ಅಂಬರೀಷ್ ನಮ್ಮನ್ನೆಲ್ಲ ಆಗಲಿ ದಿನಗಳೇ ಕಳೆದಿವೆ ಈ ನಡುವೆ ಆಪ್ತರಲ್ಲಿ ಒಬ್ಬರಾದ ನಟ ದೊಡ್ಡಣ್ಣ ಯಾವಾಗಲು ಅಂಬಿ ಜೊತೆ ಕಾಣಿಸಿಕೊಳ್ಳುತ್ತಿದ್ದರು. ಅಂಬಿ ವಿಧಿವಶವಾದಾಗ ಕೂಡ ಆಸ್ಪತ್ರೆಯಲ್ಲಿ ಇದ್ದರು ದೊಡ್ಡಣ್ಣ, ಅಂಬಿಯ ಕೊನೆ ಕ್ಷಣಗಳನ್ನು ಹತ್ತಿರದಿಂದ ನೋಡಿದ ದೊಡ್ಡಣ್ಣ ಹೇಳಿದ್ದೇನು ಗೊತ್ತಾ ಅದನ್ನು ಕೇಳಲೇಬೇಕು. ಹೌದು ಅಂಬಿ ಕೊನೆ ಭೇಟಿಯ ಬಗ್ಗೆಯೂ ಕೂಡ ಹೇಳಿಕೊಂಡಿದ್ದಾರೆ ಅಂಬಿ ಸಾವಿನ ಹಿಂದಿನ ದೊಡ್ಡಣ್ಣ ಭೇಟಿಯಾಗಿದ್ದರು ಮತ್ತು ಊಟ ಕೂಡ ಮಾಡಿದ್ದರು. ಅದೇ ಕೊನೆಯ ಭೇಟಿ ಎಂದು ದೊಡ್ಡಣ್ಣ ಎಂದು ಅಂದುಕೊಂಡಿರಲಿಲ್ಲ. ಆ ದಿನ ಮಧ್ಯಾಹ್ನ ಊಟ ಮಾಡಲು ಕರೆದ ಅಂಬಿ ಜೊತೆ ರಾಕ್ ಲೈನ್ ವೆಂಕಟೇಶ್ ಕೂಡ ಇದ್ದರಂತೆ.

ಇಬ್ಬರಿಗೂ ಅದನ್ನು ತಿನ್ನು ಇದನ್ನು ತಿನ್ನು ಎಂದು ಹೇಳುತ್ತಿದ್ದರಂತೆ. ಅವರೇ ಬಡಿಸಿದ್ದರಂತೆ, ಇನ್ನು ಅಂಬಿ ಹೇಳಿದಂತೆ ಕಲಾವಿದರ ಸಂಘದ ಕಾರ್ಯಕ್ರಮಕ್ಕೆ ಇವರಿಬ್ಬರು ಮಧ್ಯಾಹ್ನದ ಹೊತ್ತಿಗೆ ಹೊರಟಿದ್ದರು ಆದರೆ ಸಂಜೆ ವೇಳೆಗೆ ಶಾಕ್ ಕಾದಿತ್ತು. ಅಂಬಿ ಕೊನೆಯುಸಿರೆಳೆದ ಸುದ್ದಿ ಕೇಳಿದ ದೊಡ್ಡಣ್ಣನಿಗೆ ಒಂದು ಕ್ಷಣ ಏನು ಮಾಡಬೇಕೆಂದು ತೋಚಿರಲಿಲ್ಲ. ಕೊನೆಗೂ ಅಂಬಿ ನಮ್ಮನ್ನೆಲ್ಲ ಬಿಟ್ಟು ತೆರಳಿದರು.

ಕಂಠೀರವ ಸ್ಟೇಡಿಯಂನಲ್ಲಿ ಅಸ್ಥಿಗೆ ಪೂಜೆ ಇತ್ಯಾದಿ ವಿಧಿ ವಿಧಾನಗಳನ್ನು ನೆರವೇರಿಸಿದ ಅಂಬರೀಶ್‌ ಕುಟುಂಬ, ಮಧ್ಯಾಹ್ನದ ವೇಳೆ ಅಸ್ಥಿಯನ್ನು ಕಾವೇರಿಯಲ್ಲಿ ವಿಸರ್ಜಿಸಿದರು. ಕಾವೇರಿ ಸಂಗಮಕ್ಕೆ ಬಿಗಿ ಪೋಲೀಸ್‌ ಭದ್ರತೆ ಒದಗಿಸಲಾಗಿತ್ತು.ಇನ್ನು ಅಂಬಿ ಬಗ್ಗೆ ಮಾತನಾಡಿದ ಸುಮಲತಾ 1991ರಲ್ಲಿ ನಾವಿಬ್ಬರೂ ಮನೆಯವರ ಆಸೆಯಂತೆ ಸಪ್ತಪದಿ ತುಳಿದೆವು. ಅಷ್ಟೊತ್ತಿಗೆ ನಾವಿಬ್ಬರೂ ಒಬ್ಬರನೊಬ್ಬರು ಅರ್ಥ ಮಾಡಿಕೊಂಡಿದ್ದೆವು.

ಹಾಗಾಗಿ ಯಾವುದೇ ಸಮಸ್ಯೆ ಇಲ್ಲದಂತೆ ವೃತ್ತಿ ಮತ್ತು ಕುಟುಂಬವನ್ನು ನಿಭಾಯಿಸಿದೆವು. ಮದುವೆಗೂ ಮುನ್ನ ಅವರ ಬಗ್ಗೆ ತುಂಬಾನೇ ಕೇಳಿದ್ದೆ. ಕೆಲವರಂತೂ ನನಗೇ ಭಯ ಪಡಿಸಿದ್ದರು. ಹೌದು, ಅವರು ಕೋಪಿಷ್ಠ. ಬೇಗ ಕೋಪ ಮಾಡಿಕೊಳ್ಳುತ್ತಾರೆ. ಅದು ನನಗೆ ಭಯವೇ ಅನಿಸಲಿಲ್ಲ. ಕೋಪ ಬಂದ ಹತ್ತೇ ನಿಮಿಷಕ್ಕೆ ಸರಿ ಹೋಗಿ ಬಿಡ್ತಾರೆ. ಅವರೇ ಪಶ್ಚಾತಾಪಪಡುತ್ತಾರೆ. ಜೀವನದಲ್ಲಿ ಅವರು ಯಾರಿಗೂ ಈವರೆಗೂ ಕ್ಷಮೆ ಕೇಳಿಲ್ಲ. ಅದನ್ನು ನಾನೂ ಕೂಡ ನಿರೀಕ್ಷೆ ಮಾಡ್ತಾ ಇರಲಿಲ್ಲ. ಅವರ ಪಶ್ಚಾತಾಪ ಗುಣವೇ ನನಗೆ ಸಾರಿ ರೂಪದಲ್ಲಿ ಕಾಣಿಸುತ್ತಿತ್ತು. ಹಾಗಾಗಿ ಎಲ್ಲವೂ ಕೂಲ್‌ ಆಗಿ ಇರೋದು. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡೇ ಜೀವನ ಸಾಗಿಸಿದೆವು ಎಂದರು.

Please follow and like us:
0
http://karnatakatoday.in/wp-content/uploads/2018/11/amabareesh-doddanna-1024x576.jpghttp://karnatakatoday.in/wp-content/uploads/2018/11/amabareesh-doddanna-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಅಂಬರೀಷ್ ನಮ್ಮನ್ನೆಲ್ಲ ಆಗಲಿ ದಿನಗಳೇ ಕಳೆದಿವೆ ಈ ನಡುವೆ ಆಪ್ತರಲ್ಲಿ ಒಬ್ಬರಾದ ನಟ ದೊಡ್ಡಣ್ಣ ಯಾವಾಗಲು ಅಂಬಿ ಜೊತೆ ಕಾಣಿಸಿಕೊಳ್ಳುತ್ತಿದ್ದರು. ಅಂಬಿ ವಿಧಿವಶವಾದಾಗ ಕೂಡ ಆಸ್ಪತ್ರೆಯಲ್ಲಿ ಇದ್ದರು ದೊಡ್ಡಣ್ಣ, ಅಂಬಿಯ ಕೊನೆ ಕ್ಷಣಗಳನ್ನು ಹತ್ತಿರದಿಂದ ನೋಡಿದ ದೊಡ್ಡಣ್ಣ ಹೇಳಿದ್ದೇನು ಗೊತ್ತಾ ಅದನ್ನು ಕೇಳಲೇಬೇಕು. ಹೌದು ಅಂಬಿ ಕೊನೆ ಭೇಟಿಯ ಬಗ್ಗೆಯೂ ಕೂಡ ಹೇಳಿಕೊಂಡಿದ್ದಾರೆ ಅಂಬಿ ಸಾವಿನ ಹಿಂದಿನ ದೊಡ್ಡಣ್ಣ ಭೇಟಿಯಾಗಿದ್ದರು ಮತ್ತು ಊಟ ಕೂಡ ಮಾಡಿದ್ದರು. ಅದೇ ಕೊನೆಯ...Kannada News