Diamond in Land

ಮಳೆ ಅತಿಯಾದರೆ ರೈತರಿಗೆ ಭಾರಿ ನಷ್ಟವಾಗುತ್ತದೆ, ಆದರೆ ನಾವು ಹೇಳುವ ಈ ಪ್ರದೇಶದಲ್ಲಿ ಹೆಚ್ಚು ಮಳೆಯಾಗಿ ಮಣ್ಣು ಕೊಚ್ಚಿಕೊಂಡು ಹೋದರೆ ಜನರಿಗೆ ಎಲ್ಲಿಲ್ಲದ ಸಂತೋಷವಾಗುತ್ತದೆ. ಇನ್ನು ಈ ಜನರಿಗೆ ಬಹಳ ಸಂತೋಷ ಆಗಲು ಕಾರಣ ಮಾತ್ರ ಬಹಳ ರೋಚಕವಾಗಿದೆ, ಈ ಪ್ರದೇಶದಲ್ಲಿ ತುಂಬಾ ಮಳೆಯಾದ ಪರಿಣಾಮ ಇಲ್ಲಿನ ರೈತರು ರಾತ್ರಿ ಬೆಳಗಾಗುದರಲ್ಲಿ ಶ್ರೀಮಂತರಾಗಿದ್ದಾರೆ.

ಹಾಗಾದರೆ ಅದೂ ಹೇಗೆ ಸಾಧ್ಯ ಮತ್ತು ಆ ಪ್ರದೇಶ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಅದೃಷ್ಟ ಯಾವಾಗ ಮನೆ ಬಾಗಿಲನ್ನ ತಟ್ಟುತ್ತದೆ ಎಂದು ಯಾರಿಗೆ ತಾನೇ ಗೊತ್ತು, ಕೆಲವೊಮ್ಮೆ ಲಕ್ಷ್ಮಿ ದೇವಿ ಸಡನ್ ಆಗಿ ಮನೆಯಲ್ಲಿ ಬಂದು ಕುಳುತ್ತಾಳೆ, ಕರ್ನಾಟಕಕ್ಕೆ ಅಂಟಿಕೊಂಡಿರುವ ಆಂಧ್ರ ಪ್ರದೇಶದ ಜಿಲ್ಲೆ ಅಂದರೆ ಅದೂ ಕಾರ್ನುಲು, ಈ ಜಿಲ್ಲೆಯ ಜೊನ್ನಗಿರಿ ಪ್ರದೇಶದಲ್ಲಿ ಪುಟ್ಟಯ್ಯ ಅನ್ನುವ ರೈತರ ರಾತ್ರಿ ಬೆಳಗಾಗುದರಲ್ಲಿ ಶ್ರೀಮಂತನಾಗಿದ್ದಾನೆ.

Diamond in Land

ಹೌದು ಈ ಪುಟ್ಟಯ್ಯ ಅನ್ನುವ ಬೆಳಿಗ್ಗೆ ರೈತ ತನ್ನ ಜಮೀನಿನ ಕಡೆಗೆ ಹೋದಾಗ ಪಳಪಳ ಹೊಳೆಯುತ್ತಿದ್ದ ಒಂದು ಕಲ್ಲು ಆತನಿಗೆ ಸಿಕ್ಕಿತು, ಇನ್ನು ಈ ಬಹಳ ವಿಚಿತ್ರವಾಗಿದೆ ಎಂದು ಭಾವಿಸಿದ ಪುಟ್ಟಯ್ಯ ಅದನ್ನ ತೆಗೆದುಕೊಂಡು ಹೋಗಿ ಬಂಗಾರದ ಅಂಗಡಿಯಲ್ಲಿ ತೋರಿಸುತ್ತಾನೆ. ಇನ್ನು ಇದನ್ನ ಪರಿಶೀಲಿಸಿದ ಚಿನ್ನದ ಅಂಗಡಿಯವರು ಇದು ವಜ್ರ ಎಂದು ಹೇಳಿದರು, ಇನ್ನು ವಜ್ರ ಎಂದು ತಿಳಿದ ಪುಟ್ಟಯ್ಯ ಅದನ್ನ 37 ಲಕ್ಷಕ್ಕೆ ಮಾರಾಟ ಮಾಡಿದ.

ಇನ್ನು ಪುಟ್ಟಯ್ಯನಿಗೆ ಜಮೀನಿನಲ್ಲಿ ವಜ್ರ ಸಿಕ್ಕಿದೆ ಎಂದು ತಿಳಿದ ಅಲ್ಲಿನ ಜನರು ತಮ್ಮ ಜಮೀನಿಗೆ ಹೋಗಿ ವಜ್ರದ ಕಲ್ಲುಗಳನ್ನ ಹುಡುಕಲು ಆರಂಭ ಮಾಡಿದರು ಮತ್ತು ಕೆಲವರಿಗೆ ವಜ್ರದ ಕಲ್ಲು ಸಿಕ್ಕಿತು, ಸ್ನೇಹಿತರೆ ಇದು 10 ವರ್ಷದ ಹಿಂದಿನ ಕಥೆ. ಇನ್ನು ಆ ದಿನಗಳಿಂದ ಮುಂಗಾರು ಮಳೆಯಾದ ನಂತರ ಬಳ್ಳಾರಿ ಮತ್ತು ಆಂಧ್ರ ಪ್ರದೇಶದಿಂದ ಬರುವ ಜನರು ಜೊನ್ನಗಿರಿ ಪ್ರದೇಶದಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನ ಮಾಡಿಕೊಳ್ಳುತ್ತಾರೆ, ಇನ್ನು ಕೆಲವು ರೈತರಿಗೆ ಒಂದು ಕೋಟಿ ಬೆಲೆಬಾಳುವ ವಜ್ರ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

Diamond in Land

ಇನ್ನು ಪ್ರತಿ ವರ್ಷ ಇಲ್ಲಿ ಕೆಲವು ಜನರಿಗೆ ವಜ್ರದ ಕಲ್ಲು ಸಿಗುತ್ತದೆ, ಇನ್ನು ಇದೆ ರೀತಿ ಮಳೆ ಬಂದು ಹೋದಮೇಲೆ ಹುಡುಕಾಟವನ್ನ ಆರಂಭಿಸಿದ ಒಬ್ಬ ರೈತನಿಗೆ ಅದೃಷ್ಟ ಲಕ್ಷ್ಮಿ ಒಲಿದಿದೆ, ಹೌದು ಒಬ್ಬ ರೈತರಿಗೆ 50 ಲಕ್ಷ ಬೆಲೆಯ 8 ಕ್ಯಾರೆಟ್ ವಜ್ರ ಸಿಕ್ಕಿದ್ದು ಅದನ್ನ ಕೇವಲ 20 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಇನ್ನು ಮೇ ತಿಂಗಳಿನಿಂದ ಇಲ್ಲಿಯ ತನಕ ಸುಮಾರು 50 ಕೋಟಿಯಷ್ಟು ಬೆಲೆಬಾಳುವ ಚಿನ್ನ ರೈತರಿಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ರಾಶಿ ರಾಶಿ ವಜ್ರಗಳನ್ನ ಮಾರುತ್ತಿದ್ದರಂತೆ, ಹಾಗಾಗಿ ಈ ಪ್ರದೇಶದಲ್ಲಿ ವಜ್ರದ ಗಣಿ ಇದೆ ಎಂದು ಹೇಳಲಾಗುತ್ತಿದೆ, ಮಳೆ ಬಂದು ಮಣ್ಣುಗಳು ಕೊಚ್ಚಿಕೊಂಡು ಹೋದಮೇಲೆ ಇಲ್ಲಿ ವಜ್ರದ ಕಲ್ಲುಗಳು ಕಾಣಿಸಿಕೊಳ್ಳುತ್ತದೆ. ಇನ್ನು ಈಗಾಗಲೇ ಎರಡು ವಿದೇಶಿ ಕಂಪನಿಗಳು ಈ ಪ್ರದೇಶಕ್ಕೆ ಕಾಲಿಟ್ಟಿದು 50 ಎಕರೆ ಜಮೀನನ್ನ ಲಿಸ್ ಗೆ ಪಡೆದು ದೊಡ್ಡ ಮಷೀನ್ ಗಳ ಮೂಲಕ ವಜ್ರದ ಹುಡುಕಾಟದಲ್ಲಿ ತೊಡಗಿದೆ.

Diamond in Land

Please follow and like us:
error0
http://karnatakatoday.in/wp-content/uploads/2019/08/Dimond-in-Land-1024x576.jpghttp://karnatakatoday.in/wp-content/uploads/2019/08/Dimond-in-Land-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಮಳೆ ಅತಿಯಾದರೆ ರೈತರಿಗೆ ಭಾರಿ ನಷ್ಟವಾಗುತ್ತದೆ, ಆದರೆ ನಾವು ಹೇಳುವ ಈ ಪ್ರದೇಶದಲ್ಲಿ ಹೆಚ್ಚು ಮಳೆಯಾಗಿ ಮಣ್ಣು ಕೊಚ್ಚಿಕೊಂಡು ಹೋದರೆ ಜನರಿಗೆ ಎಲ್ಲಿಲ್ಲದ ಸಂತೋಷವಾಗುತ್ತದೆ. ಇನ್ನು ಈ ಜನರಿಗೆ ಬಹಳ ಸಂತೋಷ ಆಗಲು ಕಾರಣ ಮಾತ್ರ ಬಹಳ ರೋಚಕವಾಗಿದೆ, ಈ ಪ್ರದೇಶದಲ್ಲಿ ತುಂಬಾ ಮಳೆಯಾದ ಪರಿಣಾಮ ಇಲ್ಲಿನ ರೈತರು ರಾತ್ರಿ ಬೆಳಗಾಗುದರಲ್ಲಿ ಶ್ರೀಮಂತರಾಗಿದ್ದಾರೆ. ಹಾಗಾದರೆ ಅದೂ ಹೇಗೆ ಸಾಧ್ಯ ಮತ್ತು ಆ ಪ್ರದೇಶ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ...Film | Devotional | Cricket | Health | India