digital india

ಹೌದು ಈಗಾಗಲೇ ಭಾರತದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೆ ಏರಿರೋದು ಗೊತ್ತೇ ಇದೆ, ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಇದೆ ಸೆಪ್ಟೆಂಬರ್ 10 ಕ್ಕೆ ಭಾರತ್ ಬಂದ್ ಗೆ ಕರೆ ಕೊಟ್ಟು ತಕ್ಕ ಮಟ್ಟಿಕೆ ಯಶಸ್ವಿಯಾಗಿ ಬಂದ್ ಮಾಡಿದರು.

ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡುವ ಬಗ್ಗೆ ಇನ್ನು ಸರಿಯಾದ ಹೇಳಿಕೆ ನೀಡಿಲ್ಲ, ಆದರೆ ನಾವು ಹೇಳುತ್ತಿರುವ ಇಂಟ್ರೆಸ್ಟಿಂಗ್ ವಿಷಯ ಏನೆಂದರೆ, ಕೃಷ್ಣಗಿರಿಯ ರಾಯಕೊಟ್ಟೈ ರಸ್ತೆಯಲ್ಲಿನ ಎಚ್‌ಪಿ ಪೆಟ್ರೋಲ್ ಪಂಪ್ ನಲ್ಲಿ ಒಂದು ವಿಶೇಷ ಕೊಡುಗೆ ನೀಡಲಾಗುತ್ತಿದೆ.

digital india

ನಗದು ರಹಿತ ವಹಿವಾಟು ಉತ್ತೇಜನಕ್ಕಾಗಿ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆ ಈ ವಿನೂತನ ಪ್ರಯೋಗಕ್ಕೆ ಮುಂದಾಗಿದೆ, ತಮಿಳುನಾಡಿನ ಕೃಷ್ಣಗಿರಿಯ ಹಿಂದೂಸ್ತಾನ್ ಪೆಟ್ರೋಲಿಯಂ ಬಂಕ್ ಗ್ರಾಹಕರಿಗೆ ಉಚಿತವಾಗಿ 1 ಲೀ. ಪೆಟ್ರೋಲ್ ಅಥವಾ ಡೀಸೆಲ್ ನೀಡುತ್ತಿದೆ, ಆದರೆ ಇದಕ್ಕೆ ಕೆಲ ಷರತ್ತುಗಳಿವೆ.

ಉಚಿತ ಪೆಟ್ರೋಲ್ ಮತ್ತು ಡೀಸೆಲ್ ಪಡೆಯಲು ಗ್ರಾಹಕರು ಪೆಟ್ರೋಲ್ ಪಂಪ್ ಆ್ಯಪ್‌ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ, ನಗದು ರಹಿತ ವಹಿವಾಟು ಉತ್ತೇಜಿಸಲು ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಬಂಕ್ ಮಾಲೀಕರು ತಿಳಿಸಿದ್ದಾರೆ.

digital india

ಆ್ಯಪ್‌ ಮೂಲಕ ಬಳಕೆದಾರರು ಖರೀದಿಸುವ ಪ್ರತಿ 5 ಲೀ. ಪೆಟ್ರೋಲ್ ಅಥವಾ ಡೀಸೆಲ್ ಜೊತೆಗೆ 1 ಲೀ. ಪೆಟ್ರೋಲ್ ಅಥವಾ ಡೀಸೆಲ್ ಉಚಿತವಾಗಿ ನೀಡಲಾಗುತ್ತದೆ.

ಈ ಕೊಡುಗೆಯ ಕೊನೆಯ ದಿನಾಂಕ ಇನ್ನು ತಿಳಿದು ಬಂದಿಲ್ಲ, ಹಾಗೆ ಉಚಿತವಾಗಿ ಪೆಟ್ರೋಲ್ ಸಿಗುತ್ತೆ ಅಂದರೆ ಯಾರು ಬಿಡ್ತಾರೆ ಹೇಳಿ, ಪೆಟ್ರೋಲ್ ಬಂಕ್ ನಲ್ಲಿ ಜನರು ಸಾಲುಗಟ್ಟಿ ನಿಂತಿದ್ದಾರೆ.

ಅದೇನೇ ಆಗಲಿ ಎಲ್ಲ ಪೆಟ್ರೋಲ್ ಬಂಕ್ ನಲ್ಲಿ ಇಂಥ ವಿಭಿನ್ನ ಯೋಜನೆಯನ್ನು ತಂದರೆ ಹಣಕೊಟ್ಟು ಪೆಟ್ರೋಲ್ ಹಾಕಿಸಿಕೊಳ್ಳುವ ಜನರಿಗೂ ಸ್ವಲ್ಪ ಖುಷಿ ಇರುತ್ತದೆ.

digital india

ಈ ಯೋಜನೆಗಳು ಕರ್ನಾಟಕಕ್ಕೂ ಬರಲಿ ಎಂದು ಆಶಿಸೋಣ, ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ಹಾಗೆ ತಪ್ಪದೆ ಶೇರ್ ಮಾಡಿ, ನವ ಭಾರತವನ್ನು ಡಿಜಿಟಲ್ ಇಂಡಿಯಾ ಆಗಿ ನಿರ್ಮಿಸಲು ಪ್ರೇರೇಪಿಸೋಣ.

Please follow and like us:
0
http://karnatakatoday.in/wp-content/uploads/2018/09/petrol-diesel-1024x576.jpghttp://karnatakatoday.in/wp-content/uploads/2018/09/petrol-diesel-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಹೌದು ಈಗಾಗಲೇ ಭಾರತದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೆ ಏರಿರೋದು ಗೊತ್ತೇ ಇದೆ, ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಇದೆ ಸೆಪ್ಟೆಂಬರ್ 10 ಕ್ಕೆ ಭಾರತ್ ಬಂದ್ ಗೆ ಕರೆ ಕೊಟ್ಟು ತಕ್ಕ ಮಟ್ಟಿಕೆ ಯಶಸ್ವಿಯಾಗಿ ಬಂದ್ ಮಾಡಿದರು. ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡುವ ಬಗ್ಗೆ ಇನ್ನು ಸರಿಯಾದ ಹೇಳಿಕೆ ನೀಡಿಲ್ಲ, ಆದರೆ ನಾವು ಹೇಳುತ್ತಿರುವ ಇಂಟ್ರೆಸ್ಟಿಂಗ್ ವಿಷಯ ಏನೆಂದರೆ, ಕೃಷ್ಣಗಿರಿಯ ರಾಯಕೊಟ್ಟೈ ರಸ್ತೆಯಲ್ಲಿನ ಎಚ್‌ಪಿ ಪೆಟ್ರೋಲ್ ಪಂಪ್...Kannada News