Different Marriage Tradition

ಒಂದೊಂದು ಪ್ರದೇಶದಲ್ಲಿ ಒಂದೊಂದು ಮದುವೆಯ ಆಚಾರ ಇರುತ್ತದೆ, ಅದರಲ್ಲಿ ಕೆಲವಂತೂ ತುಂಬಾ ವಿಚಿತ್ರ, ಹಿಮಾಚಲ ಪ್ರದೇಶದಲ್ಲಿ ವಿಚಿತ್ರ ಆಚಾರಗಳು ಇವೆ.

ಅದರಲ್ಲೂ ವಿಚಿತ್ರದಲ್ಲಿ ವಿಚಿತ್ರ ಅನ್ನೋ ಒಂದು ಆಚಾರ ಇಲ್ಲಿದೆ, ಇದನ್ನ ಕೇಳಿದರೆ ಇಂತಹ ಆಚಾರಗಳು ನಮ್ಮ ದೇಶದಲ್ಲಿ ಇದೆಯೇ ಅನಿಸುತ್ತದೆ, ಇಲ್ಲಿನ ಆಕಾರದ ಪ್ರಕಾರ, ಕುಟುಂಬದಲ್ಲಿರುವ ಎಲ್ಲಾ ಸಹೋದರರು ಸೇರಿ ಒಂದೇ ಹುಡುಗಿಯನ್ನ ಮದುವೆಯಾಗುತ್ತಾರೆ.

Different Marriage Tradition

ದ್ರೌಪದಿ ಹಾಗೆ, ಪಾಂಡವರು ಅಜ್ಞಾತವಾಸ ಮಾಡುವಾಗ ದ್ರೌಪದಿಯ ಜೊತೆ ಸೇರಿ ಇಲ್ಲಿ ವಾಸವಿದ್ದರಂತೆ, ಆದಿನದಿಂದ ಇಲ್ಲಿನ ಜನರು ಈ ಪದ್ದತಿಯನ್ನ ಆಚರಿಸುತ್ತ ಬಂದಿದ್ದಾರೆ.

ಈ ಪದ್ದತಿಯನ್ನ ಗೋಟೂರ್ ಎಂದು ಕರೆಯುತ್ತಾರೆ, ಮದುವೆಯ ಸಮಯದಲ್ಲಿ ಹುಡುಗ ಧರಿಸುವ ಟೋಪಿಗೆ ತುಂಬಾ ಪ್ರಾಧಾನ್ಯತೆ ಇರುತ್ತದೆ, ರೂಮ್ ಆಚೆ ಟೋಪಿ ನೇತಾಡುತ್ತಿದೆ ಅಂದರೆ ಆ ರೂಮ್ ನಲ್ಲಿ ಸಹೋದರ ರೋಮ್ಯಾನ್ಸ್ ನಲ್ಲಿ ಇದ್ದಾನೆ ಎಂದು ಅರ್ಥ.

Different Marriage Tradition

ಈ ಸಮಯದಲ್ಲಿ ಇತರರು ಆಕಡೆಗೆ ಹೋಗುವುದಿಲ್ಲ, ಇಂತಹ ಆಚಾರ ಇಲ್ಲಿ ಮಾತ್ರ ಅಲ್ಲ ಜರ್ಮನಿ, ಇಂಗ್ಲೆಂಡ್ ಮತ್ತು ಇನ್ನು ಹಲವು ಕಡೆಗಳಲ್ಲಿ ಇದೆ ಅನ್ನೋ ಆಧಾರಗಳು ಇವೆ.

ಇನ್ನು ಅಷ್ಟೇ ಅಲ್ಲದೆ ಇಲ್ಲಿನ ಕೆಲವು ಪ್ರದೇಶಗಳಲ್ಲಿ ಇನ್ನೊಂದು ಕೆಟ್ಟ ಆಚಾರ ಕೂಡ ಇದೆ, ಅದು ಏನು ಅಂದರೆ ಮನೆಗೆ ಬರುವ ಅತಿಥಿ ಆಸೆ ಪಟ್ಟರೆ ಅತಿಥಿಯ ಮರ್ಯಾದೆಯ ಭಾಗವಾಗಿ ಹೆಂಡತಿಯನ್ನು ಸಹ ಅರ್ಪಿಸುವ ಪದ್ಧತಿ ಇದೆ.

ಈಗಲೂ ಹಿಮಾಚಲ ಪ್ರದೇಶದಲ್ಲಿ ಅಣ್ಣ ತಮ್ಮಂದಿರು ಒಂದೇ ಹುಡುಗಿಯನ್ನ ಮದುವೆಯಾಗುವ ಸಂಪ್ರದಾಯ ಮುಂದುವರೆದಿದೆ. ಈ ಆಕಾರಕ್ಕೆ ಎರಡು ಕಾರಣ, ಹೀಗೆ ಎಲ್ಲಾ ಸಹೋದರರು ಒಂದೇ ಹುಡುಗಿಯನ್ನ ಮದುವೆಯಾದರೆ ಆಸ್ತಿ ವಿಭಜನೆ ಇರುವುದಿಲ್ಲ.

Different Marriage Tradition

ಹಾಗೆಯೆ ಬೇರೆ ಬೇರೆ ಹುಡುಗಿಯನ್ನ ಮದುವೆಯಾದರೆ ಜಗಳವಾಗಿ ಸಹೋದರರು ಬೇರೆಯಾಗುತ್ತಾರೆ ಅನ್ನೋದು ಇನ್ನೊಂದು ಕಾರಣ. ಈ ಆಚಾರಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Please follow and like us:
0
http://karnatakatoday.in/wp-content/uploads/2018/05/hhhhh-1024x576.jpghttp://karnatakatoday.in/wp-content/uploads/2018/05/hhhhh-150x150.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಒಂದೊಂದು ಪ್ರದೇಶದಲ್ಲಿ ಒಂದೊಂದು ಮದುವೆಯ ಆಚಾರ ಇರುತ್ತದೆ, ಅದರಲ್ಲಿ ಕೆಲವಂತೂ ತುಂಬಾ ವಿಚಿತ್ರ, ಹಿಮಾಚಲ ಪ್ರದೇಶದಲ್ಲಿ ವಿಚಿತ್ರ ಆಚಾರಗಳು ಇವೆ. ಅದರಲ್ಲೂ ವಿಚಿತ್ರದಲ್ಲಿ ವಿಚಿತ್ರ ಅನ್ನೋ ಒಂದು ಆಚಾರ ಇಲ್ಲಿದೆ, ಇದನ್ನ ಕೇಳಿದರೆ ಇಂತಹ ಆಚಾರಗಳು ನಮ್ಮ ದೇಶದಲ್ಲಿ ಇದೆಯೇ ಅನಿಸುತ್ತದೆ, ಇಲ್ಲಿನ ಆಕಾರದ ಪ್ರಕಾರ, ಕುಟುಂಬದಲ್ಲಿರುವ ಎಲ್ಲಾ ಸಹೋದರರು ಸೇರಿ ಒಂದೇ ಹುಡುಗಿಯನ್ನ ಮದುವೆಯಾಗುತ್ತಾರೆ. ದ್ರೌಪದಿ ಹಾಗೆ, ಪಾಂಡವರು ಅಜ್ಞಾತವಾಸ ಮಾಡುವಾಗ ದ್ರೌಪದಿಯ ಜೊತೆ ಸೇರಿ ಇಲ್ಲಿ ವಾಸವಿದ್ದರಂತೆ, ಆದಿನದಿಂದ...Karnataka news