Doctors Statement of Ambarish

ನಟ ಮತ್ತು ರಾಜಕಾರಣಿ ಅಂಬರೀಷ್ ಶನಿವಾರ ರಾತ್ರಿ 10 :15 ಕ್ಕೆ ನಿಧನರಾದರು ಎಂದು ವಿಕ್ರಂ ಆಸ್ಪತ್ರೆಯ ವೈದ್ಯರು ತಿಳಿಸಿದರು, ಆಸ್ಪತ್ರೆಯ ಅಧಿಕೃತ ಪ್ರಕಟಣೆಯಲ್ಲಿ ಈ ವಿವರಗಳನ್ನ ನೋಡಲಾಗಿದೆ.

ಅಂಬರೀಷ್ ಅವರು ತಮ್ಮ ನಿವಾಸದಲ್ಲೇ ಪ್ರಜ್ಞೆ ತಪ್ಪಿದ್ದರು ಮತ್ತು ಅಲ್ಲಿಯೇ ಅವರು ಪ್ರತಿಕ್ರಿಯೆ ನೀಡುವ ಶಕ್ತಿಯನ್ನ ಕಳೆದುಕೊಂಡಿದ್ದರು ಎಂದು ವೈದ್ಯರು ಹೇಳಿದ್ದಾರೆ.

Doctors Statement of Ambarish

ಇನ್ನು ಅಂಬರೀಷ್ ಅವರನ್ನ ಆಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿ ಅವರ ಸ್ಥಿತಿ ತುಂಬಾ ಚಿಂತಾದನಕವಾಗಿತ್ತು, ಅವರನ್ನ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆದಿದೆ ನಂತರವೂ ಸಫಲತೆ ಸಿಗಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ವಿಕ್ರಂ ಆಸ್ಪತ್ರೆಯ ವೈದ್ಯರಾಗಿರುವ ಡಾ. ಸತೀಶ್ ವೈದ್ಯರ ತಂಡ ಅಂಬರೀಷ್ ಅವರಿಗೆ ಚಿಕಿತ್ಸೆಯನ್ನ ನೀಡುತ್ತಿತ್ತು, ಅವರ ಆರೋಗ್ಯ ಸ್ಥಿತಿ ಸುಧಾರಿಸಲು ಅವರ ನಿವಾಸದಲ್ಲೇ ಸಾಕಷ್ಟು ಶ್ರಮ ಪಟ್ಟಿದ್ದೆವು ಎಂದು ಹೇಳಲಾಗಿದೆ. ಇನ್ನು ಎಲ್ಲಾ ಅಗತ್ಯ ರೀತಿಯ ಚಿಕಿತ್ಸೆ ಕ್ರಮ ಕೈಗೊಂಡರು ಅವರನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವಿವರಿಸಿದ್ದಾರೆ ವೈದ್ಯರು.

Doctors Statement of Ambarish

ಇದನ್ನೆಲ್ಲಾ ನೋಡಿದ ಸುಮಲತಾ ದುಃಖವನ್ನ ತಡೆಯಲಾರದೆ ಕುಸಿದು ಬಿದ್ದಿದ್ದಾರೆ, ಕಾರಣ ಸುಮಲತಾ ಅವರು ಅಂಬರೀಷ್ ಅವರ ಆರೋಗ್ಯದ ಕಡೆ ಹೆಚ್ಚಿನ ಕಾಳಜಿಯನ್ನ ವಯಸ್ಸಿದ್ದರು.

ತುಂಬಾ ಮದ್ಯಪಾನ ಮತ್ತು ಧೂಮಪಾನ ಮಾಡುತ್ತಿದ್ದ ಅಂಬಿ ಸುಮಲತಾ ಅವರ ಕೋರಿಕೆಯ ಮೇಲೆ ಎಲ್ಲವನ್ನ ಬಿಟ್ಟಿದ್ದರು, ಆದರೆ ವಿಧಿಯಾಟವೇ ಬೇರೆ ಆಗಿತ್ತು, ಇಂದು ಅಂಬಿಯ ನೆನಪು ಮಾತ್ರ ನಮ್ಮಲ್ಲಿದೆ, ಅವರ ಕುಟುಂಬಕ್ಕೆ ಆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಾವೆಲ್ಲ ಪ್ರಾರ್ಥಿಸೋಣ.

Doctors Statement of Ambarish

Please follow and like us:
0
http://karnatakatoday.in/wp-content/uploads/2018/11/Doctors-Statement-of-Ambarish-1-1024x576.jpghttp://karnatakatoday.in/wp-content/uploads/2018/11/Doctors-Statement-of-Ambarish-1-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲನಟ ಮತ್ತು ರಾಜಕಾರಣಿ ಅಂಬರೀಷ್ ಶನಿವಾರ ರಾತ್ರಿ 10 :15 ಕ್ಕೆ ನಿಧನರಾದರು ಎಂದು ವಿಕ್ರಂ ಆಸ್ಪತ್ರೆಯ ವೈದ್ಯರು ತಿಳಿಸಿದರು, ಆಸ್ಪತ್ರೆಯ ಅಧಿಕೃತ ಪ್ರಕಟಣೆಯಲ್ಲಿ ಈ ವಿವರಗಳನ್ನ ನೋಡಲಾಗಿದೆ. ಅಂಬರೀಷ್ ಅವರು ತಮ್ಮ ನಿವಾಸದಲ್ಲೇ ಪ್ರಜ್ಞೆ ತಪ್ಪಿದ್ದರು ಮತ್ತು ಅಲ್ಲಿಯೇ ಅವರು ಪ್ರತಿಕ್ರಿಯೆ ನೀಡುವ ಶಕ್ತಿಯನ್ನ ಕಳೆದುಕೊಂಡಿದ್ದರು ಎಂದು ವೈದ್ಯರು ಹೇಳಿದ್ದಾರೆ. ಇನ್ನು ಅಂಬರೀಷ್ ಅವರನ್ನ ಆಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿ ಅವರ ಸ್ಥಿತಿ ತುಂಬಾ ಚಿಂತಾದನಕವಾಗಿತ್ತು, ಅವರನ್ನ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ...Kannada News