Diu Daman Jail

ಕೆಲವೊಮ್ಮೆ ನಮ್ಮ ದೇಶದಲ್ಲಿ ಇರುವ ವಿಚಿತ್ರ ಸ್ಥಳಗಳ ಬಗ್ಗೆ ನಮಗೆ ಗೊತ್ತಾಗುವುದೇ ಇಲ್ಲ, ಅಂತಹುದೊಂದು ವಿಚಿತ್ರ ನ್ಯೂಸ್ ಇದು, ಇದು ಬಾರಿ ದೊಡ್ಡ ಜೈಲು ಆದರೆ ಇಲ್ಲಿ ಇರುವುದು ಕೇವಲ ಒಬ್ಬ ಕೈದಿ ಮಾತ್ರ.

ಹಾಗಾದರೆ ಆ ಜೈಲು ಯಾವುದು ಮತ್ತು ಯಾಕೆ ಈ ಜೈಲಿನಲ್ಲಿ ಒಬ್ಬ ಕೈದಿ ಮಾತ್ರ ಇದ್ದಾನೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಜೈಲಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಈ ಜೈಲು ಇರುವುದು ಭಾರತದ ಕೇಂದ್ರಾಡಳಿತ ಪ್ರದೇಶ ಆದ ದಿಯು-ದಮನ್ ನಲ್ಲಿ, ಇನ್ನು ಈ ಜೈಲಿನ ಹೆಸರು ಕೋಟೆ ಜೈಲ್, 472 ವರ್ಷಗಳ ಹಿಂದೆ ಪೋರ್ಚುಗೀಸರು ಕಟ್ಟಿರುವ ಕೋಟೆಯನ್ನ ಜೈಲನ್ನಾಗಿ ಮಾಡಲಾಗಿದೆ.

Diu Daman Jail

ಇದೊಂದು ದೊಡ್ಡದಾದ ಕೋಟೆ, ಈ ಜೈಲಿನಲ್ಲಿ ಇರುವುದು ದೀಪಕ್ ಕಾಂಜಿ ಅನ್ನುವ ಏಕೈಕ ಕೈದಿ ಮಾತ್ರ, ತನ್ನ ಹೆಂಡತಿಗೆ ವಿಷ ಕೊಟ್ಟ ಕಾರಣ ಈತ ಸೆರೆವಾಸವನ್ನ ಅನುಭವಿಸುತ್ತಿದ್ದಾನೆ, ಪುಟ್ಟ ದ್ವೀಪದಂತೆ ಇರುವ ಈ ಜೈಲಿನಲ್ಲಿ ದೀಪಕ್ ಬಿಟ್ಟು ಬೇರೆ ಯಾವ ಕೈದಿ ಕೂಡ ಇಲ್ಲ.

2013 ರಲ್ಲಿ ಈ ಜೈಲಿನಲ್ಲಿ 7 ಕೈದಿಗಳು ಇದ್ದಿದ್ದರು ಆದರೆ ಈಗ ಅವರೆಲ್ಲ ಬೇರೆ ಬೇರೆ ಜೈಲಿಗೆ ಹೋದರು, ಇನ್ನು ದೀಪಕ್ ಕಾಂಜಿ ಗೆ ಕಾವಲು ಕಾಯಲು 5 ಪೊಲೀಸ್ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ.

Diu Daman Jail

ಇನ್ನು ಈತನಿಗೆ ಪಕ್ಕದ ಹೋಟೆಲ್ ನಿಂದ ಊಟವನ್ನ ತಂದು ಕೊಡಲಾಗುತ್ತದೆ, ಇನ್ನು ಈ ಕೈದಿ ಒಬ್ಬನೇ ಇರುವುದರಿಂದ ಈತನಿಗೆ ನೋಡಲು ಒಂದು ಟಿವಿ ಇಡಲಾಗಿದೆ, ಇನ್ನು ದೀಪಕ್ ಈ ಕೋಟೆಯಲ್ಲಿ ಅಕ್ಷರಶಃ ರಾಜನಂತೆ ಬದುಕುತ್ತಿದ್ದಾನೆ.

ಜೈಲಿನಲ್ಲಿ ಒಬ್ಬಂಟಿಯಾಗಿ ಬದುಕುತ್ತಿರುವ ನತದೃಷ್ಟ ಈತ, ಇಲ್ಲಿ ಅಪರಾಧ ಪ್ರಕರಣಗಳು ತೀರಾ ಕಡಿಮೆ ಹಾಗಾಗಿ ಇಲ್ಲಿನ ಜೈಲಿನ ಸೆಲ್ ಗಳು ಖಾಲಿ ಉಳಿದಿವೆ, ಸ್ನೇಹಿತರೆ ದೀಪಕ್ ಕಾಂಜಿ ಮತ್ತು ಈ ಜೈಲಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Diu Daman Jail

Please follow and like us:
0
http://karnatakatoday.in/wp-content/uploads/2019/04/Diu-Daman-jail-1024x576.jpghttp://karnatakatoday.in/wp-content/uploads/2019/04/Diu-Daman-jail-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಕೆಲವೊಮ್ಮೆ ನಮ್ಮ ದೇಶದಲ್ಲಿ ಇರುವ ವಿಚಿತ್ರ ಸ್ಥಳಗಳ ಬಗ್ಗೆ ನಮಗೆ ಗೊತ್ತಾಗುವುದೇ ಇಲ್ಲ, ಅಂತಹುದೊಂದು ವಿಚಿತ್ರ ನ್ಯೂಸ್ ಇದು, ಇದು ಬಾರಿ ದೊಡ್ಡ ಜೈಲು ಆದರೆ ಇಲ್ಲಿ ಇರುವುದು ಕೇವಲ ಒಬ್ಬ ಕೈದಿ ಮಾತ್ರ. ಹಾಗಾದರೆ ಆ ಜೈಲು ಯಾವುದು ಮತ್ತು ಯಾಕೆ ಈ ಜೈಲಿನಲ್ಲಿ ಒಬ್ಬ ಕೈದಿ ಮಾತ್ರ ಇದ್ದಾನೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಜೈಲಿನ...Kannada News