News of Dhoni

ಭಾರತದ ತಂಡ ಹಿಂದೆಂದೂ ಕಂಡಿರದ ಯಶಸ್ವಿ ನಾಯಕ ಕ್ರಿಕೆಟಿಗ ಧೋನಿ ಸದ್ಯಕ್ಕೆ ವಿಶ್ವಕಪ್ ನಲ್ಲಿ ಉತ್ತಮ ನಿರ್ವಹಣೆ ತೋರುತ್ತಿದ್ದಾರೆ, ಆದರೆ ಅಭಿಮಾನಿಗಳ ಪಾಲಿಗೆ ಈ ವಿಶ್ವಕಪ್ ಸ್ವಲ್ಪ ಕಹಿಯೇ ಆಗಿರಲಿದೆ, ನಿಮಗೆಲ್ಲ ಗೊತ್ತಿರುವಂತೆ ಧೋನಿ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳುವ ಸನಿಹದಲ್ಲಿದ್ದಾರೆ. ಎಲ್ಲ ಮಾದರಿಯ ಐಸಿಸಿ ಟೂರ್ನಿಯಲ್ಲೂ ಭಾರತಕ್ಕೆ ವಿಜಯದ ಮಾಲೆ ಹಾಕಿಕೊಟ್ಟ ಕೀರ್ತಿ ಧೋನಿಗೆ ಸಲ್ಲುತ್ತದೆ.

ಸದ್ಯಕ್ಕೆ ಹಲವಾರು ಮಂದಿ ಧೋನಿ ಆಟದ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ, ಆದರೆ ಧೋನಿ ಮಾತ್ರ ಇದಾವುದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಪ್ರಸ್ತುತ ನಿವೃತ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತ: ಧೋನಿ ಅವರೇ ಉತ್ತರ ನೀಡಿದ್ದಾರೆ. ನಾನು ಯಾವಾಗ ನಿವೃತ್ತಿ ಮಾಡಲಿದ್ದೇನೆಂಬುದು ನನಗೆ ಗೊತ್ತಿಲ್ಲ,ಆದರೆ ಅನೇಕ ಮಂದಿ ಶ್ರೀಲಂಕಾ ಪಂದ್ಯಕ್ಕಿಂತಲೂ ಮುಂಚಿತವಾಗಿಯೇ ನಿವೃತ್ತಿ ಸಲ್ಲಿಸಲು ಬಯಸುತ್ತಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

News of Dhoni

ಧೋನಿ ಬದ್ದತೆಯ ಬಗ್ಗೆ ಮಾಜಿ ಕ್ರಿಕೆಟ್ ಐಕಾನ್‌ಗಳಾದ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಬೊಟ್ಟು ಮಾಡಿದ್ದರು, ಇವೆಲ್ಲವೂ ಭಾರಿ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿತ್ತು, ಇದೆಲ್ಲ ಬದಿಗಿಡಿ ಸದ್ಯಕ್ಕೆ ಧೋನಿ ಬಗ್ಗೆ ಭರ್ಜರಿ ಸುದ್ದಿಯೊಂದು ಹರಿಯುತ್ತಿದೆ, ಈ ಸುದ್ದಿ ಕೇಳಿದರೆ ಕ್ರಿಕೆಟ್ ಫ್ಯಾನ್ಸ್ ಮತ್ತಷ್ಟು ಪುಳಕಿತರಾಗಲಿದ್ದಾರೆ.

ಹೌದು ಸದ್ಯಕ್ಕೆ ಧೋನಿ ಅವರ ಮೇಲೆ ರಾಷ್ಟ್ರ ನಾಯಕರ ಕಣ್ಣು ಬಿದ್ದಿದೆ, ಧೋನಿ ತವರೂರು ಜಾರ್ಖಂಡ್ ನಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದ ಬಿಜೆಪಿ ಧೋನಿಗೆ ಮಣೆ ಹಾಕುವ ಎಲ್ಲ ಲೆಕ್ಕಾಚಾರ ಇಟ್ಟುಕೊಂಡಿದೆ. ಧೋನಿ ಅವರು ಪಕ್ಷದ ಗೆಲುವಿನ ಟಿಕೆಟ್ ಆಗಿರಬಹುದು ಮತ್ತು ಅವರ ಜನಪ್ರಿಯತೆಯು ರಾಜಕೀಯ ಪ್ರತಿಸ್ಪರ್ಧಿಗಳಾದ ಜೆಎಂಎಂ, ಆರ್ಜೆಡಿ ಮತ್ತು ಕಾಂಗ್ರೆಸ್ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ ಎಂದು ಬಿಜೆಪಿ ನಂಬಿದೆ.

ಧೋನಿ ಪಕ್ಷಕ್ಕೆ ಸೇರದಿದ್ದರೂ, ಬಿಜೆಪಿ ನಾಯಕರು ಅವರು ತಮ್ಮ ಪರವಾಗಿ ಪ್ರಚಾರ ಮಾಡಬೇಕೆಂದು ಕೇಂದ್ರದ ನಾಯಕರು ಬಯಸಿದ್ದರೆ ಎನ್ನಲಾಗಿದೆ, ವಿಶ್ವಕಪ್ ನಂತರ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಬಹುದು ಎಂದು ವರದಿಗಳು ಸೂಚಿಸಿರುವುದರಿಂದ ಬಿಜೆಪಿಯ ಉನ್ನತ ನಾಯಕರು ಧೋನಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೇ ಎನ್ನಲಾಗುತ್ತಿದೆ.

News of Dhoni

ಬಿಜೆಪಿಯ ಹಿರಿಯ ಮುಖಂಡರೊಬ್ಬರು ಈ ವರದಿಗಾರರೊಂದಿಗೆ ಮಾತನಾಡುತ್ತಾ, ಧೋನಿ ಅವರು ರಾಜಕೀಯಕ್ಕೆ ಸೇರುವ ಒಲವನ್ನು ತೋರಿಸಿದ್ದಾರೆ, “ನಾವು ಮಾಜಿ ನಾಯಕನೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದೇವೆ, ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ನಂತರ ಅವರು ಬಿಜೆಪಿಗೆ ಸೇರಲಿದ್ದಾರೆ, ಸೇರುವ ದಿನಾಂಕವನ್ನು ಧೋನಿ ನಿರ್ಧರಿಸುತ್ತಾರೆ, ”ಎಂದು ಅವರು ಹೇಳಿದರು, ಆದರೆ ಈ ಹಿಂದೆ ಧೋನಿ ಕ್ರಿಕೆಟ್ ಬಿಟ್ಟ ಬಳಿಕ ಸಂಪೂರ್ಣವಾಗಿ ಸೈನ್ಯ ಸೇರುತ್ತೇನೆ ಎಂದು ಕೂಡ ಹೇಳಿಕೊಂಡಿದ್ದಾರೆ.

ಕಳೆದ ವರ್ಷ ಆಗಸ್ಟ್ 5 ರಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸರೋಜ್ ಪಾಂಡೆ, ದೆಹಲಿ ರಾಜ್ಯ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಅವರು ಧೋನಿ ಅವರನ್ನು ತಮ್ಮ ನಿವಾಸದಲ್ಲಿ “ಸಂಪಾರ್ಕ್ ಫಾರ್ ಸಮರ್ಥನ್” ಕಾರ್ಯಕ್ರಮದ ಅಂಗವಾಗಿ ಭೇಟಿಯಾಗಿದ್ದರು.

News of Dhoni

Please follow and like us:
0
http://karnatakatoday.in/wp-content/uploads/2019/07/dhoni-to-bjp-soon-1024x576.jpghttp://karnatakatoday.in/wp-content/uploads/2019/07/dhoni-to-bjp-soon-150x104.jpgKarnataka Today's Newsಆಟೋಎಲ್ಲಾ ಸುದ್ದಿಗಳುಕ್ರಿಕೆಟ್ಸುದ್ದಿಜಾಲಭಾರತದ ತಂಡ ಹಿಂದೆಂದೂ ಕಂಡಿರದ ಯಶಸ್ವಿ ನಾಯಕ ಕ್ರಿಕೆಟಿಗ ಧೋನಿ ಸದ್ಯಕ್ಕೆ ವಿಶ್ವಕಪ್ ನಲ್ಲಿ ಉತ್ತಮ ನಿರ್ವಹಣೆ ತೋರುತ್ತಿದ್ದಾರೆ, ಆದರೆ ಅಭಿಮಾನಿಗಳ ಪಾಲಿಗೆ ಈ ವಿಶ್ವಕಪ್ ಸ್ವಲ್ಪ ಕಹಿಯೇ ಆಗಿರಲಿದೆ, ನಿಮಗೆಲ್ಲ ಗೊತ್ತಿರುವಂತೆ ಧೋನಿ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳುವ ಸನಿಹದಲ್ಲಿದ್ದಾರೆ. ಎಲ್ಲ ಮಾದರಿಯ ಐಸಿಸಿ ಟೂರ್ನಿಯಲ್ಲೂ ಭಾರತಕ್ಕೆ ವಿಜಯದ ಮಾಲೆ ಹಾಕಿಕೊಟ್ಟ ಕೀರ್ತಿ ಧೋನಿಗೆ ಸಲ್ಲುತ್ತದೆ. ಸದ್ಯಕ್ಕೆ ಹಲವಾರು ಮಂದಿ ಧೋನಿ ಆಟದ ಬಗ್ಗೆ ಟೀಕೆ ಟಿಪ್ಪಣಿ...Kannada News