ಸೃಷ್ಟಿ, ಪೋಷಣೆ, ಲಯ, ಇವು ಜಗತ್ತಿನ ಮುಖ್ಯ ಆಧಾರಗಳು. ಜಗತ್ತಿನಲ್ಲಿ ಈ ಎಲ್ಲಾ ಕ್ರಿಯೆಗಳು ನಿರ್ವಿಘ್ನವಾಗಿ ಸಾಗಲು ಪ್ರಮುಖವಾಗಿ ದೈವಿಕ ಶಕ್ತಿಯಲ್ಲಿ ನಂಬಿಕೆ ಮುಖ್ಯ. ಈ ದೈವೀ ಶಕ್ತಿಯೇ ಓಂಕಾರ ಸ್ವರೂಪಿಯಾದ ಆದಿಶಕ್ತಿ ನವರಾತ್ರಿಯ ಮೊದಲ ಮೂರು ದಿನ ದುರ್ಗೆಯನ್ನು ಪೂಜಿಸಲಾಗುತ್ತದೆ. ಅಸುರ ಶಕ್ತಿಯನ್ನು ದಮನಿಸುವ ಜೊತೆಗೆ ನಮ್ಮೊಳಗಿರುವ ಹುದುಗಿರುವ ದುಷ್ಟತೆ, ಕೌರ್ಯಗಳ ಮೇಲೆ ವಿಜಯಿಸುವ ಕಾಲ. ನಂತರದ ಮೂರು ದಿನ ಲಕ್ಷ್ಮಿಯನ್ನು ಆರಾಧಿಸಲಾಗುತ್ತದೆ. ಈಕೆ ಜಗದ ಮಕ್ಕಳಿಗೆ ಸಂಪತ್ತು, ಮಮತೆ, ಸಮೃದ್ದಿ, ಧಾರೆ ಎರೆಯವ ಪ್ರತೀಕವಾಗಿರುತ್ತಾಳೆ.

ಮಹಾನವಮಿಯವರೆಗಿನ ನಂತರದ ಮೂರು ದಿನಗಳಲ್ಲಿ ವಿದ್ಯಾಧಿದೇವತೆ ಸರಸ್ವತಿಯನ್ನು ಪೂಜಿಸಲಾಗುತ್ತದೆ. ಈ ಸಂದರ್ಭದಲ್ಲಿ ತಂದೆತಾಯಿ ಇನ್ನೇನು ಅಕ್ಷರ ಕಲಿಯಲು ಹೊರಟ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನಿರ್ವಿಘ್ನವಾಗಿ ಸಾಗಲು ಸರಸ್ವತಿಯ ಸಾನಿಧ್ಯದಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಾರೆ. ಈ ಬಾರಿಯ ದಸರಾ ಒಳಗೆ ನೀವು ಮನೆಗೆ ಈ ವಸ್ತುಗಳನ್ನು ತಂದಿಟ್ಟರೆ ಇದು ನಿಮ್ಮ ಐಶ್ವರ್ಯ ವೃದ್ಧಿಗೆ ಕಾರಣವಾಗಿ ಭಿಕ್ಷುಕನು ಕೂಡ ಕುಬೇರನಾಗುವ ಯೋಗ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಎಲ್ಲಾದರೂ ದೇವಾಲಯಗಳಿಗೆ ಭೇಟಿ ಕೊಟ್ಟಾಗ ಮುತ್ತಿನಂತೆ ಹೊಳೆಯುತ್ತಿರುವ ಶಂಖವನ್ನು ಮನೆಗೆ ತಂದಿಡಿ. ಅಲ್ಲದೆ ದಕ್ಷಿಣಾಮೂರ್ತಿ ಶಂಖ ಶ್ರೀಮನ್ನಾರಾಯಣನಿಗೆ ಪ್ರಿಯವಾದದ್ದು ಇದನ್ನು ಕೂಡ ಮನೆಯಲ್ಲಿ ಇಡುವುದರಿಂದ ಶ್ರೀಲಕ್ಷ್ಮಿಯ ಕ್ರಪೆ ಸದಾ ನಿಮ್ಮ ಮೇಲಾಗುತ್ತದೆ. ಇನ್ನು ಕವಡೆಗಳನ್ನು ಕೂಡ ಮನೆಯಲ್ಲಿ ಸಂಗ್ರಹಿಸಿಡುವುದು ಉತ್ತಮವಾದದ್ದು ಇವುಗಳು ಸಮುದ್ರ ದಲ್ಲಿ ಶ್ರೀ ಮಹಾಲಕ್ಷ್ಮಿಯೊಂದಿಗೆ ಜನಿಸಿದವು ಮತ್ತು ಹಣವನ್ನು ಆಕರ್ಷಿಸುವ ವಿಶೇಷ ಶಕ್ತಿ ಇವುಗಳಿಗಿವೆ.

ಕುಬೇರನ ಪ್ರತಿಮೆಯನ್ನು ಮನೆಯಲ್ಲಿ ಉತ್ತರ ದಿಕ್ಕಿನಲ್ಲಿಟ್ಟರೆ ಧನಕನವನ್ನು ನೀವು ಗಳಿಸಬಹುದು. ಅಲ್ಲದೆ ಕಮಲದ ಬೀಜಗಳನ್ನು ಕೂಡ ಮನೆಯಲ್ಲಿ ಶೇಖರಿಸಿಟ್ಟರೆ ಇದು ಕೂಡ ಶುಭದಾಯಕ. ಈ ಎಲ್ಲ ವಸ್ತುಗಳನ್ನು ನವರಾತ್ರಿಯ ಒಳಗಡೆ ನಿಮ್ಮ ಮನೆಯಲ್ಲಿಟ್ಟು ಪೂಜಿಸಿದರೆ ಇಂತಹ ಬಡವರು ಕೂಡ ಆ ತಾಯಿ ಲಕ್ಹ್ಮೀಯ ಕ್ರಪೆಗೆ ಪಾತ್ರರಾಗುತ್ತಾರೆ. ಮಾಹಿತಿ ಇಷ್ಟವಾಗಿದ್ರೆ ಇತರರಿಗೂ ತಿಳಿಸಿ ಜಯ ಲಕ್ಷ್ಮಿ ದೇವಿ.

Please follow and like us:
0
http://karnatakatoday.in/wp-content/uploads/2018/10/dasara-1024x576.pnghttp://karnatakatoday.in/wp-content/uploads/2018/10/dasara-150x104.pngKarnataka Today's Newsಅಂಕಣಜ್ಯೋತಿಷ್ಯಬೆಂಗಳೂರುಸೃಷ್ಟಿ, ಪೋಷಣೆ, ಲಯ, ಇವು ಜಗತ್ತಿನ ಮುಖ್ಯ ಆಧಾರಗಳು. ಜಗತ್ತಿನಲ್ಲಿ ಈ ಎಲ್ಲಾ ಕ್ರಿಯೆಗಳು ನಿರ್ವಿಘ್ನವಾಗಿ ಸಾಗಲು ಪ್ರಮುಖವಾಗಿ ದೈವಿಕ ಶಕ್ತಿಯಲ್ಲಿ ನಂಬಿಕೆ ಮುಖ್ಯ. ಈ ದೈವೀ ಶಕ್ತಿಯೇ ಓಂಕಾರ ಸ್ವರೂಪಿಯಾದ ಆದಿಶಕ್ತಿ ನವರಾತ್ರಿಯ ಮೊದಲ ಮೂರು ದಿನ ದುರ್ಗೆಯನ್ನು ಪೂಜಿಸಲಾಗುತ್ತದೆ. ಅಸುರ ಶಕ್ತಿಯನ್ನು ದಮನಿಸುವ ಜೊತೆಗೆ ನಮ್ಮೊಳಗಿರುವ ಹುದುಗಿರುವ ದುಷ್ಟತೆ, ಕೌರ್ಯಗಳ ಮೇಲೆ ವಿಜಯಿಸುವ ಕಾಲ. ನಂತರದ ಮೂರು ದಿನ ಲಕ್ಷ್ಮಿಯನ್ನು ಆರಾಧಿಸಲಾಗುತ್ತದೆ. ಈಕೆ ಜಗದ ಮಕ್ಕಳಿಗೆ...Kannada News