ಕುರಿಕಾಯೋ ಹನುಮಂತನ ಹೆಸರು ಈಗ ಒಂದು ಸಾಮಾನ್ಯ ಹೆಸರಲ್ಲ ಒಂದು ಬ್ರಾಂಡ್ ಮತ್ತು ಸೆಲೆಬ್ರಿಟಿ ಹೆಸರು ಎಂದು ಹೇಳಿದರೆ ತಪ್ಪಾಗಲ್ಲ, ಸರಿಗಮಪದಲ್ಲಿ ತನ್ನ ಮಧುರವಾದ ಧ್ವನಿ ಮತ್ತು ಹಳ್ಳಿ ಹೈದನ ಮುದ್ದತೆಯಿಂದ ಇಡೀ ರಾಜ್ಯದ ಜನರ ಮನ ಸ್ಥಾನವನ್ನ ಗಿಟ್ಟಿಸಿಕೊಂಡ ಹನುಮಂತ ಅಂದರೆ ಎಲ್ಲರಿಗೂ ತುಂಬಾ ಇಷ್ಟ. ಹನುಮಂತನ ಚಿಕ್ಕ ವಿಷಯಗಳು ಕೂಡ ದೊಡ್ಡ ಸುದ್ದಿಯಾಗುತ್ತದೆ, ಹೌದು ಹನುಮಂತ ನಿಂತರು ಸುದ್ದಿ ಕುಂತರು ಸುದ್ದಿ ಮತ್ತು ಮಲಗಿದರೂ ಕೂಡ ದೊಡ್ಡ ಸುದ್ದಿನೇ ಅನ್ನುವ ಹಾಗೆ ಆಗಿದೆ. ಇನ್ನು ಹನುಮಂತ ಕಣ್ಣೀರು ಹಾಕಿದ್ದಾನೆ ಅಂದರೆ ಅದರ ಸುತ್ತ ನೂರಾರು ಕಥೆಗಳು ಹುಟ್ಟಿಕೊಳ್ಳುತ್ತದೆ, ಇನ್ನು ಸದ್ಯಕ್ಕೆ ಹನುಮಂತ ತನ್ನ ಹೊಸ ಮನೆಯ ಗೃಹ ಪ್ರವೇಶದ ದಿನ ಕಣ್ಣೀರು ಹಾಕಿದ್ದು ಮಾತ್ರ ಈಗ ಎಲ್ಲ ಕಡೆ ವೈರಲ್ ಆಗುತ್ತಿದೆ.

ಹಾಗಾದರೆ ಹನುಮಂತ ಕಣ್ಣೀರು ಹಾಕಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅನುಶ್ರೀ ಅವರಿಂದ, ಹಾಗಾದರೆ ಆಗಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಕೆಲವು ದಿನಗಳ ಹಿಂದೆ ಹನುಮಂತನ ಹೊಸ ಮನೆಯ ಗೃಹ ಪ್ರವೇಶ ನಡೆದಿತ್ತು, ತನ್ನ ಭವಿಷ್ಯವನ್ನ ರೂಪಿಸಿಕೊಳ್ಳಲು ನೆರವಾದವರಿಗೆ, ತನಗೆ ಸಹಾಯದ ಮಾಡಿದ ಎಲ್ಲರಿಗೂ ಕೂಡ ಹನುಮಂತ ಗೃಹ ಪ್ರವೇಶದ ಆಮಂತ್ರಣ ನೀಡಿದ್ದನು.

Darshan gift to hanumanta

ಇನ್ನು ತನ್ನ ಮನೆಯ ಗೃಹ ಪ್ರವೇಶ ಇದ್ದ ಕಾರಣ DKD ಇಂದ ಒಂದು ವಾರದ ಅನುಮತಿಯನ್ನ ಕೂಡ ಪಡೆದು ಬಂದಿದ್ದ ಹನುಮಂತ, ಇನ್ನು ಗೃಹ ಪ್ರವೇಶಕ್ಕೆ ಆಮಂತ್ರಣ ನೀಡಿದ್ದ ಎಲ್ಲರೂ ಬಂದಿದ್ದರು ಆದರೆ ಹನುಮಂತನ ಅಕ್ಕ ಮತ್ತು ಅಣ್ಣ ಅಂದರೆ ಅನುಶ್ರೀ ಮತ್ತು ದರ್ಶನ್ ಅವರು ಬಾರದೆ ಇದ್ದದ್ದಕ್ಕೆ ಹನುಮಂತ ಕಣ್ಣೀರು ಹಾಕಿದ್ದಾನೆ. ನಿರೂಪಕಿ ಅನುಶ್ರೀ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಹಳ ಬ್ಯುಸಿ ಇರುವ ಕಾರಣ ಹನುಮಂತನ ಮನೆಯ ಗೃಹ ಪ್ರವೇಶಕ್ಕೆ ಹೋಗಲು ಅವರಿಂದ ಸಾಧ್ಯವಾಗಲಿಲ್ಲ.

ಇನ್ನು ತಮ್ಮ ತಮ್ಮನಂತೆ ಪ್ರೀತಿಯಿಂದ ಕಾಣುವ ಹನುಮಂತನಿಗೆ ದರ್ಶನ್ ಮತ್ತು ಅನುಶ್ರೀ ಅವರು ಭರ್ಜರಿ ಗಿಫ್ಟ್ ನ್ನ ನೀಡಿದ್ದಾರೆ, ಹೌದು ಅನುಶ್ರೀ ಅವರು ತಮ್ಮ ತಮ್ಮನಿಗೆ ಪ್ರೀತಿಯಿಂದ ಪಲ್ಸರ್ ಬೈಕ್ ನ್ನ ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹನುಮಂತನಿಗೆ ತಮ್ಮ ಸಹಾಯಕನ ಬಳಿ ಕವರ್ ಒಂದನ್ನ ಕಳುಹಿಸಿದ್ದು ಹನುಮಂತನಿಗೆ ಹಣದ ಸಹಾಯವನ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಪ್ರೀತಿಯ ಅಕ್ಕ ಮತ್ತು ಅಣ್ಣ ಕೊಟ್ಟ ಉಡುಗೊರೆಯನ್ನ ನೋಡಿ ಹನುಮಂತ ಭಾವುಕನಾಗಿ ಗೃಹ ಪ್ರವೇಶದ ದಿನವೇ ಕಣ್ಣೀರು ಹಾಕಿದ್ದಾನೆ ಎಂದು ತಿಳಿದು ಬಂದಿದೆ. ಅಣ್ಣ ಮತ್ತು ಅಕ್ಕ ಉಡುಗೊರೆಯನ್ನ ನೋಡಿ ಸಿಕ್ಕಾಪಟ್ಟೆ ಖುಷಿಪಟ್ಟ ಹನುಮಂತ ನಾನು ಯಾರು ಅಲ್ಲ ಅವರಿಗೆ ಆದರೂ ಕೂಡ ನನ್ನನ್ನ ಸ್ವಂತ ತಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಸಂತಸವನ್ನ ವ್ಯಕ್ತಪಡಿಸಿದ್ದಾನೆ ಹನುಮಂತ.

Darshan gift to hanumanta

Please follow and like us:
error0
http://karnatakatoday.in/wp-content/uploads/2019/11/Darshan-gift-to-Hanumanta-1024x576.jpghttp://karnatakatoday.in/wp-content/uploads/2019/11/Darshan-gift-to-Hanumanta-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಮಂಗಳೂರುಸುದ್ದಿಜಾಲಕುರಿಕಾಯೋ ಹನುಮಂತನ ಹೆಸರು ಈಗ ಒಂದು ಸಾಮಾನ್ಯ ಹೆಸರಲ್ಲ ಒಂದು ಬ್ರಾಂಡ್ ಮತ್ತು ಸೆಲೆಬ್ರಿಟಿ ಹೆಸರು ಎಂದು ಹೇಳಿದರೆ ತಪ್ಪಾಗಲ್ಲ, ಸರಿಗಮಪದಲ್ಲಿ ತನ್ನ ಮಧುರವಾದ ಧ್ವನಿ ಮತ್ತು ಹಳ್ಳಿ ಹೈದನ ಮುದ್ದತೆಯಿಂದ ಇಡೀ ರಾಜ್ಯದ ಜನರ ಮನ ಸ್ಥಾನವನ್ನ ಗಿಟ್ಟಿಸಿಕೊಂಡ ಹನುಮಂತ ಅಂದರೆ ಎಲ್ಲರಿಗೂ ತುಂಬಾ ಇಷ್ಟ. ಹನುಮಂತನ ಚಿಕ್ಕ ವಿಷಯಗಳು ಕೂಡ ದೊಡ್ಡ ಸುದ್ದಿಯಾಗುತ್ತದೆ, ಹೌದು ಹನುಮಂತ ನಿಂತರು ಸುದ್ದಿ ಕುಂತರು ಸುದ್ದಿ ಮತ್ತು ಮಲಗಿದರೂ ಕೂಡ...Film | Devotional | Cricket | Health | India