ಇತಿಹಾಸದ್ಲಲೇ ಮೊದಲ ಬಾರಿಗೆ ಸ್ಯಾಂಡಲ್ವುಡ್ ನಂತರ ಮೇಲೆ ಅದು ಕೂಡ ಒಮ್ಮೆಲೇ ಐಟಿ ಅಧಿಕಾರಿಗಳು ದಾಳಿ ಮಾಡುವ ಮೂಲಕ ಸದ್ದು ಮಾಡಿದ್ದಾರೆ. ಯಾವ ಮುನ್ಸೂಚನೆ ಇಲ್ಲದೆ ನಟರಿಗೆ ಶಾಕ್ ಕೊಟ್ಟ ಅಧಿಕಾರಿಗಳು ಬ್ಯುಸಿ ಇದ್ದ ನಟರೆಲ್ಲ ಮನೆಕಡೆ ಧಾವಿಸುವಂತೆ ಮಾಡಿದ್ದಾರೆ. ಇನ್ನು ಇದೆ ವಿಷಯ ಈಗ ಭಾರಿ ಚರ್ಚೆಯಾಗುತ್ತಿದೆ.ಸ್ಯಾಂಡಲ್‍ ವುಡ್ ನ ನಟ ನಿರ್ಮಾಪಕರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರೆಗೆ ಅಧಿಕಾರಿಗಳ ದಾಳಿ ಸತತ ಮೂರನೇ ದಿನವೂ ಮುಂದುವರೆದಿದ್ದು, ಶನಿವಾರ ಕೂಡ ನಟ ಯಶ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಮನೆಯಲ್ಲಿ ಲೆಕ್ಕಪತ್ರಗಳ ಪರಿಶೀಲನೆ ಮುಂದುವರೆದಿದೆ. ನಿನ್ನೆ ನಟ ಪುನೀತ್ ರಾಜಕುಮಾರ್​ ಮನೆ‌ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು, ನಿವಾಸಕ್ಕೆ ಆಡಿಟರ್ಸ್ ಗಳನ್ನು ಕರೆಸಿಕೊಂಡಿದ್ದರು.

ಪುನೀತ್ ರಾಜ್ ಕುಮಾರ್​ ಕುಟುಂಬದ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತಿರುವ ಇಬ್ಬರು ಆಡಿಟರ್ಸ್ ಇದೀಗ ನಿವಾಸಕ್ಕೆ ಆಗಮಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಈಗಾಗಲೇ ಐಟಿ ಅಧಿಕಾರಿಗಳು ಪುನೀತ್ ಆರ್ಥಿಕ ವ್ಯವಹಾರಗಳು ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದುಕೊಂಡಿದ್ದಾರೆ. ಜಂಟಿ ಆಯುಕ್ತ ರಮೇಶ್​ ಅವರೇ ಖುದ್ದು, ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಅವರನ್ನ ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ.

ಇತ್ತ ಸುದೀಪ್ ಮನೆಯಲ್ಲಿ ಕೂಡ ವಿಚಾರಣೆ ನಡೆದಿದೆ, ಆದರೆ ಬಹಳ ಒಂದು ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿತ್ತು ಅದೇನೆಂದರೆ ಸ್ಯಾಂಡಲ್ವುಡ್ ಡಿ ಬಾಸ್ ದರ್ಶನ್ ಮನೆಗೆ ಯಾಕೆ ರೈಡ್ ಆಗಿಲ್ಲ ಎಂದು ಈ ಬಗ್ಗೆ ಹುಡುಕಾಡಿದಾಗ ಸಿಕ್ಕ ಕೆಲ ಮಾಹಿತಿ ಎಂದರೆ ಐಟಿ ಅಧಿಕಾರಿಗಳ ದಾಳಿ ಕೇವಲ ನಿನ್ನೆ ಮೊನೆಯ ಪ್ಲಾನ್ ಆಗಿರಲ್ಲ ಬದಲಿಗೆ ಪಕ್ಕಾ ಪ್ಲಾನ್ ಮಾಡಿ ಮಾಹಿತಿ ಇದ್ದುಕೊಂಡೇ ಮಾಡಿರುತ್ತಾರೆ.

ಹೀಗಾಗಿ ಕೆಲ ಬಲ್ಲ ಮೂಲಗಳ ಪ್ರಕಾರ ಹಣಕಾಸಿನ ವಿಚಾರದಲ್ಲಿ ದರ್ಶನ್ ಬಹಳ ಸೂಕ್ಷ್ಮ, ತಮ್ಮ ಆದಾಯ ಮತ್ತು ಎಲ್ಲ ಆದಾಯದ ಮೂಲವನ್ನು ಸರಿಯಾಗಿ ತೋರಿಸಿ ತೆರಿಗೆ ಕಟ್ಟುತ್ತಾರೆ ಎನ್ನಲಾಗಿದೆ. ಹೀಗಾಗಿ ಅಭಿಮಾನಿಗಳ ಹೀರೊ ಡಿ ಬಾಸ್ ಲೆಕ್ಕದ ವಿಚಾರದಲ್ಲಿ ಎಂದು ತಪ್ಪಿಲ್ಲ ಎನ್ನಬಹುದು. ಅದೇನೇ ಇರಲಿ ಸ್ಯಾಂಡಲ್ವುಡ್ ನಟರಿಗೆ ಯಾವುದೇ ತೊಂದರೆಯಾಗದಂತೆ ಐಟಿ ಅಧಿಕಾರಿಗಳು ತನಿಖೆ ನಡೆಸಲಿ ಎನ್ನುವುದೇ ಎಲ್ಲರ ಆಶಯ.

Please follow and like us:
0
http://karnatakatoday.in/wp-content/uploads/2019/01/IT-DARSHAN-1024x576.pnghttp://karnatakatoday.in/wp-content/uploads/2019/01/IT-DARSHAN-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಇತಿಹಾಸದ್ಲಲೇ ಮೊದಲ ಬಾರಿಗೆ ಸ್ಯಾಂಡಲ್ವುಡ್ ನಂತರ ಮೇಲೆ ಅದು ಕೂಡ ಒಮ್ಮೆಲೇ ಐಟಿ ಅಧಿಕಾರಿಗಳು ದಾಳಿ ಮಾಡುವ ಮೂಲಕ ಸದ್ದು ಮಾಡಿದ್ದಾರೆ. ಯಾವ ಮುನ್ಸೂಚನೆ ಇಲ್ಲದೆ ನಟರಿಗೆ ಶಾಕ್ ಕೊಟ್ಟ ಅಧಿಕಾರಿಗಳು ಬ್ಯುಸಿ ಇದ್ದ ನಟರೆಲ್ಲ ಮನೆಕಡೆ ಧಾವಿಸುವಂತೆ ಮಾಡಿದ್ದಾರೆ. ಇನ್ನು ಇದೆ ವಿಷಯ ಈಗ ಭಾರಿ ಚರ್ಚೆಯಾಗುತ್ತಿದೆ.ಸ್ಯಾಂಡಲ್‍ ವುಡ್ ನ ನಟ ನಿರ್ಮಾಪಕರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರೆಗೆ ಅಧಿಕಾರಿಗಳ ದಾಳಿ ಸತತ ಮೂರನೇ...Kannada News