ದ್ರುವ ಸರ್ಜಾ ಹಾಗು ಪ್ರೇರಣಾ ಮದುವೆ ಬೆಂಗಳೂರಿನ ಜೆಪಿ ನಗರದ ಬೃಂಧಾವನ ಕಾನ್ವೆಂಷನ್ ಹಾಲ್ ನಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು, ಇನ್ನು ದ್ರುವ ಸರ್ಜಾ ಅವರ ಮದುವೆಗೆ ಚಿತ್ರರಂಗದ ಪ್ರಮುಖ ಗಣ್ಯರು ಮತ್ತು ಸೆಲೆಬ್ರಿಟಿಗಳು ಕೂಡ ಬಂದಿದ್ದರು. ಇನ್ನು ಬಂದ ಸೆಲೆಬ್ರಿಟಿಗಳು ಮತ್ತು ಗಣ್ಯರು ವಧು ವರರಿಗೆ ಆಶೀರ್ವಾದವಾನ್ನ ಮಾಡಿ ಉಡುಗೊರೆಗಳನ್ನ ನೀಡಿ ಹಾರೈಸಿದ್ದಾರೆ, ಇನ್ನು ತಮ್ಮ ಅಭಿಮಾನಿಗಳನ್ನೇ VIP ಎಂದು ಪರಿಗಣಿಸಿರುವ ದ್ರುವ ಸರ್ಜಾ ಅವರು ಅಭಿಮಾನಿಗಳಿಗಾಗಿ ಒಂದು ದಿನವನ್ನ ಮೀಸಲು ಇಟ್ಟಿದ್ದರು. ಇನ್ನು ಈಗ ಎಲ್ಲರಲ್ಲೂ ಕಾಡುತ್ತಿರುವ ಒಂದು ಪ್ರಶ್ನೆ ಅಂದರೆ ದ್ರುವ ಸರ್ಜಾ ಅವರ ಮದುವೆಗೆ ಡಿ ಬಾಸ್ ದರ್ಶನ್ ಯಾಕೆ ಬರಲಿಲ್ಲ ಅನ್ನುವುದು, ಹಾಗಾದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮದುವೆಗೆ ಬರದೇ ಇರಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ದ್ರುವ ಸರ್ಜಾ ಅವರ ಮದುವೆಗೆ ದೊಡ್ಡ ದೊಡ್ಡ ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್, ಕಿಚ್ಚ ಸುದೀಪ್, ಯಶ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸೆಲೆಬ್ರಿಟಿಗಳು ಮದುವೆಗೆ ಬಂದಿದ್ದರು. ದ್ರುವ ಸರ್ಜಾ ಮತ್ತು ಸರ್ಜಾ ಕುಟುಂಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತೀರಾ ಆತ್ಮೀಯರು, ದ್ರುವ ಸರ್ಜಾ ಅವರ ನಿಶ್ಚಿತಾರ್ಥಕ್ಕೆ ದರ್ಶನ್ ಅವರು ಬಂದಿದ್ದರು ಅವರಿಗೆ ಉಡುಗೊರೆಯನ್ನ ಕೂಡ ನೀಡಿದ್ದರು, ಆದರೆ ಮದುವೆಗೆ ದರ್ಶನ್ ಅವರು ಬರಲಿಲ್ಲ. ಇನ್ನು ದರ್ಶನ್ ಅವರು ಯಾಕೆ ಮದುವೆಗೆ ಬರಲಿಲ್ಲ ಅನ್ನುವ ಪ್ರಶ್ನೆಗೆ ಈಗ ತೆರೆಬಿದ್ದಿದೆ ಮತ್ತು ದರ್ಶನ್ ಅವರು ಮದುವೆಗೆ ಬರದೇ ಇರುವುದಕ್ಕೆ ಇದ್ದ ಬಲವಾದ ಕಾರಣ ಕೇಳಿ ಅವರ ಮೇಲೆ ಇದ್ದ ಗೌರವ ಇನ್ನಷ್ಟು ಜಾಸ್ತಿ ಆಗಿದೆ.

dhruva sarja marriage

ಹೌದು ದರ್ಶನ್ ಅಭಿನಯದ ಮುಂದಿನ ಚಿತ್ರವಾದ ಒಡೆಯ ಚಿತ್ರದ ಟ್ರೈಲರ್ ಮುಂದಿನ ತಿಂಗಳು ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆಯನ್ನ ಮಾಡಿಕೊಂಡಿದೆ ಮತ್ತು ಅಷ್ಟೇ ಅಲ್ಲದೆ ಡಿಸೆಂಬರ್ 12 ನೇ ತಾರೀಕು ಓಎದೆಯ ಚಿತ್ರ ದೇಶಾದ್ಯಂತ ಬಿಡುಗಡೆ ಕೂಡ ಆಗಲಿದೆ. ಒಡೆಯ ಚಿತ್ರದ ಟ್ರೈಲರ್ ಹಾಗು ಸಿನಿಮಾ ಡೇಟ್ ಫಿಕ್ಸ್ ಮಾಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬರಲೇಬೇಕು ಎಂದು ಕೇಳಿಕೊಂಡಿದ್ದರು, ಇನ್ನು ಕರ್ತವ್ಯವೇ ದೇವರು ಎಂದು ನಂಬಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮದುವೆಗೆ ಹೋಗುವ ಬದಲು ಅಲ್ಲಿಗೆ ಹೋಗಿದ್ದರು ಎಂದು ತಿಳಿದು ಬಂದಿದೆ.

ಇನ್ನು ದ್ರುವ ಸರ್ಜಾ ಮತ್ತು ಪ್ರೇರಣಾ ಅವರನ್ನ ನಾಳೆ ಅಥವಾ ನಾಡಿದ್ದು ಭೇಟಿ ಮಾಡಲಿರುವ ದರ್ಶನ್ ಅವರು ಇಬ್ಬರಿಗೂ ಆಶೀರ್ವಾದವನ್ನ ಮಾಡಿ ಉಡುಗೊರೆಯನ್ನ ನೀಡಲಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ದರ್ಶನ್ ಅವರು ಮದುವೆಗೆ ಯಾಕೆ ಬರಲಿಲ್ಲ ಅನ್ನುವುದರ ಹಬ್ಬಿದ್ದ ಎಲ್ಲಾ ಊಹಾಪೋಹಗಳಿಗೆ ಈಗ ತೆರೆಬಿದ್ದಿದೆ, ಸ್ನೇಹಿತರೆ ಚಾಲೆಂಜಿಂಗ್ ದರ್ಶನ್ ಅವರು ಮದುವೆಗೆ ಬರದೇ ಇರುವದಕ್ಕೆ ಇದ್ದ ಬಲವಾದ ಕಾರಣ ಕೇಳಿ ಅಭಿಮಾನಿಗಳಿಗೆ ದರ್ಶನ್ಅ ಅವರ ಮೇಲೆ ಇದ್ದ ಗೌರವ ಇನ್ನಷ್ಟು ಜಾಸ್ತಿ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ದ್ರುವ ಸರ್ಜಾ ಮತ್ತು ಪ್ರೇರಣಾ ಅವರ ಜೋಡಿ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ವಧು ವರರಿಗೆ ಶುಭ ಹಾರೈಸಿ.

dhruva sarja marriage

Please follow and like us:
error0
http://karnatakatoday.in/wp-content/uploads/2019/11/Dhruva-sarja-marriage-1024x576.jpghttp://karnatakatoday.in/wp-content/uploads/2019/11/Dhruva-sarja-marriage-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಮಂಗಳೂರುಸುದ್ದಿಜಾಲದ್ರುವ ಸರ್ಜಾ ಹಾಗು ಪ್ರೇರಣಾ ಮದುವೆ ಬೆಂಗಳೂರಿನ ಜೆಪಿ ನಗರದ ಬೃಂಧಾವನ ಕಾನ್ವೆಂಷನ್ ಹಾಲ್ ನಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು, ಇನ್ನು ದ್ರುವ ಸರ್ಜಾ ಅವರ ಮದುವೆಗೆ ಚಿತ್ರರಂಗದ ಪ್ರಮುಖ ಗಣ್ಯರು ಮತ್ತು ಸೆಲೆಬ್ರಿಟಿಗಳು ಕೂಡ ಬಂದಿದ್ದರು. ಇನ್ನು ಬಂದ ಸೆಲೆಬ್ರಿಟಿಗಳು ಮತ್ತು ಗಣ್ಯರು ವಧು ವರರಿಗೆ ಆಶೀರ್ವಾದವಾನ್ನ ಮಾಡಿ ಉಡುಗೊರೆಗಳನ್ನ ನೀಡಿ ಹಾರೈಸಿದ್ದಾರೆ, ಇನ್ನು ತಮ್ಮ ಅಭಿಮಾನಿಗಳನ್ನೇ VIP ಎಂದು ಪರಿಗಣಿಸಿರುವ ದ್ರುವ ಸರ್ಜಾ ಅವರು ಅಭಿಮಾನಿಗಳಿಗಾಗಿ...Film | Devotional | Cricket | Health | India