ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ ಅನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ದರ್ಶನ್ ಅವರು ಹೇಗೆ ಇರುತ್ತಾರೋ ಅದರ ಪ್ರತಿಬಿಂಬದಂತೆ ಅವರ ಅಭಿಮಾನಿಗಳು ಕೂಡ ಇರುತ್ತಾರೆ, ದರ್ಶನ್ ಅವರ ಭಿಮಾನಿಗಳು ಅಂದರೆ ಸ್ವತಃ ದರ್ಶನ್ ಅವರ ಪ್ರತಿಬಿಂಬ ಇದ್ದಂತೆ ಎಂದು ಹೇಳಿದರೆ ತಪ್ಪಾಗಲ್ಲ. ದರ್ಶನ್ ಅವರ ತಮ್ಮ ಅಭಿಮಾನಿಗಳನ್ನ ತುಂಬಾ ಪ್ರೀತಿ ಮಾಡುತ್ತಾರೆ, ಕೇವಲ ಸಿನಿಮಾ ಮಾತ್ರವಲ್ಲದೆ ಹೊರ ಪ್ರಪಂಚದಲ್ಲಿ ದರ್ಶನ್ ಅವರು ಹೇಗೆ ನಡೆದುಕೊಳ್ಳುತ್ತಾರೋ ಅದೇ ರೀತಿಯಲ್ಲಿ ದರ್ಶನ್ ಅವರ ಅಭಿಮಾನಿಗಳು ಕೂಡ ನಡೆದುಕೊಳ್ಳುತ್ತಾರೆ.

ಇನ್ನು ಈಗ ದರ್ಶನ್ ಅಭಿಮಾನಿಗಳು ಮಾಡಿದ ಕೆಲಸಕ್ಕೆ ರಾಜ್ಯ ಸರ್ಕಾರವೇ ಮೆಚ್ಚಿಕೊಂಡಿದೆ ಮತ್ತು ದರ್ಶನ್ ಅಭಿಮಾನಿಗಳ ಬೆನ್ನು ತಟ್ಟಿದೆ, ಹಾಗಾದರೆ ಅಭಿಮಾನಿಗಳು ಮಾಡಿದ ಕೆಲಸ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ. ಹೌದು ದರ್ಶನ್ ಅವರು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಅನೇಕ ಸಮಾಜಮುಖಿ ಕೆಲಸಗಳನ್ನ ಮಾಡಿ ಸೈ ಎನಿಸಿಕೊಳ್ಳುತ್ತಾರೆ, ಇನ್ನು ಅನೇಕ ಅನಾಥ ಆಶ್ರಮ ಮತ್ತು ಮಠಗಳಿಗೆ ಆಹಾರ ದಾನ್ಯಗಳನ್ನ ಕಳುಹಿಸಿಕೊಡುವ ದರ್ಶನ್ ಅವರು ಮೃಗಾಲಯದಲ್ಲಿ ಪ್ರಾಣಿಗಳನ್ನ ಕೂಡ ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ.

D Boss company

ಇನ್ನು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಸಲುವಾಗಿ ದರ್ಶನ್ ಅವರು ಪ್ರತಿವರ್ಷ ಲಕ್ಷಗಟ್ಟಲೆ ಹಣವನ್ನ ಕರ್ಕ ಮಾಡುತ್ತಾರೆ. ಇನ್ನು ಈಗ ದರ್ಶನ್ ಅವರ ಅಭಿಮಾನಿಗಳ ಸಂಘ ಡಿ ಬಾಸ್ ಸಂಘ ಹಳ್ಳಿ ಸರ್ಕಾರೀ ಶಾಲೆಯೊಂದನ್ನ ದತ್ತು ತೆಗೆದುಕೊಳ್ಳುವುದರ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ, ಹೌದು ಸರ್ಕಾರೀ ಶಾಲೆಗಂಟೆ ಮೂಗು ಮುರಿದುಕೊಂಡು ಖಾಸಗಿ ಶಾಲೆಗಳಿಗೆ ಸೇರುವ ಈಗಿನ ಕಾಲದಲ್ಲಿ ಸರ್ಕಾರೀ ಶಾಲೆಗಳನ್ನ ಪುನರ್ ಚೇತನಗೊಳಿಸಿ ಬಡ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನ ಒದಗಿಸಬೇಕು ಅನ್ನುವ ಸದುದ್ದೇಶದಿಂದ ಸಕಲೇಶಪುರ ತಾಲೂಕಿನ ಹಳ್ಳಿಯೊಂದರ ಸರ್ಕಾರೀ ಶಾಲೆಯನ್ನ ಡಿ ಬಾಸ್ ಅಭಿಮಾನಿಗಳ ಸಂಘ ಎರಡು ವರ್ಷಗಳ ಅವಧಿಗೆ ದತ್ತು ತೆಗೆದುಕೊಂಡಿದ್ದಾರೆ.

ಇನ್ನು ಈ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಬೇಕಾಗುವ ಸಮವಸ್ತ್ರ, ಪಠ್ಯ ಪುಸ್ತಕಗಳು, ಶಾಲಾ ಕಟ್ಟಡಕ್ಕೆ ಬಣ್ಣ ಮತ್ತು ಪೀಠೋಪಕರಣಗಳು ಸೇರಿದಂತೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನ ಒದಗಿಸಲು ಮುಂದಾಗಿದೆ ಡಿ ಬಾಸ್ ಅಭಿಮಾನಿಗಳ ಸಂಘ. ಇನ್ನು ಇದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಂಸ್ಥೆಯಿಂದ ಅನುಮತಿಯನ್ನ ಕೂಡ ಪಡೆದುಕೊಳ್ಳಲಾಗಿದೆ.

ಇನ್ನು ದರ್ಶನ್ ಅಭಿಮಾನಿಗಳು ಮಾಡುತ್ತಿರುವ ಈ ಕೆಲಸಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಮೆಚ್ಚುಗೆಯನ್ನ ವ್ಯಕ್ತಪಡಿಸಿದೆ. ಇನ್ನು ಕರ್ನಾಟಕ ಸರ್ಕಾರದ ಶಿಕ್ಷಣ ಮಂತ್ರಿಗಳಾದ ಸುರೇಶ್ ಕುಮಾರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಮತ್ತು ಅವರ ಅಭಿಮಾಗಳಿಗೆ ಅಭಿನಂದನೆಯನ್ನ ಸಲ್ಲಿಸಿದ್ದಾರೆ, ದರ್ಶನ್ ಅಭಿಮಾನಿ ಸಂಘದ ಈ ಜನಮೆಚ್ಚುವ ಕೆಲಸವನ್ನ ಇಡೀ ಕರ್ನಾಟಕದ ಜನರೇ ಮೆಚ್ಚಿಕೊಂಡಿದ್ದಾರೆ.

D Boss company

Please follow and like us:
error0
http://karnatakatoday.in/wp-content/uploads/2019/09/D-Boss-company-1-1024x576.jpghttp://karnatakatoday.in/wp-content/uploads/2019/09/D-Boss-company-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ ಅನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ದರ್ಶನ್ ಅವರು ಹೇಗೆ ಇರುತ್ತಾರೋ ಅದರ ಪ್ರತಿಬಿಂಬದಂತೆ ಅವರ ಅಭಿಮಾನಿಗಳು ಕೂಡ ಇರುತ್ತಾರೆ, ದರ್ಶನ್ ಅವರ ಭಿಮಾನಿಗಳು ಅಂದರೆ ಸ್ವತಃ ದರ್ಶನ್ ಅವರ ಪ್ರತಿಬಿಂಬ ಇದ್ದಂತೆ ಎಂದು ಹೇಳಿದರೆ ತಪ್ಪಾಗಲ್ಲ. ದರ್ಶನ್ ಅವರ ತಮ್ಮ ಅಭಿಮಾನಿಗಳನ್ನ ತುಂಬಾ ಪ್ರೀತಿ ಮಾಡುತ್ತಾರೆ, ಕೇವಲ...Film | Devotional | Cricket | Health | India