Death News of Ambarish

ನಿನ್ನೆ ಶನಿವಾರ ಬಹುಷ್ಯ ಇಡೀ ರಾಜ್ಯಕ್ಕೆ ಕರಾಳ ಶನಿವಾರವಾಗಿದೆ ಯಾಕೆ ಅಂದರೆ ನಿನ್ನೆ ಮಂಡ್ಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದ ಸುದ್ದಿ ಒಂದು ಕಡೆಯಾದರೆ ಮತ್ತೊಂದು ಕಡೆ ಇಡೀ ಕನ್ನಡ ಬೆಚ್ಚಿ ಬೀಳುವ ಅಂಬಿ ಸಾವಿನ ಸುದ್ದಿ, ಒಟ್ಟಾರೆಯಾಗಿ ಶನಿವಾರ ಇಡೀ ಕರ್ನಾಟಕಕ್ಕೆ ಸೂತಕದ ಛಾಯೆ ಆವರಿಸಿದೆ.

ಇನ್ನು ನಟ ಅಂಬರೀಷ್ ಸಾವಿನ ಸುದ್ದಿ ಇಡೀ ಕನ್ನಡ ಚಿತ್ರರಂಗಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದೆ, ಅಂಬಿ ಸಾವಿನ ಸುದ್ದಿಯನ್ನ ಕೇಳಿ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.

ಇನ್ನು ಅಂಬರೀಷ್ ಅವರ ದಿಡೀರ್ ಸಾವಿಗೆ ಕಾರಣಗಳು ಏನು ಎಂದು ನೋಡುವುದಾದರೆ, ಮೊದಲಿಗೆ ಕಾಣಿಸುವುದು ಅವರ ಆರೋಗ್ಯ ಸಮಸ್ಯೆ, ಇತ್ತೀಚಿಗೆ ಸುಮಾರು ವರ್ಷಗಳಿಂದ ಅಂಬಿಯವರು ಕಿಡ್ನಿ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.

Death News of Ambarish

ಇನ್ನು ಈ ಕಾಯಿಲೆಗೆ ಇನ್ನು ಮುಖ್ಯವಾದ ಕಾರಣ ಅವರ ಮದ್ಯಪಾನ ಮತ್ತು ಧೂಮಪಾನ, ಮೊದಲಿಗೆ ಅಂಬಿ ಸಿಗರೇಟ್ ಸೇದುವುದು ಜಾಸ್ತಿಯೇ ಇತ್ತು ಆದರೆ ಆರೋಗ್ಯ ಹದಗೆಟ್ಟ ಮೇಲೆ ಹೆಂಡತಿ ಸುಮಲತಾ ಅವರ ಒತ್ತಾಯದ ಮೇಲೆ ಮದ್ಯಪಾನ ಮತ್ತು ಧೂಮಪಾನವನ್ನ ತ್ಯಜಿಸಿದರು.

ಇನ್ನು ಮದ್ಯಪಾನ ಮತ್ತು ಧೂಮಪಾನ ತ್ಯಜಿಸಿದ ಮೇಲು ಅಂಬಿ ಆರೋಗ್ಯ ಸ್ಥಿತಿ ಸುಧಾರಿಸದೆ ಎರಡು ವರ್ಷಗಳ ಹಿಂದೆ ಅವರ ಸ್ಥಿತಿ ಚಿಂತಾದನಕವಾಗಿ ವಿದೇಶದಲ್ಲಿ ಚಿಕಿತ್ಸೆಯನ್ನ ಪಡೆದು ಸಾವನ್ನ ಗೆದ್ದು ಬಂದಿದ್ದರು.

ಇನ್ನು ವಿದೇಶದಿಂದ ಬಂದ ತಕ್ಷಣ ಯಾವುದೇ ಸಮಸ್ಯೆ ಇಲ್ಲದೆ ಆರಾಮಾಗಿದ್ದರು, ಇನ್ನು ಇತ್ತೀಚಿಗೆ ಸುದೀಪ್ ಜೊತೆ ಸೇರಿಕೊಂಡು ಅಂಬಿ ನಿನಗೆ ವಯಸ್ಸಾಯಿತೋ ಚಿತ್ರದಲ್ಲಿ ಅದ್ಭುತವಾಗಿ ನಟನೆಯನ್ನ ಮಾಡಿದ್ದರು ಅಂಬಿ ಅವರು.

Death News of Ambarish

ಇನ್ನೇ ರಾತ್ರಿ ಇದ್ದಕ್ಕಿದ್ದ ಹಾಗೆ ಉಸಿರಾಟದ ಸಮಸ್ಯೆ ಎದುರಾಗಿ ಆಸ್ಪತ್ರೆ ಸೇರಿದರು, ಆಸ್ಪತ್ರೆ ಸೇರಿದ ಅರ್ಧ ಗಂಟೆಯಲ್ಲಿ ಅಂಬರೀಷ್ ಅವರು ಇಹಲೋಕವನ್ನ ತ್ಯಜಿಸಿದ್ದರು.

ಹೀಗೆ ಇದ್ದಕ್ಕಿದ್ದ ಹಾಗೆ ಆರೋಗ್ಯದಲ್ಲಿ ಏರುಪೇರು ಆಗಲು ಕಾರಣ ಏನು ಅಂದರೆ ನಿನ್ನೆ ಮಂಡ್ಯದಲ್ಲಿ ನಡೆದ ರಸ್ತೆ ಅಪಘಾತ, ಅಪಘಾತದಲ್ಲಿ 30 ಕ್ಕೂ ಹೆಚ್ಚು ಜನ ಸತ್ತಿದ್ದರು ಎಂಬ ಸುದ್ದಿಯನ್ನ ಕೇಳಿ ಅಂಬಿ ತುಂಬಾ ಭಾವುಕರಾಗಿದ್ದರು, ಈ ಸುದ್ದಿ ಅವರ ಮನಸ್ಸಿಗೆ ತುಂಬಾ ನೋವನ್ನ ಉಂಟು ಮಾಡಿತ್ತು ಎನ್ನುತ್ತಾರೆ ಆಪ್ತರು.

ಮದ್ಯಾಹ್ನ ಅಪಘಾತದ ಸುದ್ದಿ ಕೇಳಿದ ತಕ್ಷಣ ಅದೇ ಚಿಂತೆಯಲ್ಲಿ ಇದ್ದರು ಅಂಬರೀಷ್ ಅವರು, ಮದ್ಯಾಹ್ನ ಸರಿಯಾಗಿ ಊಟ ಕೂಡ ಸೇವಿಸಿರಲಿಲ್ಲ ಎಂದು ಮನೆಯ ಆಪ್ತರು ಹೇಳಿದ್ದಾರೆ, ತನ್ನ ಸ್ವಂತ ಮನೆಯವರನ್ನ ಕಳೆದುಕೊಂಡಷ್ಟು ನೋವು ಅಂಬರೀಷ್ ಅವರಿಗೆ ಆಗಿತ್ತು.

Death News of Ambarish

ಮೇಲುನೋಟಕ್ಕೆ ಆರೋಗ್ಯ ಸಮಸ್ಯೆ ಒಂದೇ ಅವರ ಸಾವಿಗೆ ಕಾರಣವಾದರು ಅದರ ಹಿಂದೆ ಮಂಡ್ಯ ಅಪಘಾತದ ಸುದ್ದಿಯಿಂದಾದ ನೋವು ಕೂಡ ಒಂದು ಕಾರಣ ಎಂದು ಹೇಳಬಹುದು. ಏನೇ ಆದರೂ ಇಡೀ ಕರ್ನಾಟಕಕ್ಕೆ ಅವರ ಸಾವು ಅರಗಿಸಿಕೊಳ್ಳಲಾಗದ ತುತ್ತಾಗಿರವುದು ನಿಜ, ಅಂಬಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲ ಆಶಿಸೋಣ.

Please follow and like us:
0
http://karnatakatoday.in/wp-content/uploads/2018/11/news-of-ambi-1024x576.jpghttp://karnatakatoday.in/wp-content/uploads/2018/11/news-of-ambi-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲನಿನ್ನೆ ಶನಿವಾರ ಬಹುಷ್ಯ ಇಡೀ ರಾಜ್ಯಕ್ಕೆ ಕರಾಳ ಶನಿವಾರವಾಗಿದೆ ಯಾಕೆ ಅಂದರೆ ನಿನ್ನೆ ಮಂಡ್ಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದ ಸುದ್ದಿ ಒಂದು ಕಡೆಯಾದರೆ ಮತ್ತೊಂದು ಕಡೆ ಇಡೀ ಕನ್ನಡ ಬೆಚ್ಚಿ ಬೀಳುವ ಅಂಬಿ ಸಾವಿನ ಸುದ್ದಿ, ಒಟ್ಟಾರೆಯಾಗಿ ಶನಿವಾರ ಇಡೀ ಕರ್ನಾಟಕಕ್ಕೆ ಸೂತಕದ ಛಾಯೆ ಆವರಿಸಿದೆ. ಇನ್ನು ನಟ ಅಂಬರೀಷ್ ಸಾವಿನ ಸುದ್ದಿ ಇಡೀ ಕನ್ನಡ ಚಿತ್ರರಂಗಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದೆ, ಅಂಬಿ ಸಾವಿನ ಸುದ್ದಿಯನ್ನ ಕೇಳಿ ಗಣ್ಯಾತಿಗಣ್ಯರು ಕಂಬನಿ...Kannada News