ಕರ್ನಾಟಕ ಸರಕಾರ ಸಾರಿಗೆ ಇಲಾಖೆಯಿಂದ ಹೊಸ ನಿಯಮವೊಂದನ್ನ ಜಾರಿಗೆ ತಂದಿದೆ ಈ ನಿಯಮದ ಪ್ರಕಾರ ನೀವು ಏನು ಮಾಡಬೇಕು ಎನ್ನುವುದನ್ನು ಇಲ್ಲಿ ತಿಳಿಸುತ್ತಿದ್ದೇವೆ ಒಮ್ಮೆ ನೋಡಿ. ಪ್ರತಿಯೊಬ್ಬ ಡ್ರೈವಿಂಗ್ ಲೈಸೆನ್ಸ್ ಹೊಂದಿದ ವ್ಯಕಿಯು ಇದನ್ನು ಮಾಡಲೇಬೇಕಾಗುತ್ತದೆ. ಹೆಚ್ಚುತ್ತಿರುವ ಅಪಘಾತ ಮತ್ತು ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲು ಈ ಯೋಜನೆಗೆ ಮುಂದಾಗುತ್ತಿದೆ ಸರ್ಕಾರ, ಇನ್ನು ಮುಂದೆ ಡ್ರೈವಿಂಗ್ ಲೈಸನ್ಸ್ ಪಡೆಯಲು ಆಧಾರ್ ಕಡ್ಡಾಯವಾಗಿದೆ.

ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಮತ್ತು ಮೋಟಾರ ವಾಹನ ಸುರಕ್ಷಾ ಕ್ರಮಕ್ಕೆ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದೆ ಆದ್ದರಿಂದ ಆಧಾರ್ ಮತ್ತಷ್ಟು ಬಿಗಿಗೊಂಡಿದೆ. ಈಗಾಗಲೇ ಲೈಸನ್ಸ್ ಹೊಂದಿರುವವರು RTO ಕಚೇರಿಗೆ ಭೇಟಿ ನೀಡಿ ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕಾಗುತ್ತದೆ.

ಅಪಘಾತ ಹಾಗು ಕಳ್ಳತನ ಮುಂತಾದ ಅಕ್ರಮ ಚಟುವಟಿಕೆಗಳನ್ನು ಭೇದಿಸಲು ಕೂಡ ಆಧಾರ್ ನೆರವಾಗಲಿದೆ ಆದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಆಧಾರ್ ಲಿಂಕ್ ಮಾಡದೇ ಇರುವವರನ್ನ ಹುಡುಕಿ ಮಾಹಿತಿ ನೀಡಿ ಮತ್ತು ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಕಾರ್ಯಕ್ರಮ ಕೂಡ ಜಾರಿಗೆ ಬರಲಿದೆ. ಆದ್ದರಿಂದ ಶೀಘ್ರದಲ್ಲಿಯೇ ನಿಮ್ಮ ಲೈಸನ್ಸ್ಸ್ ಆಧಾರ್ ಜೋಡಣೆ ಮಾಡಿಕೊಳ್ಳುವುದು ಉತ್ತಮವಾಗಿದೆ.

ಈ ಯೋಜನೆಯ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ ತಿಳಿಸಿ ಹಾಗು ಇದು ಸರಿಯಾದ ಕ್ರಮವೇ ಅಥವಾ ಅಲ್ಲವೇ ಇಲ್ಲ ನಿಮ್ಮ ಸಲಹೆಗಳನ್ನು ಕೂಡ ತಿಳಿಸಿ ರಸ್ತೆ ಸುರಕ್ಷಾ ಕ್ರಮಗಳಿಗೆ ನಿಮ್ಮ ಸಲಹೆ ನೀಡಿರಿ.

Please follow and like us:
0
http://karnatakatoday.in/wp-content/uploads/2018/08/license-1024x576.pnghttp://karnatakatoday.in/wp-content/uploads/2018/08/license-150x104.pngKarnataka Today's Newsಎಲ್ಲಾ ಸುದ್ದಿಗಳುಕರ್ನಾಟಕ ಸರಕಾರ ಸಾರಿಗೆ ಇಲಾಖೆಯಿಂದ ಹೊಸ ನಿಯಮವೊಂದನ್ನ ಜಾರಿಗೆ ತಂದಿದೆ ಈ ನಿಯಮದ ಪ್ರಕಾರ ನೀವು ಏನು ಮಾಡಬೇಕು ಎನ್ನುವುದನ್ನು ಇಲ್ಲಿ ತಿಳಿಸುತ್ತಿದ್ದೇವೆ ಒಮ್ಮೆ ನೋಡಿ. ಪ್ರತಿಯೊಬ್ಬ ಡ್ರೈವಿಂಗ್ ಲೈಸೆನ್ಸ್ ಹೊಂದಿದ ವ್ಯಕಿಯು ಇದನ್ನು ಮಾಡಲೇಬೇಕಾಗುತ್ತದೆ. ಹೆಚ್ಚುತ್ತಿರುವ ಅಪಘಾತ ಮತ್ತು ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲು ಈ ಯೋಜನೆಗೆ ಮುಂದಾಗುತ್ತಿದೆ ಸರ್ಕಾರ, ಇನ್ನು ಮುಂದೆ ಡ್ರೈವಿಂಗ್ ಲೈಸನ್ಸ್ ಪಡೆಯಲು ಆಧಾರ್ ಕಡ್ಡಾಯವಾಗಿದೆ. ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಈ...Kannada News