ಪದೇ ಪದೇ ಗಡಿಯಲ್ಲಿ ಅಕ್ರಮವಾಗಿ ನುಸುಳಿ ಕದನ ವಿರಾಮ ಉಲ್ಲಂಘಿಸಿ ಹಾಗು ಉಗ್ರರಿಗೆ ಬೆನ್ನೆಲುಬಾಗಿ ನಿಂತ ಪಾಕಿಸ್ತಾನಕ್ಕೆ ಕೇಂದ್ರದಲ್ಲಿ ಬಂದಿರುವ ಈ ಸರ್ಕಾರ ಭಾರಿ ಹೊಡೆತ ನೀಡುತ್ತಾ ಬಂದಿದೆ. ಹೌದು ಇದೀಗ ಆರ್ಟಿಕಲ್ 370 ರದ್ದಾದ ಬಳಿಕವಂತೂ ಪಾಕಿಸ್ತಾನದ ಪರಿಸ್ಥಿತಿ ಹೇಳತೀರದು. ಹೌದು ಕೇಂದ್ರ ಈಗ ಪಾಕಿಸ್ತಾನದ ಜೊತೆ ಆರ್ಥಿಕ ಕ್ರಾಂತಿಗೆ ಮುಂದಾಗಿದೆ ಎನ್ನಬಹುದು. ಭಾರತದ ಜೊತೆಗೆ ಯಾವ ವ್ಯವಹ ಕೂಡ ನಡೆಸಲ್ಲ ಎಂದು ಪಾಕ್ ಹೇಳಿದೆ, ಭಾರತ ಕೂಡ ಆಮದು ಸುಂಕದ ಮೇಲೆ ಹೆಚ್ಚು ತೆರಿಗೆ ಹೇರಿದೆ. ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ 370 ಅನ್ನು ತೆಗೆದುಹಾಕಿದ್ದರಿಂದ ಪಾಕಿಸ್ತಾನ ಆಘಾತಕ್ಕೊಳಗಾಗಿದೆ.

ಈ ಕೋಪದಲ್ಲಿ ಅವರು ಭಾರತದೊಂದಿಗಿನ ವ್ಯವಹಾರ ಸಂಬಂಧವನ್ನು ಸ್ಥಗಿತಗೊಳಿಸಿದ್ದಾರೆ. ಆದರೆ, ಈ ನಿರ್ಧಾರ ಪಾಕಿಸ್ತಾನದಲ್ಲಿ ಭೀತಿ ಸೃಷ್ಟಿಸಿದೆ. ಭಾರತೀಯ ರೈತರು ಮತ್ತು ವ್ಯಾಪಾರಿಗಳು ತಮ್ಮ ಸರಕುಗಳನ್ನು ಪಾಕಿಸ್ತಾನಕ್ಕೆ ರಫ್ತು ಮಾಡಲು ನಿರಾಕರಿಸಿದರು. ಅಲ್ಲದೆ, ಸರ್ಕಾರವು ಕಸ್ಟಮ್ ಸುಂಕವನ್ನು 200 ಪ್ರತಿಶತ ಹೆಚ್ಚಿಸಿದೆ.

ಇದರಿಂದಾಗಿ ಪಾಕಿಸ್ತಾನದಲ್ಲಿ ಟೊಮ್ಯಾಟೋ ಬೆಲೆ ಪ್ರತಿ ಕೆಜಿಗೆ 300 ರೂಪಾಯಿಗಳನ್ನು ತಲುಪಿದೆ. ಭಾರತದ ಜೊತೆಗಿನ ವ್ಯಾಪಾರ ಸ್ಥಗಿತಗೊಳಿಸಿರುವುದರಿಂದ ಪಾಕಿಸ್ತಾನದಲ್ಲಿ ಕೇವಲ ಟೊಮ್ಯಾಟೋ ಬೆಲೆ ಮಾತ್ರ ಗಗನಕ್ಕೇರಿಲ್ಲ. ಜೊತೆಗೆ ಆಲೂಗಡ್ಡೆ, ಈರುಳ್ಳಿ ಸೇರಿದಂತೆ ಹೆಚ್ಚಿನ ಹಸಿರು ತರಕಾರಿಗಳು ಅಲ್ಲಿ ದುಬಾರಿಯಾಗಿದೆ. ಸಾಮಾನ್ಯವಾಗಿ, ತರಕಾರಿಗಳ ಬೆಲೆ ದ್ವಿಗುಣಗೊಂಡಿದೆ. ಪಾಕಿಸ್ತಾನದ ತರಕಾರಿ ಮಾರುಕಟ್ಟೆಯಲ್ಲೂ ಆಲೂಗಡ್ಡೆ ಬೆಲೆ ಹೆಚ್ಚಾಗಿದೆ.

370 ನೇ ವಿಧಿ ಸಂಬಂಧಿತ ಭಾರತದ ನಿರ್ಧಾರವನ್ನು ವಿರೋಧಿಸಿ ಪಾಕಿಸ್ತಾನ ಕೈಗೊಂಡಿರುವ ಹಲವು ಇಂತಹ ನಿರ್ಧಾರಗಳಿಂದ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದೆ. ಆದರೆ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿಲ್ಲ. ಇದರಿಂದಾಗಿ ತಾನೇ ತೋಡಿಕೊಂಡ ಹಳ್ಳಕ್ಕೆ ತಾನೇ ಬಿದ್ದಂತಾಗಿದೆ ಪಾಕಿಸ್ತಾನದ ಪರಿಸ್ಥಿತಿ. ಇಷ್ಟೇ ಅಲ್ಲದೆ ಚಿನ್ನದ ಬೆಲೆ ಕೂಡ ಗಗನಕ್ಕೇರಿದೆ.

ಭಾರತದಲ್ಲಿ ಚಿನ್ನದ ದರ ಶುಕ್ರವಾರದಂದು ಬರೋಬ್ಬರಿ 38 ಸಾವಿರ ರೂಪಾಯಿಗಳ ಗಡಿ ದಾಟಿದ್ದು, 10 ಗ್ರಾಂ ಚಿನ್ನದ ಬೆಲೆ 38,470 ರೂಪಾಯಿ ನಂತೆ ವಹಿವಾಟು ನಡೆಸಿತ್ತು. ಇನ್ನು ಪಾಕಿಸ್ತಾನದಲ್ಲಿ 10 ಗ್ರಾಂ ಚಿನ್ನದ ಬೆಲೆ 86,250 ರು ಗೆ ಬಂದು ನಿಂತಿದೆ. ಭಾರತದಲ್ಲಿನ ಚಿನ್ನದ ದರ ಡಬ್ಬಲ್ ಎನ್ನಬಹುದು. ಸಾಲದ ಭಾರದಿಂದ ಕುಸಿಯುತ್ತಿರುವ ಪಾಕಿಸ್ತಾನ ಈಗಾಗಲೇ ಪೆಟ್ರೋಲ್ ದರವನ್ನು ಏರಿಕೆ ಮಾಡಿದ್ದು, 117 ರು ಪ್ರತಿ ಲೀಟರ್ ಎಂದು ನಿಗದಿಪಡಿಸಿದೆ.

Please follow and like us:
0
http://karnatakatoday.in/wp-content/uploads/2019/08/economy-falls-1024x576.jpghttp://karnatakatoday.in/wp-content/uploads/2019/08/economy-falls-150x104.jpgKarnataka Today's Newsಅಂಕಣಪದೇ ಪದೇ ಗಡಿಯಲ್ಲಿ ಅಕ್ರಮವಾಗಿ ನುಸುಳಿ ಕದನ ವಿರಾಮ ಉಲ್ಲಂಘಿಸಿ ಹಾಗು ಉಗ್ರರಿಗೆ ಬೆನ್ನೆಲುಬಾಗಿ ನಿಂತ ಪಾಕಿಸ್ತಾನಕ್ಕೆ ಕೇಂದ್ರದಲ್ಲಿ ಬಂದಿರುವ ಈ ಸರ್ಕಾರ ಭಾರಿ ಹೊಡೆತ ನೀಡುತ್ತಾ ಬಂದಿದೆ. ಹೌದು ಇದೀಗ ಆರ್ಟಿಕಲ್ 370 ರದ್ದಾದ ಬಳಿಕವಂತೂ ಪಾಕಿಸ್ತಾನದ ಪರಿಸ್ಥಿತಿ ಹೇಳತೀರದು. ಹೌದು ಕೇಂದ್ರ ಈಗ ಪಾಕಿಸ್ತಾನದ ಜೊತೆ ಆರ್ಥಿಕ ಕ್ರಾಂತಿಗೆ ಮುಂದಾಗಿದೆ ಎನ್ನಬಹುದು. ಭಾರತದ ಜೊತೆಗೆ ಯಾವ ವ್ಯವಹ ಕೂಡ ನಡೆಸಲ್ಲ ಎಂದು ಪಾಕ್ ಹೇಳಿದೆ, ಭಾರತ...Kannada News