ಸ್ನೇಹಿತರೆ ಮಹಾಭಾರತ ಅನ್ನುವುದು ಹಿಂದೂಗಳ ಒಂದು ಪವಿತ್ರ ಗ್ರಂಥ ಮತ್ತು ಇಲ್ಲಿ ಹತ್ತಾರು ಸಂಪುಟಗಳು ಇವೆ, ನೂರಾರು ಕಥೆಗಳಿವೆ, ಸಾವಿರಾರು ಪಾತ್ರಗಳಿವೆ ಮತ್ತು ಒಂದೊಂದು ಪಾತ್ರಕ್ಕೆ ಅದರದ್ದೇ ಗತ್ತು ಮತ್ತು ಗಾಂಭೀರ್ಯವಾಗಿದೆ. ಸ್ನೇಹಿತರೆ ಇನ್ನು ಮಹಾಭಾರತದಲ್ಲಿ ಬರುವ ಮುಖ್ಯವಾದ ಪಾತ್ರಗಳಲ್ಲಿ ದ್ರೌಪದಿ ಕೂಡ ಒಬ್ಬಳು, ಮಹಾಭಾರತದಲ್ಲಿ ದ್ರೌಪದಿಯ ಪಾತ್ರ ಎಲ್ಲರಿಗಿಂದ ಮುಖ್ಯವಾದದ್ದು ಕೂಡ ಆಗಿದೆ. ಇನ್ನು ಪ್ರತಿಯೊಬ್ಬ ಜನರಲ್ಲೂ ಕಾಡುವ ಏಕೈಕ ಪ್ರಶ್ನೆ ಏನು ಅಂದರೆ ದ್ರೌಪದಿ ಯಾಕೆ ಐದು ಜನ ಪಾನವರನ್ನ ಮದುವೆಯಾದಳು ಮತ್ತು ಅದರ ಹಿಂದಿನ ರಹಸ್ಯ ಏನು ಅನ್ನುವುದು. ಹಾಗಾದರೆ ದ್ರೌಪದಿ ಯಾರು, ಆಕೆ ಯಾಕೆ ಐದು ಜನ ಪುರುಷರನ್ನ ಮದುವೆಯಾದಳು ಮತ್ತು ಆಕೆಗೆ ದೊರೆತ ವರ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸ್ನೇಹಿತರೆ ಮಹಾಭಾರತದಲ್ಲಿ ಅತೀ ಹೆಚ್ಚು ಚರ್ಚೆಗೆ ಒಳಗಾದ ಪಾತ್ರ ಅಂದರೆ ದ್ರೌಪದಿಯ ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ಇದಕ್ಕೆ ಮುಖ್ಯವಾದ ಕಾರಣ ಆಕೆ ಪಂಚ ಪಾಂಡವರನ್ನ ಮದುವೆಯಾಗಿದ್ದು ಆಗಿದೆ. ಸ್ನೇಹಿತರೆ ದ್ರೌಪದಿ ಮತ್ತು ಪಂಚ ಪಾಂಡವರ ವಿವಾಹ ಉದ್ದೇಶಪೂರ್ವಕವಾಗಿ ನಡೆದಿದ್ದು ಅಲ್ಲ, ಸ್ನೇಹಿತರೆ ಅದರ ಹಿಂದೆ ಒಂದು ದೊಡ್ಡ ಕಥೆ ಇದೆ. ದ್ರೌಪದಿಯೂ ತನ್ನ ಹಿಂದಿನ ಜನ್ಮದಲ್ಲಿ ಒಬ್ಬ ತಪಸ್ವಿಯ ಮಗಳಾಗಿ ಜನಿಸಿರುತ್ತಾಳೆ, ಆದರೆ ಮದುವೆಯ ವಯಸ್ಸು ದಾಟಿದರು ಕೂಡ ಅವಳಿಗೆ ಕಂಕಣ ಭಾಗ್ಯ ಕೂಡಿ ಬಂದಿರುವುದಿಲ್ಲ ಮತ್ತು ಇದರಿಂದ ತುಂಬಾ ದುಃಖಪಟ್ಟ ಆಕೆ ಶಿವನ ಕುರಿತು ಘೋರವಾದ ತಪಸ್ಸನ್ನ ಮಾಡುತ್ತಾಳೆ. ಇನ್ನು ಇವಳ ತಪಸ್ಸಿಗೆ ಮೆಚ್ಚಿನ ಶಿವ ಪ್ರತ್ಯಕ್ಷನಾಗಿ ನಿನಗೆ ಎಂದು ವರ ಬೇಕು ಕೇಳು ಎಂದು ಹೇಳುತ್ತಾನೆ, ಆಗ ದ್ರೌಪದಿಯೂ ನನಗೆ ಧೀರ, ಸ್ತುರದ್ರುಪಿ, ಬುದ್ದಿವಂತ, ಕರುಣೆ ಮತ್ತು ನೈತಿಕತೆ, ಹೀಗೆ ಐದು ಗುಣಗಳನ್ನ ಹೊಂದಿರುವ ಪತಿ ಬೇಕು ಎಂದು ಕೇಳಿಕೊಳ್ಳುತ್ತಾಳೆ ದ್ರೌಪದಿ.

Draupadi marriage

ಇನ್ನು ದ್ರೌಪದಿ ಈ ಕೋರಿಕೆಗೆ ಉತ್ತರವನ್ನ ಕೊಟ್ಟ ಶಿವ, ಈ ಐದು ಗುಣಗಳನ್ನ ಹೊಂದಿರುವ ಒಬ್ಬನೇ ವ್ಯಕ್ತಿ ಸಿಗಲಾರ ಆದ್ದರಿಂದ ಈ ಐದು ಗುಣಗಳಿರುವ ಐದು ಗಂಡಂದಿರು ಮುಂದಿನ ಜನ್ಮದಲ್ಲಿ ನಿನ್ನ ಪತಿಯಾಗುತ್ತಾರೆ ಎಂದು ವರವನ್ನ ನೀಡುತ್ತಾನೆ ಶಿವ. ಇನ್ನು ದ್ರೌಪದಿ ಮುಂದಿನ ಜನ್ಮ ಅಂದರೆ ಮಹಾಭಾರತದ ಕಾಲದಲ್ಲಿ ದ್ರುಪದನ ಮಗಳಾಗಿ ಜನ್ಮವನ್ನ ಪಡೆಯುತ್ತಾಳೆ, ಇನ್ನು ತನ್ನ ಮಗಳು ಮದುವೆಯ ವಯಸ್ಸಿಗೆ ಬಂದಾಗ ದ್ರುಪದ ಮಗಳಿಗೆ ಸ್ವಯಂವರವನ್ನ ಮಾಡುತ್ತಾನೆ. ಇನ್ನು ಸ್ವಯಂವರದಲ್ಲಿ ಮೀನಿನ ಕಣ್ಣಿಗೆ ಬಾಣವನ್ನ ಹೂಡುವ ಸ್ಪರ್ಧೆಯನ್ನ ಆಯೋಜನೆ ಮಾಡಲಾಗಿರುತ್ತದೆ, ಇನ್ನು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಅರ್ಜುನ ಮೀನಿನ ಕಣ್ಣಿಗೆ ಬಾಣವನ್ನ ಹೂಡಿ ಸ್ಪರ್ಧೆಯಲ್ಲಿ ಜಯಿಸುತ್ತಾನೆ.

ಇನ್ನು ಇದೆ ಸಮಯದಲ್ಲಿ ಕುಂತಿ ಮತ್ತು ಆಕೆಯ ಪುತ್ರರಾದ ಪಂಚ ಪಾಂಡವರು ಬ್ರಾಹ್ಮಣ ವೇಷವನ್ನ ಧರಿಸಿ ಬಿಕ್ಷಾಟನೆಯನ್ನ ಮಾಡಿ ಜೀವನವನ್ನ ಸಾಗಿಸುತ್ತಿದ್ದರು ಮತ್ತು ಪಾಂಡವರು ಎಲ್ಲೇ ಭಿಕ್ಷೆ ಬೇಡಿದರು ಅದನ್ನ ತಂದು ಕುಂತಿಗೆ ನೀಡುತ್ತಿದ್ದರು. ಇನ್ನು ಪಾಂಡವರು ತಂಡ ಬಿಕ್ಷೆಯನ್ನ ಸಮಭಾಗ ಮಾಡಿ ಅದನ್ನ ಐದು ಜನ ಪಾಂಡವರಿಗೆ ನೀಡುತ್ತಿದ್ದಳು ಕುಂತಿ, ಇನ್ನು ಸ್ವಯಂವರದಲ್ಲಿ ದ್ರೌಪದಿಯನ್ನ ಗೆದ್ದ ಅರ್ಜುನ ದ್ರೌಪದಿಯನ್ನ ಕುಂತಿಯ ಬಳಿ ಕರೆತಂದು ನಿಲ್ಲಿಸುತ್ತಾನೆ. ಇನ್ನು ಯಾವುದೋ ಕೆಲಸದಲ್ಲಿ ಮುಳುಗಿದ್ದ ಮಕ್ಕಳು ಏನು ತಂದಿದ್ದಾರೆ ಅನ್ನುವುದನ್ನ ಗಮನಿಸದೆ ತಂದದ್ದನ್ನ ನೀವು ಐದು ಜನ ಸಹೋದರರು ಹಂಚುಕೊಳ್ಳಿ ಎಂದು ಹೇಳುತ್ತಾಳೆ.

ಇನ್ನು ತಾಯಿಯ ಮಾತನ್ನ ಚಾಚೂತಪ್ಪದೆ ಮಾಡುತ್ತಿದ್ದ ಪಾಂಡವರಿಗೆ ಏನು ಮಾಡಬೇಕು ಎಂದು ತೋಚದೆ ಧರ್ಮಸಂಕಟಕ್ಕೆ ಒಳಗಾದರು. ಇನ್ನು ವಿಷಯ ದ್ರುಪದನಿಗೆ ತಿಳಿದು ತನ್ನ ಆಸ್ತಾನಕ್ಕೆ ಶ್ರೀ ಕೃಷ್ಣ ಮತ್ತು ವ್ಯಾಸ ಮುನಿಗಳನ್ನ ಬರಮಾಡಿಕೊಳ್ಳುತ್ತಾನೆ, ಇನ್ನು ಅಲ್ಲಿ ಬಂದ ವ್ಯಾಸ ಮುನಿಗಳು ದ್ರೌಪದಿ ಹಿಂದಿನ ಜನ್ಮದಲ್ಲಿ ಶಿವನಿಂದ ವರವನ್ನ ಪಡೆದ ಕಾರಣ ಆಕೆ ಪಂಚ ಪಾಂಡವರವನ್ನ ವಿವಾಹ ಆಗಬೇಕಾಯಿತು ಎಂದು ಹೇಳುತ್ತಾರೆ ಮತ್ತು ಇದು ಶಿವನ ಅನುಗ್ರಹ ಆದ್ದರಿಂದ ಚಿಂತಿಸುವುದು ಸರಿ ಅಲ್ಲ ಎಂದು ಹೇಳಿದರು ವ್ಯಾಸ ಮುನಿಗಳು. ವ್ಯಾಸ ಮುನಿಗಳ ಮಾತನ್ನ ಕೇಳಿದ ದ್ರುಪದ ತನ್ನ ಮಗಳನ್ನ ಪಂಚ ಪಾಂಡವರಿಗೆ ಕೊಟ್ಟು ವಿವಾಹವನ್ನ ಮಾಡುತ್ತಾನೆ, ಸ್ನೇಹಿತರೆ ಇದೆ ನೋಡಿ ಪಂಚ ಪಾಂಡವರು ಮತ್ತು ದ್ರೌಪದಿಗೆ ವಿವಾಹದ ಕಥೆ, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Draupadi marriage

Please follow and like us:
error0
http://karnatakatoday.in/wp-content/uploads/2019/12/Draupadi-marriage-1024x576.jpghttp://karnatakatoday.in/wp-content/uploads/2019/12/Draupadi-marriage-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಸ್ನೇಹಿತರೆ ಮಹಾಭಾರತ ಅನ್ನುವುದು ಹಿಂದೂಗಳ ಒಂದು ಪವಿತ್ರ ಗ್ರಂಥ ಮತ್ತು ಇಲ್ಲಿ ಹತ್ತಾರು ಸಂಪುಟಗಳು ಇವೆ, ನೂರಾರು ಕಥೆಗಳಿವೆ, ಸಾವಿರಾರು ಪಾತ್ರಗಳಿವೆ ಮತ್ತು ಒಂದೊಂದು ಪಾತ್ರಕ್ಕೆ ಅದರದ್ದೇ ಗತ್ತು ಮತ್ತು ಗಾಂಭೀರ್ಯವಾಗಿದೆ. ಸ್ನೇಹಿತರೆ ಇನ್ನು ಮಹಾಭಾರತದಲ್ಲಿ ಬರುವ ಮುಖ್ಯವಾದ ಪಾತ್ರಗಳಲ್ಲಿ ದ್ರೌಪದಿ ಕೂಡ ಒಬ್ಬಳು, ಮಹಾಭಾರತದಲ್ಲಿ ದ್ರೌಪದಿಯ ಪಾತ್ರ ಎಲ್ಲರಿಗಿಂದ ಮುಖ್ಯವಾದದ್ದು ಕೂಡ ಆಗಿದೆ. ಇನ್ನು ಪ್ರತಿಯೊಬ್ಬ ಜನರಲ್ಲೂ ಕಾಡುವ ಏಕೈಕ ಪ್ರಶ್ನೆ ಏನು ಅಂದರೆ ದ್ರೌಪದಿ ಯಾಕೆ...Film | Devotional | Cricket | Health | India