ಅಭಿಮಾನಿಯ ಕುಟುಂಬದ ಪೋಷಣೆಗೆ ನಿಂತಿದ್ದಾರೆ, ಹಾಗಾದರೆ ಆ ಅಭಿಮಾನಿ ಯಾರು ಮತ್ತು ಆತ ಸಾವನ್ನಪ್ಪಿದ್ದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ದರ್ಶನ್ ಅವರ ಈ ಗುಣದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಕೇವಲ ದರ್ಶನ್ ಅವರು ಮಾತ್ರವಲ್ಲದೆ ಅವರ ಮಗ ವಿನೀಶ್ ಅವರ ಹುಟ್ಟು ಹಬ್ಬವನ್ನ ದರ್ಶನ್ ಅಭಿಮಾನಿಗಳು ಬಹಳ ಸಡಗರದಿಂದ ಆಚರಣೆ ಮಾಡುತ್ತಾರೆ, ಜೂನಿಯರ್ ಚಾಲೆಂಜಿಂಗ್ ಸ್ಟಾರ್ ಹುಟ್ಟು ಹಬ್ಬದ ದಿನವೂ ಕೂಡ ಅಭಿಮಾನಿಗಳು ಡಿ ಬಾಸ್ ಮನೆಗೆ ಬಂದು ಕೇಕ್ ಕಟ್ ಮಾಡಿ ಹುಟ್ಟು ಹಬ್ಬವನ್ನ ಆಚರಣೆ ಮಾಡುತ್ತಾರೆ.

Darshan fan Rakesh

ಇನ್ನು ಕಳೆದ ವರ್ಷ ವಿನೀಶ್ ಹುಟ್ಟು ಹಬ್ಬದ ದಿನ ದರ್ಶನ್ ಅವರ ಮನೆಯಲ್ಲಿ ದೊಡ್ಡ ದುರಂತವೇ ನಡೆದು ಹೋಗಿತ್ತು ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಸ್ನೇಹಿತರೆ ವಿನೀಶ್ ಹುಟ್ಟು ಹಬ್ಬದ ದಿನ ವಿನೀಶ್ ಗೆ ಶುಭಾಶಯವನ್ನ ಹೇಳಲು ರಾಕೇಶ್ ಅನ್ನುವ ಅಭಿಮಾನಿ ದರ್ಶನ್ ಅವರ ಮನೆಗೆ ಬಂದಿದ್ದ ಮತ್ತು ವಿನೀಶ್ ಹುಟ್ಟು ಹಬ್ಬವನ್ನ ಆಚರಣೆ ಮಾಡಿ ವಾಪಾಸ್ ಮನೆಗೆ ಹೋಗುವಾಗ ಅಪಘಾತಕ್ಕೆ ಈಡಾಗಿ ತನ್ನ ಪ್ರಾಣವನ್ನ ಕಳೆದುಕೊಂಡಿದ್ದ. ಇನ್ನು ರಾಕೇಶ್ ಅವರ ಸಾವಿನಿಂದ ತುಂಬಾ ನೊಂದ ದರ್ಶನ್ ಅವರು ಅಭಿಮಾನಿಯೇ ಸಾವಿಗೆ ಕಣ್ಣೀರು ಹಾಕಿದ್ದರು ಮತ್ತು ತನ್ನ ಅಭಿಮಾನಿಯ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿಗಳ ಹಣ ಸಹಾಯವನ್ನ ಮಾಡಿದ್ದರು ಮತ್ತು ಕುಟುಂಬಕ್ಕೆ ಆಸರೆಯಾಗಿ ನಿಲ್ಲುವ ಭಾರವಸೆಯನ್ನ ಕೂಡ ನೀಡಿದ್ದರು. ಬೇರೆ ನಟರಾದರೆ ಆ ಭರವಸೆ ಕೇವಲ ಭರವಸೆಯಾಗಿಯೇ ಉಳಿಯುತ್ತಿತ್ತು ಅನ್ನಬಹುದು ಆದರೆ ದರ್ಶನ್ ಅವರು ಹಾಗೆ ಮಾಡಲಿಲ್ಲ.

ಹೌದು ಈ ಭಾರಿ ವಿನೀಶ್ ಹುಟ್ಟು ಹಬ್ಬದ ದಿನ ಅಗಲಿದ ಅಭಿಮಾನಿ ರಾಕೇಶ್ ಕುಟುಂಬದವರನ್ನ ಮನೆಗೆ ಕರೆಸಿಕೊಂಡ ದರ್ಶನ್ ಅವರು ರಾಕೇಶ್ ಅವರಿಗೆ ಇದ್ದ ಇಬ್ಬರು ಸಹೋದರಿಯರ ಮದುವೆಯ ಸಂಪೂರ್ಣ ವೆಚ್ಚವನ್ನ ತಾನೇ ವಹಿಸಿಕೊಳ್ಳುವುದಾಗಿ ಅವರ ಕುಟುಂಬದವರಿಗೆ ಧೈರ್ಯ ಹೇಳಿ ಕಳುಹಿಸಿದ್ದಾರೆ ದರ್ಶನ್ ಅವರು. ಇಷ್ಟು ದೊಡ್ಡ ಗುಣ ಯಾವ ನಟನಿಗೆ ಇರುತ್ತದೆ ಹೇಳಿ ಸ್ನೇಹಿತರೆ, ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೇವಲ ಪರದೆಯ ಮೇಲೆ ಮಾತ್ರ ಹೀರೋ ಅಲ್ಲ ರಿಯಲ್ ಲೈಫ್ ಕೂಡ ಹೀರೋ. ದರ್ಶನ್ ಅವರು ತಮ್ಮ ಅಭಿಮಾನಿಗಳ ಮೇಲೆ ಇಟ್ಟುಕೊಂಡಿರುವ ಪ್ರೀತಿ ಮತ್ತು ಗೌರವದಿಂದಲೇ ಇಂದು ಇಷ್ಟು ದೊಡ್ಡ ನಟರಾಗಿ ಬೆಳೆದಿರುವುದು ಎಂದು ಹೇಳಿದರೆ ತಪ್ಪಾಗಲ್ಲ, ಅಭಿಮಾನಿಗಳನ್ನ ಆಕಾಶದ ಎತ್ತರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇನ್ನು ಎತ್ತರಕ್ಕೆ ಬೆಳೆಯಬೇಕು, ಸ್ನೇಹಿತರೆ ದರ್ಶನ್ ಅವರ ಈ ಸಹಾಯದ ಗುಣದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Darshan fan Rakesh

Please follow and like us:
error0
http://karnatakatoday.in/wp-content/uploads/2019/11/Darshan-fan-Rakesh-1-1024x576.jpghttp://karnatakatoday.in/wp-content/uploads/2019/11/Darshan-fan-Rakesh-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಅಭಿಮಾನಿಗಳ ಪಾಲಿನ ಡಿ ಬಾಸ್ ತೆರೆಯೇ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲಿ ಕಷ್ಟ ಎಂದು ಬಂದವರ ಪಾಲಿನ ಕರುಣಾಮಯಿ, ಹೌದು ಕಷ್ಟ ಎಂದು ಬಂದವರಿಗೆ ಸಹಾಯ ಮಾಡುವ ದೊಡ್ಡ ಗುಣ ದರ್ಶನ್ ಅವರದ್ದು ಆಗಿದೆ. ತಮ್ಮ ಯಾರೇ ಸಹಾಯವನ್ನ ಕೇಳಿಕೊಂಡು ಬಂದರು ಕೂಡ ದರ್ಶನ್ ತನ್ನ ಸಹಾಯ ಹಸ್ತವನ್ನ ಚಾಚುತ್ತಾರೆ, ದರ್ಶನ್ ಅವರಿಗೆ ಅಭಿಮಾನಿಗಳು ಅಂದರೆ ತುಂಬಾ ಪ್ರೀತಿ ಮತ್ತು ಗೌರವ ಮತ್ತು ತಮ್ಮ ಅಭಿಮಾನಿಗಳು ಕಷ್ಟದಲ್ಲಿ ಇದ್ದಾರೆ...Film | Devotional | Cricket | Health | India