ದೀಪಾವಳಿ ಎಂದರೆ ಹಣತೆಗಳ ಸಾಲು, ದೀಪಗಳ ಜಗಮಗ, ಪಟಾಕಿಗಳು ಸೃಷ್ಟಿಸುವ ನಕ್ಷತ್ರಲೋಕ. ಬದುಕಿನ ಒಳಗೂ ಹೊರಗೂ ಬಣ್ಣದ ಬೆಳಕು ಹರಿಸಿ ಸಂತೋಷ, ಆತ್ಮವಿಶ್ವಾಸ ಹೆಚ್ಚಿಸುವ, ಹೊಸತನದೆಡೆಗೆ ತುಡಿಯುವಂತೆ ಮಾಡುವ ಹಬ್ಬ. ಬೆಳಕು ಬರೀ ಕಣ್ಣಿಗಲ್ಲ, ಮುಚ್ಚಿದ ಮನದ ಬಾಗಿಲೊಳಗೂ ಬೆಳಕಿನ ಕಿರಣಗಳು ಸೋಕುತ್ತವೆ. ಹೊಸ ಬೆಳಕು ಚೆಲ್ಲಿ, ಹಳೆ ನೋವು ಸಂಕಟಗಳನ್ನು ಕಿತ್ತುಹಾಕಿ ಸಂಭ್ರಮಕ್ಕೆ ಅಣಿ ಮಾಡುತ್ತವೆ. ಬೆಳಗುವ ಪ್ರತಿ ದೀಪದಲ್ಲಿ, ಸಿಡಿಯುವ ನಕ್ಷತ್ರಗಳಲ್ಲಿ ಸಡಗರ ಕೇಕೆ ಹೊಡೆಯುತ್ತದೆ. ದುಷ್ಟ ಶಕ್ತಿಗಳು ನಾಶವಾಗಿ ಧಾರೆಯಲ್ಲಿ ಶಾಂತಿ ನೆಲೆಸಿದ ಸಂಭ್ರಮದ ಆಚರಣೆ ಇದು. ದೀಪಾವಳಿ ನಿಜಾರ್ಥದಲ್ಲಿ ಕುಟುಂಬದ ಹಬ್ಬ. ಪುಟ್ಟ ಮಗುವಿನಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರನ್ನೂ ಎದ್ದು ನಿಲ್ಲಿಸುವಂತೆ ಮಾಡುವ ಚೆಲುವು ಇಲ್ಲಿದೆ. ಸಂಬಂಧಗಳು ದೂರವಾಗುತ್ತಿರುವ ಈ ಕಾಲದಲ್ಲೂ ಕುಟುಂಬದ ಎಲ್ಲರೂ ಜತೆ ಸೇರಲು, ಖುಷಿಪಡಲು, ಜತೆಯಾಗಿ ಊಟ ಸವಿಯಲು, ಕುಣಿದಾಡಲು ವೇದಿಕೆ ಕೊಡುವುದು ದೀಪಾವಳಿ.

ಇನ್ನು ಈ ದೀಪಾವಳಿಯ ಶುಭ ದಿನದಂದು ಈ ರಾಶಿಗಳಿಗೆ ಕುಬೇರದೇವನ ಮಹಾ ಕ್ರಪೆ ಆರಂಭವಾಗಿದ್ದು ಶೀಘ್ರದಲ್ಲೇ ಹಣದ ಹೊಳೆ ಇವರಿಗೆ ಹರಿಯಲಿದೆ. ಈ ದೀಪಾವಳಿಯಂದು ಆ ಭಾಗ್ಯಗಳನ್ನು ಹೊಂದಿರುವ ರಾಶಿಗಳು ಯಾವುವು ಎಂದು ತಿಳಿಯೋಣ ಬನ್ನಿ. ಮೊದಲೆನೆಯದಾಗಿ ಮಿಥುನದವರಿಗೆ ಹಣಕಾಸಿನ ವಿಷಯದಲ್ಲಿ ಎಲ್ಲಾ ಕಡೆಯಿಂದಲೂ ಸಕಾರಾತ್ಮಕ ಚಿಂತನೆ ಮೂಡಿಬರುವುದು.

ದೊಡ್ಡ ಪ್ರಮಾಣದ ಉಳಿತಾಯ ಯೋಜನೆ ಇದ್ದಲ್ಲಿ ಎಲ್ಲಾ ಸಾಧಕ ಬಾಧಕಗಳ ಬಗ್ಗೆ ಯೋಚನೆ ಮಾಡಿ ಕಾರ್ಯಪ್ರವೃತ್ತರಾಗಿ. ಕುಂಭ ರಾಶಿಗೆ ವಿದ್ಯೆಯ ಸಂಪತ್ತನ್ನು ಹೊಂದಿರುವ ನಿಮ್ಮನ್ನು ಕಂಡರೆ ಕೆಲವರಿಗೆ ಗೌರವ, ಕೆಲವರಿಗೆ ಅಸೂಯೆ. ಈ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ. ಭಗವಂತ ನಿಮ್ಮ ಸಹಾಯಕ್ಕೆ ಬಂದು ನಿಲ್ಲುವನು.

ಇದರಂತೆ ಸಿಂಹ ರಾಶಿಯವರ ಆರ್ಥಿಕ ಸ್ಥಿತಿ ಕೂಡ ಉತ್ತಮ ಗತಿಯತ್ತ ಸಾಗಲಿದೆ. ಮಾಡಿದ ಕೆಲಸಗಳು ಲಾಭ ತರಲಿದೆ. ಕನ್ಯಾ ರಾಶಿಗೆ ಅನೇಕ ದಿನಗಳ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ಮಹತ್ತರ ತಿರುವು ಕಂಡುಬರುವುದು. ಮುಂದಿನ ದಿನಗಳಲ್ಲಿ ಬೃಹತ್‌ ಪ್ರಮಾಣದ ಕಾರ್ಯ ಯೋಜನೆಗೆ ಚಾಲನೆ ಸಿಗುವುದು ಮತ್ತು ಗೌರವ ಸ್ಥಾನ ಹೊಂದುವಿರಿ.

Please follow and like us:
0
http://karnatakatoday.in/wp-content/uploads/2018/11/kubera-diwali-1024x576.jpghttp://karnatakatoday.in/wp-content/uploads/2018/11/kubera-diwali-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುದೀಪಾವಳಿ ಎಂದರೆ ಹಣತೆಗಳ ಸಾಲು, ದೀಪಗಳ ಜಗಮಗ, ಪಟಾಕಿಗಳು ಸೃಷ್ಟಿಸುವ ನಕ್ಷತ್ರಲೋಕ. ಬದುಕಿನ ಒಳಗೂ ಹೊರಗೂ ಬಣ್ಣದ ಬೆಳಕು ಹರಿಸಿ ಸಂತೋಷ, ಆತ್ಮವಿಶ್ವಾಸ ಹೆಚ್ಚಿಸುವ, ಹೊಸತನದೆಡೆಗೆ ತುಡಿಯುವಂತೆ ಮಾಡುವ ಹಬ್ಬ. ಬೆಳಕು ಬರೀ ಕಣ್ಣಿಗಲ್ಲ, ಮುಚ್ಚಿದ ಮನದ ಬಾಗಿಲೊಳಗೂ ಬೆಳಕಿನ ಕಿರಣಗಳು ಸೋಕುತ್ತವೆ. ಹೊಸ ಬೆಳಕು ಚೆಲ್ಲಿ, ಹಳೆ ನೋವು ಸಂಕಟಗಳನ್ನು ಕಿತ್ತುಹಾಕಿ ಸಂಭ್ರಮಕ್ಕೆ ಅಣಿ ಮಾಡುತ್ತವೆ. ಬೆಳಗುವ ಪ್ರತಿ ದೀಪದಲ್ಲಿ, ಸಿಡಿಯುವ ನಕ್ಷತ್ರಗಳಲ್ಲಿ ಸಡಗರ ಕೇಕೆ ಹೊಡೆಯುತ್ತದೆ....Kannada News