ಸ್ನೇಹಿತರೆ ದಾಸವಾಳ ಅಂದರೆ ನಮಗೆ ನೆನಪಾಗುವುದು ಅದರ ಆಕಾರ ಮತ್ತು ಅದರ ಆಕರ್ಷಕ ಬಣ್ಣ, ಇನ್ನು ದಾಸವಾಳ ಹೂವನ್ನ ನಾವು ಕೆಂಪು, ಹಳದಿ ಮತ್ತು ಇತರೆ ಬಣ್ಣಗಳಲ್ಲಿ ಕಾಣಬಹುದಾಗಿದೆ. ಸ್ನೇಹಿತರೆ ದಾಸವಾಳ ಹೂ ಕೇವಲ ಒಂದು ಸುಂದರ ಹೂವು ಮಾತ್ರವಲ್ಲದೆ ಅದರಲ್ಲಿ ನಮಗೆ ತಿಳಿಯದ ಔಷದಿಯ ಗುಣ ಕೂಡ ಇದೆ, ಇನ್ನು ಅತ್ಯಂತ ವೇಗದಲ್ಲಿ ಬೆಳೆಯುವ ಸಸ್ಯ ಅನ್ನುವ ಹೆಗ್ಗಳಿಕೆಯನ್ನ ಪಡೆದಿರುವ ಈ ಸಸ್ಯ ಬಹುತೇಕ ಎಲ್ಲಾ ದಿನಗಳಲ್ಲಿ ಹಸಿರಿನಿಂದ ಕಂಗೊಳಿಸುತ್ತದೆ.

ಇನ್ನು ದಾಸವಾಳ ಹೂವು ಕೇವಲ ಅಲಂಕಾರಕ್ಕೆ ಮಾತ್ರವಲ್ಲದೆ ವೈದ್ಯಕೀಯ ಉದ್ದೇಶಕ್ಕೂ ಕೂಡ ಬಳಕೆ ಆಗುತ್ತದೆ, ಹಾಗಾದರೆ ದಾಸವಾಳ ಹೂವನ್ನ ಯಾವ ಔಷದಗಳ ತಯಾರಿಕೆಯನ್ನ ಉಪಯೋಗಿಸುತ್ತಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ದಾಸವಾಳ ಹೂವಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ದಾಸವಾಳ ಹೂವನ್ನ ಸೌಂದರ್ಯ ವರ್ಧಕ, ಔಷದ ಹಾಗು ನೈಸರ್ಗಿಕ ಬಣ್ಣಗಳ ತಯಾರಿಕೆಯಲ್ಲಿ ದಾಸವಾಳದಷ್ಟು ಹೆಚ್ಚು ಬಳಕೆ ಆಗುವ ಹೂವು ಇನ್ನೊಂದು ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಮಹಿಳೆಯರ ತಲೆ ಕೂದಲ ಬೆಳವಣಿಯಲ್ಲಿ ದಾಸವಾಳದ ಹೂವಿನಿಂದ ಮಾಡಿದ ಔಷಧ ಮುಖ್ಯ ಪಾತ್ರವನ್ನ ವಹಿಸುತ್ತದೆ ಅನ್ನುವುದು ದೇಶದಲ್ಲಿ ಹಲವು ಜನರಿಗೆ ತಿಳಿದಿಲ್ಲ.

Dasavala flower

ಹೌದು ಸ್ನೇಹಿತರೆ ತಲೆಯಲ್ಲಿನ ಹೊಟ್ಟುಗಳನ್ನ ನಿವಾರಿಸಿ ಇದು ತಲೆಯ ಕೂದಲುಗಳಿಗೆ ಕಪ್ಪು ಬಣ್ಣವನ್ನ ನೀಡುತ್ತದೆ, ಇನ್ನು ಈ ಹೂವಿನಲ್ಲಿ ಇರುವ ನೈಸರ್ಗಿಕ ತೈಲಾ ಅತ್ಯದ್ಭುತ ಕಂಡಿಷನರ್ ಆಗಿದೆ ಮತ್ತು ದಾಸವಾಳ ಹೂವಿಂದ ಮಾಡಿದ ತೈಲಗಳ ಬಳಕೆಯಿಂದ ದೇಹದ ಚರ್ಮಕ್ಕೆ ಒಳ್ಳೆಯ ಹೊಳಪು ಬರುತ್ತದೆ. ಇನ್ನು ದಾಸವಾಳ ಹೂವ ಒಣಗಿಸಿ ನಂತರ ಅದನ್ನ ಸುಡಬೇಕು, ಹೀಗೆ ಸುಟ್ಟಾಗ ಬಂಡ ಬೂದಿಯನ್ನ ಕಣ್ಣಿನ ಹುಬ್ಬಿಗೆ ಹಚ್ಚಿದರೆ ಕಣ್ಣಿನ ಹುಬ್ಬುಗಳು ಒಳ್ಳೆಯ ಹೊಳಪವನ್ನ ಪಡೆಯುತ್ತದೆ.

ಇನ್ನು ದಾಸವಾಳ ಸಸ್ಯದ ಬೇರನ್ನ ಬಳಸಿ ತಯಾರಿಸಿದ ಔಷಧವು ಅನೇಕ ರೋಗಗಳಿಗೆ ರಾಮಬಾಣವಾಗಿದೆ, ಇನ್ನು ಬಿಳಿ ದಾಸವಾಳದ ಮೊಗ್ಗನ್ನ ಉಪಹಾರ ಸೇವನೆ ಮಾಡುವುದಕ್ಕಿಂತ ಮೊದಲು ತಿಂದರೆ ದೇಹಕ್ಕೆ ಬಹಳ ಒಳ್ಳೆಯದು ಮತ್ತು ದೇಹದಲ್ಲಿ ಇರುವ ಹಲವು ರೋಗಗಳು ನಿವಾರಣೆ ಆಗುತ್ತದೆ. ಇನ್ನು ಈ ದಾಸವಾಳ ಹೂವು ಅನೇಕ ರೋಗಗಳಿಗೆ ರಾಮಬಾಣವಾದ ಕಾರಣ ಚೀನಾದ ಜನರು ಈ ಹೂವನ್ನ ಉಪ್ಪಿನಕಾಯಿ ಮಾಡಿಕೊಂಡು ಸೇವನೆ ಮಾಡುತ್ತಾರೆ, ಇನ್ನು ದಾಸವಾಳ ಸಸ್ಯದ ಕಾಂಡದಲ್ಲಿ ಇರುವ ನಾರು ಬಟ್ಟೆ, ಬಲೆ ಮತ್ತು ಪೇಪರ್ ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಇನ್ನು ಬಿಳಿ ದಾಸವಾಳ ಎಲ್ಲದಕ್ಕಿಂತ ಹೆಚ್ಚಿನ ಔಷದಿಯ ಗುಣಗಳನ್ನ ಹೊಂದಿದೆ, ಇನ್ನು ಬಿಳಿ ದಾಸವಾಳದ ಹೂವನ್ನ ಒಣಗಿಸಿ ಅದನ್ನ ಪುಡಿ ಮಾಡಿ ಸೇವನೆ ಮಾಡಿದರೆ ಎಲ್ಲಾ ರೀತಿಯ ಕ್ಯಾನ್ಸರ್ ಕಾಯಿಲೆಗಳನ್ನ ನಿವಾರಣೆ ಮಾಡಿಕೊಳ್ಳಬಹುದು, ಸ್ನೇಹಿತರೆ ಈ ದಾಸವಾಳ ಸಸ್ಯದ ಈ ಉಪಯೋಗಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Dasavala flower

Please follow and like us:
error0
http://karnatakatoday.in/wp-content/uploads/2019/10/Dasavala-Flower-1024x576.jpghttp://karnatakatoday.in/wp-content/uploads/2019/10/Dasavala-Flower-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ದಾಸವಾಳ ಅಂದರೆ ನಮಗೆ ನೆನಪಾಗುವುದು ಅದರ ಆಕಾರ ಮತ್ತು ಅದರ ಆಕರ್ಷಕ ಬಣ್ಣ, ಇನ್ನು ದಾಸವಾಳ ಹೂವನ್ನ ನಾವು ಕೆಂಪು, ಹಳದಿ ಮತ್ತು ಇತರೆ ಬಣ್ಣಗಳಲ್ಲಿ ಕಾಣಬಹುದಾಗಿದೆ. ಸ್ನೇಹಿತರೆ ದಾಸವಾಳ ಹೂ ಕೇವಲ ಒಂದು ಸುಂದರ ಹೂವು ಮಾತ್ರವಲ್ಲದೆ ಅದರಲ್ಲಿ ನಮಗೆ ತಿಳಿಯದ ಔಷದಿಯ ಗುಣ ಕೂಡ ಇದೆ, ಇನ್ನು ಅತ್ಯಂತ ವೇಗದಲ್ಲಿ ಬೆಳೆಯುವ ಸಸ್ಯ ಅನ್ನುವ ಹೆಗ್ಗಳಿಕೆಯನ್ನ ಪಡೆದಿರುವ ಈ ಸಸ್ಯ ಬಹುತೇಕ ಎಲ್ಲಾ ದಿನಗಳಲ್ಲಿ...Film | Devotional | Cricket | Health | India