ಕೇಂದ್ರ ಸರ್ಕಾರ ಇದೀಗ ವಿದ್ಯುತ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ನಿಮಗೆಲ್ಲ ತಿಳಿದಿರಬಹುದು ಈ ಹಿಂದೆ ಎಲ್ಲಾ ಪತ್ರಿಕೆ ಹಾಗು ಸುದ್ದಿ ಮಾಧ್ಯಮಗಳಲ್ಲಿ ವರದಿಯೊಂದು ಭಾರಿ ಸುದ್ದಿ ಮಾಡಿತ್ತು. ಅದೇನೆಂದರೆ ತರಕಾರಿ ವ್ಯಾಪಾರೀ ಒಬ್ಬರಿಗೆ 8 ಲಕ್ಷ ರು ಕರೆಂಟ್ ಬಿಲ್ ಬಂದಿತ್ತು ಈ ಸುದ್ದಿ ಕೇಳಿಯೇ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ ಇನ್ನು ದೇಶಾದ್ಯಂತ ಈ ಸುದ್ದಿ ಭಾರಿ ಕೋಲಾಹಲ ಸ್ರಷ್ಟಿಸಿತ್ತು .

ಬಿಲ್ ನೀಡುವವನ ತಪ್ಪೋ ಅಥವಾ ಮಷೀನ್ ನಲ್ಲಿ ತೊಂದರೆ ಇತ್ತೋ ಗೊತ್ತಿಲ್ಲ ಆದರೆ ಬಡಜೀವ ಮಾತ್ರ ಬಲಿಯಾಗಿತ್ತು. ಇದರ ಬಳಿಕ ಎಚ್ಚೆತ್ತ ಸರ್ಕಾರ ಇದೀಗ ಘೋಷಣೆಯೊಂದನ್ನು ಮಾಡಿದೆ. ಹೌದು ಇನ್ನು ಮುಂದೆ ಎಲ್ಲಾ ವಿದ್ಯುತ್ ಮೀಟರ್ ಗಳು ಸಂಪೂರ್ಣ ಡಿಜಿಟಲ್ ಮಯವಾಗಲಿದೆ.

ಹೌದು ಇನ್ಮೇಲೆ ನಾವು ಬಳಸುವ ಮೊಬೈಲ್ ಫೋನಿನಂತೆ ಎಲ್ಲಾ ಮೀಟರ್ ಗಳು ಕೂಡ ಕಾರ್ಯನಿರ್ವಹಿಸಲಿವೆ. ಸ್ಮಾರ್ಟ್ ಮೀಟರ್ ಗಳು ನಿಮ್ಮ ಮನೆಗೆ ಬರಲಿವೆ, ಏನಿದರ ವಿಶೇಷ ನೋಡೋಣ ಬನ್ನಿ.

ಈ ಮೀಟರ್ ಗಳು ನಿಮಗೆ ನಿಮ್ಮ ಸಿಮ್ ಕಾರ್ಡ್ ಗೆ ರಿಚಾರ್ಜ್ ಮಾಡುವಂತೆ ಇದಕ್ಕೂ ಕೂಡ ರಿಚಾರ್ಜ್ ಮಾಡುವ ಅವಕಾಶ ನೀಡಲಾಗಿದೆ. ಇದರಲ್ಲಿನೀವು ಬಳಸಿದ ಕರೆಂಟ್ ಯೂನಿಟ್ , ಮತ್ತು ಕಟ್ಟಬೇಕಾದ ಬಿಲ್ ಎಲ್ಲವು ಗೋಚರಿಸಲಿದೆ. ಹಾಗಿದ್ರೆ ಇನ್ನು ಕರೆಂಟ್ ಬಿಲ್ ಕಟ್ಟುವ ಜಂಜಾಟ ತಪ್ಪಿದಂತೆ.

Please follow and like us:
0
http://karnatakatoday.in/wp-content/uploads/2018/06/DIGITAL-METRE-IN-3-YEAR-1024x576.pnghttp://karnatakatoday.in/wp-content/uploads/2018/06/DIGITAL-METRE-IN-3-YEAR-150x150.pngKarnataka Today's Newsಅಂಕಣಆರೋಗ್ಯಕೇಂದ್ರ ಸರ್ಕಾರ ಇದೀಗ ವಿದ್ಯುತ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ನಿಮಗೆಲ್ಲ ತಿಳಿದಿರಬಹುದು ಈ ಹಿಂದೆ ಎಲ್ಲಾ ಪತ್ರಿಕೆ ಹಾಗು ಸುದ್ದಿ ಮಾಧ್ಯಮಗಳಲ್ಲಿ ವರದಿಯೊಂದು ಭಾರಿ ಸುದ್ದಿ ಮಾಡಿತ್ತು. ಅದೇನೆಂದರೆ ತರಕಾರಿ ವ್ಯಾಪಾರೀ ಒಬ್ಬರಿಗೆ 8 ಲಕ್ಷ ರು ಕರೆಂಟ್ ಬಿಲ್ ಬಂದಿತ್ತು ಈ ಸುದ್ದಿ ಕೇಳಿಯೇ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ ಇನ್ನು ದೇಶಾದ್ಯಂತ ಈ ಸುದ್ದಿ ಭಾರಿ ಕೋಲಾಹಲ ಸ್ರಷ್ಟಿಸಿತ್ತು . ಬಿಲ್ ನೀಡುವವನ ತಪ್ಪೋ ಅಥವಾ ಮಷೀನ್...Kannada News