ಕೊನೆಗೂ ಮಂಡ್ಯದಲ್ಲಿ ನಾಲೆಗೆ ಉರುಳಿದ ಬಸ್ ದುರಂತಕ್ಕೆ ಕಾರಣ ಇದೀಗ ಹೊರಬಿದ್ದಿದೆ. ಹೌದು ಈ ದುರಂತದಲ್ಲಿ 30 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು ಇದರಲ್ಲಿ ಒಂದೇ ಕುಟುಂಬದ ಹಲವು ಮಂದಿ ಕೂಡ ಇದ್ದರು. ದೇಶದ ಗಣ್ಯಾತಿ ಗಣ್ಯರು ಈ ದುರ್ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದರು. ಅಂದಿನ ಪ್ರತ್ಯಕ್ಷ ಸಾಕ್ಷಿ ಹೇಳುವ ಪ್ರಕಾರ ಶನಿವಾರ ಆಗಿದ್ದರಿಂದ ನಾವೆಲ್ಲರೂ ಶಾಲೆ ಮುಗಿಸಿ ಮನೆಗೆ ಹೋಗಲು ಬಸ್‌ ಹತ್ತಿದೆವು. ರಸ್ತೆಯಲ್ಲಿ ಬಸ್‌ ಇದ್ದಕ್ಕಿಂದತೆಯೇ ಅಡ್ಡಾದಿಡ್ಡಿ ಸಾಗಲು ಆರಂಭಿಸಿತು. 10-15 ಸೆಕೆಂಡುಗಳಲ್ಲಿ ಬಸ್ ನಾಲೆಯ ಕಡೆಗೆ ವಾಲಿತು. ಎಲ್ಲರೂ ಕಿರುಚಾಡಲು ಆರಂಭಿಸಿದರು. ನೀರು ಬಸ್‌ ಒಳಗೆ ಬರುತ್ತಿದ್ದಂತೆಯೇ ನಾನು ಕಿಟಕಿಯಿಂದ ಹೊರ ಬಂದು ಈಜಿ ದಡ ಸೇರಿದೆ ಎಂದು ಹೇಳಿದ್ದರು.

ಆದರೆ ಈಗ ಬಸ್ ಡ್ರೈವರ್ ಶಿವಣ್ಣ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದಾರೆ. ನಾಳೆಯ ಪಕ್ಕ ಬರುತ್ತಿದ್ದಾಗ ಬಸ್ ನನ್ನ ನಿಯಂತ್ರಣ ತಪ್ಪಿತ್ತು ಅಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಮುಂದಾದೆ ಆದರೆ ನನ್ನ ನಿಯಂತ್ರಣಕ್ಕೆ ಸಿಗದೇ ಬಸ್ ನಾಲೆಗೆ ಜಾರಿತು ಎಂದರು. ನನಗೆ ಈಜಲು ಕೂಡ ಬರುತ್ತಿರಲಿಲ್ಲ ಸ್ಥಳೀಯರಾದ ಅಂಕೇಗೌಡ ಎನ್ನುವವರು ನನ್ನನು ರಕ್ಷಿಸಿದರು.ಸುಸ್ತಾಗಿದ್ದ ನನ್ನನ್ನು ಜಮೀನಿನಲ್ಲಿ ಕುಳ್ಳಿಸಿದ್ದರು ಎಂದು ವಿಚಾರಣೆಯಲ್ಲಿ ಹೇಳಿದ್ದಾನೆ.

ನಂತರ ತಾನು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದೆ ಎಂದು ಕೂಡ ವಿಚಾರಣೆಯಲ್ಲಿ ಹೇಳಿದ್ದಾರೆ. ಅಪಘಾತ ನಡೆದ ದಿನದಿಂದ ಡ್ರೈವರ್ ಶಿವಣ್ಣ ಕಾಣೆಯಾಗಿದ್ದರು ಕೊನೆಗೂ ಪೊಲೀಸರು ಇವರನ್ನು ಪತ್ತೆ ಮಾಡಿ ತನಿಖೆ ಆರಂಭಿಸಿ ಇದೀಗ ಸತ್ಯ ಬಾಯಿ ಬಿಡಿಸಿದ್ದಾರೆ.  ಇಷ್ಟೇ ಅಲ್ಲದೆ ಬಸ್‌ ದುರಂತ ಅರ್ಧ ಗಂಟೆ ತಡವಾಗಿ ನಡೆದಿದ್ದರೆ ವದೆಸಮುದ್ರ, ಚಿಕ್ಕಕೊಪ್ಪಲು ಗ್ರಾಮದ ಶಾಲಾ ವಿದ್ಯಾರ್ಥಿಗಳ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುತ್ತಿತ್ತು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದರು.

ಶನಿವಾರ ಆಗಿದ್ದರಿಂದ ಶಾಲಾ ಮಕ್ಕಳು ಬಸ್‌ಗೆ ಏರುತ್ತಾರೆ ಎನ್ನುವ ಕಾರಣಕ್ಕೆ ಬಸ್‌ ಚಾಲಕ ಬೇಗನೆ ಬಂದುಬಿಟ್ಟಿದ್ದಾನೆ. ಒಂದು ವೇಳೆ ಇನ್ನೂ ಅರ್ಧಗಂಟೆ ತಡವಾಗಿ ಬಂದಿದ್ದರೆ ಚಿಕ್ಕಬ್ಯಾಡರಹಳ್ಳಿ ಪ್ರೌಢಶಾಲೆ ಹಾಗೂ ಕನಗನಮರಡಿ ಸರಕಾರಿ ಪ್ರಾಥಮಿಕ ಶಾಲೆಯ ಇನ್ನಷ್ಟು ಮಕ್ಕಳು ಬಸ್‌ ಏರುತ್ತಿದ್ದರು.

 

Please follow and like us:
0
http://karnatakatoday.in/wp-content/uploads/2018/12/MANDYA-1024x576.pnghttp://karnatakatoday.in/wp-content/uploads/2018/12/MANDYA-150x104.pngKarnataka Today's Newsಅಂಕಣಆಟೋಕೊನೆಗೂ ಮಂಡ್ಯದಲ್ಲಿ ನಾಲೆಗೆ ಉರುಳಿದ ಬಸ್ ದುರಂತಕ್ಕೆ ಕಾರಣ ಇದೀಗ ಹೊರಬಿದ್ದಿದೆ. ಹೌದು ಈ ದುರಂತದಲ್ಲಿ 30 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು ಇದರಲ್ಲಿ ಒಂದೇ ಕುಟುಂಬದ ಹಲವು ಮಂದಿ ಕೂಡ ಇದ್ದರು. ದೇಶದ ಗಣ್ಯಾತಿ ಗಣ್ಯರು ಈ ದುರ್ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದರು. ಅಂದಿನ ಪ್ರತ್ಯಕ್ಷ ಸಾಕ್ಷಿ ಹೇಳುವ ಪ್ರಕಾರ ಶನಿವಾರ ಆಗಿದ್ದರಿಂದ ನಾವೆಲ್ಲರೂ ಶಾಲೆ ಮುಗಿಸಿ ಮನೆಗೆ ಹೋಗಲು ಬಸ್‌ ಹತ್ತಿದೆವು. ರಸ್ತೆಯಲ್ಲಿ ಬಸ್‌ ಇದ್ದಕ್ಕಿಂದತೆಯೇ ಅಡ್ಡಾದಿಡ್ಡಿ...Kannada News