ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಹಣೆಬರಹ ಹೊಳೆಯುತ್ತಿರುವಾಗ, ಮತ್ತು ಆತನ ಒಳ್ಳೆಯ ಸಮಯ ಆರಂಭವಾಗುವ ಮೊದಲು ತಾಯಿ ಲಕ್ಷ್ಮಿ ದೇವಿ ಅವರಿಗೆ ಕೆಲವೊಂದು ಸಂಕೇತಗಳನ್ನು ಕಳುಹಿಸುತ್ತಾಳಂತೆ. ಈ ಕೆಲವು ಸಂದೇಶಗಳು ನಿಮ್ಮ ಅದೃಷ್ಟದ ಸಮಯ ಪ್ರಾರಂಭವಾಗಲಿದೆ ಎಂದು ಸೂಚಿಸುತ್ತದೆ, ಈ ಸಂದೇಶಗಳು ಹಲವಾರು ರೂಪದಲ್ಲಿರುತ್ತದೆ ಮತ್ತು ಇದೊಂದು ಬಹಳ ಹಿಂದಿನಿಂದ ಕೇಳಿಬಂದ ನಂಬಿಕೆ. ಹಾಗಿದ್ದರೆ ಆ ಶುಭ ಮತ್ತು ಅಶುಭ ಸಂಕೇತಗಳ ಬಗ್ಗೆ ತಿಳಿಯೋಣ ಬನ್ನಿ, ಬೆಳಿಗ್ಗೆ ಎದ್ದು ಹೊರನೆಡದಾಗ ಮಹಿಳೆ ಗುಡಿಸುವುದನ್ನು ನೀವು ನೋಡಿದರೆ ನಿಮ್ಮ ಅದೃಷ್ಟವು ಹೊಳೆಯುತ್ತದೆ ಎಂದರ್ಥ. ಬೆಳಿಗ್ಗೆ ಎದ್ದ ಕೂಡಲೇ ನೀವು ತೆಂಗಿನಕಾಯಿಯನ್ನು ನೋಡಿದರೆ ಅದು ಶುಭ ಸಂಕೇತ, ಬೆಳಿಗ್ಗೆ ತೆಂಗಿನಕಾಯಿ ನೋಡುವುದರಿಂದ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಪ್ರಸನ್ನಳಾಗಿದ್ದಾಳೆ ಎನ್ನಲಾಗುತ್ತದೆ.

ಹಾಗೆಯೆ ನೀವು ಬೆಳಿಗ್ಗೆ ಎದ್ದ ಕೂಡಲೇ ಶಂಖದ ಶಬ್ದವನ್ನು ಕೇಳಿದರೆ, ಮಾತಾ ಲಕ್ಷ್ಮಿ ದೇವಿಯು ನಿಮ್ಮ ಬಗ್ಗೆ ಬಹಳ ಬೇಗನೆ ಸಂತಸಗೊಳ್ಳುವ ಸಂಕೇತವಾಗಿದೆ. ಇನ್ನೊಂದು ಸಂಕೇಂತ ಎಂದರೆ ನೀವು ಬೆಳಿಗ್ಗೆ ಕಬ್ಬನ್ನು ನೋಡಿದರೆ ಅದನ್ನು ಶುಭ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ನೀವು ಮಾತಾ ಲಕ್ಷ್ಮಿಯ ಸುತ್ತ ಕಬ್ಬನ್ನು ನೋಡಿರಬೇಕು, ನೀವು ಬೇಗನೆ ಶ್ರೀಮಂತರಾಗಲಿದ್ದೀರಿ ಎಂದು ಇದು ಸೂಚಿಸುತ್ತದೆ. ನೀವು ಇದ್ದಕ್ಕಿದ್ದಂತೆ ಬೆಳಿಗ್ಗೆ ಗೂಬೆಯನ್ನು ನೋಡಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಗೆ ಬರುತ್ತಿದ್ದಾಳೆ ಮತ್ತು ಇದು ನಿಮಗೆ ಶುಭ ಸಂಕೇತವಾಗಿದೆ.

Day starting

ಹಿಂದೂ ಧರ್ಮದ ಪ್ರಕಾರ ಗೋ ಮಾತೆಯನ್ನು ದೇವರ ರೀತಿಯಲ್ಲಿ ಪೂಜಿಸಲಾಗುತ್ತದೆ, ಬೆಳಗಿನ ಜಾವ ನೀವು ಕೆಲಸಕ್ಕೆಂದು ಹೊರಟಾಗ ಗೋಮಾತೆಯ ದರ್ಶನ ಮಾಡುವುದು ಬಹಳ ಒಳ್ಳೆಯದು ಮತ್ತು ಹೀಗೆ ನೋಡಿದರೆ ಹಿಂದೂ ಧರ್ಮದ ಪ್ರಕಾರ ಇದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಬೆಳಿಗ್ಗೆ ಹಸುವಿನ ದರ್ಶನ ಮಾಡುವುದು 33 ಕೋಟಿ ದೇವರು ಮತ್ತು ದೇವತೆಗಳ ದೃಷ್ಟಿಗೆ ಸಮಾನವಾಗಿರುತ್ತದೆ ಎಂದು ಹೇಳಲಾಗಿದೆ. ಇನ್ನು ಧರ್ಮಗ್ರಂಥಗಳು ಮತ್ತು ಋಷಿ ಮುನಿಗಳ ಪ್ರಕಾರ ದೈವಿಕ ಶಕ್ತಿಗಳು ನಮ್ಮ ಅಂಗೈಯಲ್ಲಿ ವಾಸಿಸುತ್ತವೆ ಎಂದು ನಂಬಲಾಗಿದೆ ಆದ್ದರಿಂದ ಬೆಳಿಗ್ಗೆ ಕೈಗಳನ್ನು ನೋಡುವುದು ಶುಭ. ಸಗಣಿ, ಚಿನ್ನ, ತಾಮ್ರ, ಹಸಿರು ಹುಲ್ಲುಗಳನ್ನು ನೋಡುವುದನ್ನು ಸಹ ಶುಭವೆಂದು ಪರಿಗಣಿಸಲಾಗುತ್ತದೆ.

ಇನ್ನು ಅಶುಭ ಅಥವಾ ಕೆಟ್ಟ ಸಂಕೇತಗಳು ಎಂದರೆ ಅನೇಕ ಜನರು ಬೆಳಿಗ್ಗೆ ಎದ್ದ ಕೂಡಲೇ ಕನ್ನಡಿಯನ್ನು ನೋಡುವ ಅಭ್ಯಾಸವನ್ನು ಹೊಂದಿದ್ದಾರೆ ಇದು ವಾಸ್ತು ಶಾಸ್ತ್ರದ ಪ್ರಕಾರ ಶುಭವಲ್ಲ ಮತ್ತು ಇದನ್ನು ಮಾಡುವುದರಿಂದ ದಿನವಿಡೀ ನಕಾರಾತ್ಮಕ ಶಕ್ತಿಯು ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ಕೆಲವರು ಎಣ್ಣೆ ಪಾತ್ರೆ ಅಥವಾ ಸೂಜಿ ದಾರ ಇತ್ಯಾದಿಗಳನ್ನು ಬೆಳಿಗ್ಗೆ ನೋಡುವುದು ಶುಭವಲ್ಲ ಎಂದು ಹೇಳುತ್ತಾರೆ. ಬೆಳಿಗ್ಗೆ ಎದ್ದು ಜನರೊಂದಿಗೆ ಕಠಿಣ ಭಾಷೆಯಲ್ಲಿ ಮಾತನಾಡಬೇಡಿ ಮತ್ತು ಒಳ್ಳೆಯ ಪದಗಳನ್ನು ಬಳಸಿ. ಇವಿಷ್ಟು ಉತ್ತಮ ದಿನವನ್ನು ಆರಂಭಿಸಲು ಶುಭ ಹಾಗು ಅಶುಭ ಚಿಹ್ನೆಗಳ ಒಂದು ಮಾಹಿತಿಯಾಗಿದೆ, ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ಅನುಭವಕೆ ಬಂದಿದ್ದರೆ ನಿಮ್ಮ ಅನುಭವ ತಿಳಿಸಿ.

Day starting

 

 

Please follow and like us:
error0
http://karnatakatoday.in/wp-content/uploads/2020/01/morning-habits-1024x576.jpghttp://karnatakatoday.in/wp-content/uploads/2020/01/morning-habits-150x104.jpgKarnataka Trendingಎಲ್ಲಾ ಸುದ್ದಿಗಳುಜ್ಯೋತಿಷ್ಯಮಂಗಳೂರುಸುದ್ದಿಜಾಲಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಹಣೆಬರಹ ಹೊಳೆಯುತ್ತಿರುವಾಗ, ಮತ್ತು ಆತನ ಒಳ್ಳೆಯ ಸಮಯ ಆರಂಭವಾಗುವ ಮೊದಲು ತಾಯಿ ಲಕ್ಷ್ಮಿ ದೇವಿ ಅವರಿಗೆ ಕೆಲವೊಂದು ಸಂಕೇತಗಳನ್ನು ಕಳುಹಿಸುತ್ತಾಳಂತೆ. ಈ ಕೆಲವು ಸಂದೇಶಗಳು ನಿಮ್ಮ ಅದೃಷ್ಟದ ಸಮಯ ಪ್ರಾರಂಭವಾಗಲಿದೆ ಎಂದು ಸೂಚಿಸುತ್ತದೆ, ಈ ಸಂದೇಶಗಳು ಹಲವಾರು ರೂಪದಲ್ಲಿರುತ್ತದೆ ಮತ್ತು ಇದೊಂದು ಬಹಳ ಹಿಂದಿನಿಂದ ಕೇಳಿಬಂದ ನಂಬಿಕೆ. ಹಾಗಿದ್ದರೆ ಆ ಶುಭ ಮತ್ತು ಅಶುಭ ಸಂಕೇತಗಳ ಬಗ್ಗೆ ತಿಳಿಯೋಣ ಬನ್ನಿ, ಬೆಳಿಗ್ಗೆ ಎದ್ದು ಹೊರನೆಡದಾಗ...Film | Devotional | Cricket | Health | India